ನಟರಾಜ ನೃತ್ಯ ಶಾಲೆ ಪ್ರಥಮ ವಾರ್ಷಿಕೋತ್ಸವ ಗೀತ- ನೃತ್ಯ ಸಮರ್ಪಣೆ ಕಾರ್ಯಕ್ರಮ

nruthyaಬೆಳ್ತಂಗಡಿ: ನಟರಾಜ ನೃತ್ಯ ಶಾಲೆ ಬೆಳ್ತಂಗಡಿ, ಸಹಜಗುಣಗಾನ ಸಂಗೀತ ವಿದ್ಯಾಲಯ ಹಾಗೂ ಶ್ರೀ ಧ. ಮಂಜುನಾಥೇಶ್ವರ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಶಾಲಾ ಕ್ಯಾಂಪಸ್‌ನಲ್ಲಿ ಏ. 10 ರಂದು ನಡೆದ ಗೀತ-ನೃತ್ಯ ಸಮರ್ಪಣೆ ಕಾರ್ಯಕ್ರಮವನ್ನು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ ಉದ್ಘಾಟಿಸಿದರು.
ಅಧ್ಯಕ್ಷತೆ ಎಸ್‌ಡಿಎಂ ಹಿ. ಪ್ರಾ ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ವಹಿಸಿದ್ದರು. ಅತಿಥಿಯಾಗಿದ್ದ ನ್ಯಾಯವಾದಿ ಶಿವಕುಮಾರ್ ಮತ್ತು ನಂದಿನಿ ಕ್ಯಾಂಟೀನ್‌ನ ಅರೆಕ್ಕಲ್ ರಾಮಚಂದ್ರ ಭಟ್ ಅವರು ಸಂದರ್ಭೋಚಿತವಾಗಿ ಶುಭ ಕೋರಿದರು.
ವೇದಿಕೆಯಲ್ಲಿದ್ದ ನಟರಾಜ ನೃತ್ಯ ಶಾಲೆಯ ವಿದುಷಿ ವಿದ್ಯಾ ಠೋಸರ್ ಅವರು ಅತಿಥಿಗಳನ್ನು ಬರಮಾಡಿಕೊಂಡು ಗೌರವಿಸಿದರು. ನ್ಯಾಯವಾದಿ ಶೈಲೇಶ್ ಠೋಸರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆಯಲ್ಲಿ ಶ್ರೀಧರ ಜಿ ಭಿಡೆಯವರ ಧರ್ಮಪತ್ನಿ ಮಾಲಿನಿ ಎಸ್ ಭಿಡೆ ಉಪಸ್ಥಿತರಿದ್ದರು. ಸಂಸ್ಥೆ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಸಕಾಲದಲ್ಲಿ ವಸ್ತ್ರಗಳ ವಿನ್ಯಾಸದಲ್ಲಿ ಸಹಕರಿಸಿದ ದಿಯಾ ಮತ್ತು ಪ್ರಿಯದರ್ಶಿನಿ ಹಾಗೂ ಮುಖವರ್ಣಿಕೆ ಸಹಕಾರಕ್ಕಾಗಿ ವೀಣಾ ಶೆಟ್ಟಿ ಅವರನ್ನು ಪುರಸ್ಕರಿಸಲಾಯಿತು. ಸಹಜಗುಣಗಾನ ಸಂಗೀತ ವಿದ್ಯಾಲಯದ ಎ.ಡಿ ಸುರೇಶ್ ಧನ್ಯವಾದವಿತ್ತರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಪ್ರದರ್ಶನ ಪ್ರಸ್ತುತಿಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.