ಅಧಿಕಾರ ಸಂಪತ್ತಿನ ಅತಿಯಾದ ಮೋಹದಿಂದ ಮಾನಸಿಕ ಕುಬ್ಜತೆ ಉಂಟಾಗುತ್ತದೆ : ಬ್ರಹ್ಮಾನಂದ ಶ್ರೀ

Advt_NewsUnder_1
Advt_NewsUnder_1
Advt_NewsUnder_1

lokanadu 1ಬೆಳ್ತಂಗಡಿ: ಶ್ರದ್ಧಾ ಕೇಂದ್ರಗಳು ಧರ್ಮ ಜಾಗೃತಿ ಮತ್ತು ಉದ್ದೀಪನದ ಕೆಲಸ ಮಾಡುತ್ತದೆ. ಸತ್ಯಧರ್ಮದ ಹಾದಿಯ ಬದುಕು ನಮ್ಮದಾಗಬೇಕಾಗಿದ್ದು ಅಧಿಕಾರ ಮತ್ತು ಸಂಪತ್ತಿನ ಹಿಂದೆ ಅತಿಮೋಹದಿಂದ ಹೋದರೆ ಮಾನಸಿಕ ಕುಬ್ಜತೆಯುಂಟಾಗುತ್ತದೆ ಎಂದು ಶ್ರೀರಾಮ ಕ್ಷೇತ್ರದ ನಿತ್ಯಾನಂದ ನಗರ ಇಲ್ಲಿನ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಕಲ್ಮಂಜ ಗ್ರಾಮದ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ, ಸಿರಿ ಜಾತ್ರೆ ಮಹೋತ್ಸವ, ಶ್ರೀ ನಾಗದರ್ಶನ, ಆಶ್ಲೇಷ ಬಲಿ, ಧರ್ಮ ದೈವಗಳ ನರ್ತನ ಸೇವೆ ಕಾರ್ಯಕ್ರಮದ ನಿಮಿತ್ತ ಎ. 11 ರಂದು ನಡೆದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸರ್ವರಿಗೂ ಹಿತ ಮಾಡುವುದೇ ಧರ್ಮ. ಸಾಮಾಜಿಕ ಬದುಕಿನಲ್ಲಿರು ವವರು ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕಿದೆ. ಅವರನ್ನು ಸಮಾಜ ಸೂಕ್ಷ್ಮವಾಗಿ ಗಮನಿಸಿ ಬೆಂಬತ್ತುವ ಕಾರ್ಯ ಮಾಡುತ್ತಿದೆ ಎಂಬ ಅರಿವಿರಬೇಕಿದೆ. ಸಂಪತ್ತು ಹಾಗೂ ಲೌಖಿಕ ವ್ಯಾಮೋಹಗಳನ್ನು ತೊರೆದು ಆಧ್ಯಾತ್ಮಿಕತೆ ಹಾದಿಯಲ್ಲಿ ದೇವರನ್ನು ಪ್ರೀತಿಸಲು ಪ್ರಾರಂಭಿಸಬೇಕು. ಭಗವಂತನ ಮೇಲಿನ ಭಕ್ತಿಯಲ್ಲಿ ತಾದಾತ್ಮಕತೆ, ತಲ್ಲೀನತೆ, ವ್ಯಾಕುಲತೆ ಬೇಕು. ಪ್ರಕೃತಿಯೇ ನಮಗೆ ಯಜಮಾನ. ಜೀವನದ ವ್ಯವಹಾರಗಳನ್ನು ನಿಷ್ಠೆಯಿಂದ ಪಾಲಿಸಿದರೆ ಆ ಮೂಲಕವೇ ಸ್ವರ್ಗ ಸುಖವನ್ನು ಪಡೆಯಬಹುದು ಎಂದರು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ವಹಿಸಿದ್ದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ, ಜಿ.ಪಂ. ಲಾಯಿಲ ಕ್ಷೇತ್ರದ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸದಸ್ಯ ಶಶಿಧರ ಎಂ. ಕಲ್ಮಂಜ, ಇವರು ಉಪಸ್ಥಿತರಿದ್ದರು.
ಸನ್ಮಾನ, ಪುರಸ್ಕಾರ :
ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಮಾಚಾರು ಗೋಪಾಲ ನಾಯ್ಕ ಮತ್ತು ನಾಟಿ ಪಂಡಿತ ಚನನ ಗೌಡ ಬಿಲ್ಲರೋಡಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಪ್ರತಿಭೆಗಳಾದ ಅರ್ಚನಾ (ಕಬಡ್ಡಿ), ರಮ್ಯಾ (ಟೇಬಲ್ ಟೆನ್ನಿಸ್), ನಿಶ್ಮಿತಾ (ಜಾವೆಲಿನ್ ಎಸೆತ) ಇವರನ್ನು ಪುರಸ್ಕರಿಸಲಾಯಿತು. ಅನ್ನಸಂತರ್ಪಣೆ ಸಹಿತ ಪ್ರಮುಖ
ಸೇವಾಕರ್ತರಿಗೆ ಸ್ಮರಣಿಕೆ ನೀಡಲಾಯಿತು. ಗುರುರಾಜ್, ಬೇಬಿ ಉಮೇಶ್ ಗೌಡ ಸನ್ಮಾನ ಪತ್ರ ವಾಚನ ಮಾಡಿದರು.
ವೇದಮೂರ್ತಿ ಬ್ರಹ್ಮಶ್ರೀ ಮುಂಡೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಉಜಿರೆ ವಿಜಯರಾಘವ ಪಡುವೆಟ್ನಾಯ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಅರ್ಚಕರಾದ ಕೃಷ್ಣ ಹೊಳ್ಳ. ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಯಶೋಧರ ಗೌಡ ಕೊಡ್ಡೋಲು, ಬೇಬಿ ಉಮೇಶ್, ಪ್ರವೀಣ್ ವಿ.ಜಿ, ಗಿರಿಯಪ್ಪ ಪೂಜಾರಿ ಬ್ರಹ್ಮಸ, ಸುಶೀಲಾ ನಾಯ್ಕ್, ಮಮತಾ ಸುಭಾಷ್, ಸಹಿತ ವಿಲಯದವರು, ಊರ ಹತ್ತು ಸಮಸ್ತರು ಭಾಗವಹಿಸಿದ್ದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ನವೀನ್ ಶೆಟ್ಟಿ ಗುತ್ತಿಲಾರಬೆಟ್ಟು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಡಿಯೂರು ಸಂಸ್ಥಾನದ ಸಂಪನ್ಮೂಲ ವ್ಯಕ್ತಿ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಗುರುರಾಜ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.