ಉಜಿರೆ ಜೇಸಿಐ ಸಕ್ರೀಯ ಸದಸ್ಯೆ ಸಂಧ್ಯಾ ಬಾವಿಗೆ ಹಾರಿ ಆತ್ಮಹತ್ಯೆ

Advt_NewsUnder_1
Advt_NewsUnder_1
Advt_NewsUnder_1

ujire susidಉಜಿರೆ: ಜೇಸಿಐ ಉಜಿರೆಯ ಸಕ್ರೀಯ ಸದಸ್ಯೆಯಾಗಿದ್ದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಮಾಜಿ ಉದ್ಯೋಗಿ, ನವ ವಿವಾಹಿತೆ ಸಂಧ್ಯಾ ಜೈನ್ ಅವರು ಶಿರ್ತಾಡಿಯ ತನ್ನ ಪತಿ ಮನೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಅವರನ್ನು ಮೂಡಬಿದ್ರೆ ಸನಿಹದ ಶಿರ್ತಾಡಿ ಅಳಿಯೂರು ಎಂಬಲ್ಲಿಗೆ ವಿವಾಹ ಮಾಡಿಕೊಡಲಾಗಿತ್ತು. ಅವರ ಪತಿ ಮಂಗಳೂರಿನಲ್ಲಿ ನ್ಯಾಯವಾದಿಯಾಗಿದ್ದಾರೆ.
ಸಂಧ್ಯಾ ಅವರು ಶಿವಮೊಗ್ಗ ಜಿಲ್ಲೆ ಸಾಗರದವರಾಗಿದ್ದು, ಉತ್ತಮ ಕಾರ್ಯಕ್ರಮ ಉದ್ಘೋಷಕಿಯಾಗಿ, ಜೇಸಿಐ ಉಜಿರೆಯ ಸಂಘಟನೆಯಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು. ಕುಟುಂಬದವರು ಹೇಳುವಂತೆ ಏ. 9 ರಂದು ಮಹಾವೀರ ಜಯಂತಿಯ ಪ್ರಯುಕ್ತ ಪತಿಯೊಡಗೂಡಿ ಬಸದಿಗೆ ಹೋಗಿದ್ದಲ್ಲದೆ ದೇವರಿಗೆ ಅಭಿಷೇಕವನ್ನೂ ಮಾಡಿ ಖುಷಿ ಖುಷಿಯಾಗಿಯೇ ಇದ್ದರು. ಅಲ್ಲದೆ ಪತಿಯ ಬಗ್ಗೆ ತನ್ನ ಮಿತ್ರವರ್ಗದವರ ಬಳಿಯೆಲ್ಲಾ ಸಂತೋಷದ ಮಾತುಗಳನ್ನು ಆಡುತ್ತಿದ್ದರೆನ್ನಲಾಗಿದೆ. ಅಲ್ಲದೆ ಆಕೆಯ ಸಹೋದರಿಗೆ ಕೂಡ ಇತ್ತೀಚೆಗೆ ವಿವಾಹವಾಗಿದ್ದು, ಸಂಧ್ಯಾ ಅವರ ಪತಿ ಮನೆಯಲ್ಲಿ ಔತಣಕೂಟ ಕೂಡ ಏರ್ಪಾಟು ಮಾಡಿದ್ದರು. ಆದರೆ ಆಕೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ಬಗ್ಗೆ ಭಾರೀ ಕುತೂಹಲ ಕೆರಳಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.