ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶಾಂತಿನಾಥ ಸ್ವಾಮಿ ಕಲ್ಲು ಬಸದಿಗೆ ಶನಿವಾರ ರಾತ್ರಿ(ಎ.8)ರಂದು ನುಗ್ಗಿದ ದರೋಡೆಕೋರರು ಕಾಣಿಕೆ ಡಬ್ಬಿಗಳನ್ನು ದೋಚಿದ್ದಾರೆ. ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ದೇವಸ್ಥಾನಕ್ಕೆ ಲಗ್ಗೆಯಿಟ್ಟ ಕಳ್ಳರು 4 ಗಂಟೆಯ ತನಕ ತಮ್ಮ ಕೈ ಚಳಕ ಪ್ರದರ್ಶಿಸಿದ್ದು, ಅವರ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೇವಸ್ಥಾನದಿಂದ ಕಂಪ್ಯೂಟರ್ ಸೇರಿ ಸುಮಾರು 35,000 ಹಾಗೂ ಬಸದಿಯಿಂದ ರೂ. 20,000 ನಗದನ್ನು ದೋಚಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ವೇಣೂರು ಠಾಣಾ ಪೊಲೀಸ್ ಉಪ ನಿರೀಕ್ಷಕ ಕೊರಗಪ್ಪ ನಾಯ್ಕ, ಎಎಸ್ಐ ಶೀನಪ್ಪ ಗೌಡ ಹಾಗೂ ಸಿಬ್ಬಂದಿ, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿ ಆಗಮಿಸಿ ಆಗಮಿಸಿ ತನಿಖೆ ನಡೆಸಿದ್ದಾರೆ.