ಅಸ್ಪೃಶ್ಯತೆ ಅನ್ನುವುದು ಬರೇ ಶಾಪವಲ್ಲ ಅದು ಪಾಪ – ಕರಿಂಜೆ ಶ್ರೀ

Advt_NewsUnder_1
Advt_NewsUnder_1
Advt_NewsUnder_1

karinje

karinje1ಕರಿಂಜೆ ಶ್ರೀ – ಹಿಂದು ಧರ್ಮವನ್ನು ವಿಭಜನೆ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. ಹಿಂದುಗಳಾದ ನಾವೆಲ್ಲರೂ ಒಂದೇ ಎಂಬ ಭಾವನೆ ಬರಬೇಕಾದರೆ ನಮ್ಮಲ್ಲಿರುವ ಮೇಲು ಕೀಳು ಭಾವನೆಗಳನ್ನು ಮೊದಲು ತೊರೆಯಬೇಕು ಅದಕ್ಕಾಗಿ ಇವತ್ತು ಧರ್ಮ ಜಾಗರಣದ ಧರ್ಮರಕ್ಷಾ ಸಮಿತಿಯ ನೇತೃತ್ವದಲ್ಲಿ ನಮ್ಮದೇ ಬಂಧುಗಳ ಮನೆಗಳಿಗೆ ಪಾದಯಾತ್ರೆ ಮಾಡಿದ್ದೇನೆ. ಅಸ್ಪೃಶ್ಯತೆಯನ್ನುವುದು ಬರೇ ಶಾಪವಲ್ಲ ಅದು ಪಾಪ. ಈ ತಾರತಮ್ಯವನ್ನು ದೂರ ಮಾಡಲು ನಾನು ನಿಮ್ಮೊಡನೆ ಸದಾ ಸಿದ್ಧನಿದ್ದೇನೆ. ಪ್ರಾಸ್ತವಿಕವಾಗಿ ಮಾತನಾಡಿದ ಧರ್ಮ ಜಾಗರಣದ ವಿಭಾಗ ಸಂಯೋಜಕ ದಿನಕರ ಅದೇಲು ಧರ್ಮ ಜಾಗರಣದ ಸಂಘಟನೆಯ ಅಡಿಯಲ್ಲಿ ನಡೆಯುತ್ತಿರುವ ಈ ಪಾದಯಾತ್ರೆ ಕಾರ್ಯಕ್ರಮಗಳು ರಾಜಕೀಯ ರಹಿತವಾಗಿದ್ದು ನಿಜವಾದ ಕಾಳಜಿಯಿಂದ ಅಸ್ಪೃಶ್ಯತೆ ಮತ್ತು ಮತಾಂತರದ ವಿರುದ್ಧ ಹೋರಾಟ ಹಾಗೂ ಜನಜಾಗೃತಿಯನ್ನು ನಡೆಸುತ್ತಿದೆ. ಊರಿನ ದೇವಸ್ಥಾನದ ಬ್ರಹ್ಮಕಲಶಕ್ಕಿಂತ ಮನುಷ್ಯನ ಮನಸ್ಸಿಗೆ ಬ್ರಹ್ಮಕಲಶಾಭಿಷೇಕ ಪ್ರಮುಖವಾಗಿ ಆಗಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬಾಬು ಎರ್ಮೆತ್ತೋಡಿ ಯವರು ಸಮಾನತೆಯನ್ನುವುದು ಬರೇ ಮಾತಿಗೆ ಮೀಸಲಾಗದೆ ಕೃತಿಯಲ್ಲಿ ಬರಬೇಕಾಗಿದೆ. ಆ ಕಾರ್ಯವನ್ನು ಧರ್ಮಜಾಗರಣ ಮಾಡುತ್ತಿದೆ ಎಂದರು. ಕುಂಟಾರು ರವೀಶ್ ತಂತ್ರಿಗಳು ಕೇರಳದ ಕೆಲವು ಭಾಗದ ಕಾಲೋನಿಗಳಲ್ಲಿ ತಮ್ಮ ನಿರಂತರ ಸಂಪರ್ಕದಿಂದ ಆಗಿರುವ ಬದಲಾವಣೆಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ಪ್ರಭಾಕರ ಉಪ್ಪಡ್ಕ, ವಿಜಯ ಗೌಡ ವೇಣೂರು ಸದಾಶಿವ ಕರಂಬಾರು ಉಪಸ್ಥಿತರಿದ್ದರು.
ಧರ್ಮ ರಕ್ಷಾ ಸಮಿತಿ ಕರಂಬಾರು ಇದರ ಅಧ್ಯಕ್ಷ ನವೀನ್ ಸಾಮಾನಿ ಸ್ವಾಗತಿಸಿ, ಪ್ರಶಾಂತ್ ಧನ್ಯವಾದವಿತ್ತರು. ತಾಲೂಕು ಸಂಯೋಜಕ ಸತೀಶ್ ಶಿರ್ಲಾಲು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.