ಶಿಬಾಜೆಯಲ್ಲಿ ಸಂಪನ್ನಗೊಂಡ ಶ್ರೀನಿವಾಸ ಕಲ್ಯಾಣೋತ್ಸವ

Advt_NewsUnder_1
Advt_NewsUnder_1

shibhaje

shibhaje1

shibhaje2ಶಿಬಾಜೆ: ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅರಸಿನಮಕ್ಕಿ ಇದರ ವತಿಯಿಂದ ಗುರು ಹಿರಿಯರ ಹಾಗೂ ದೇವತಾ ಪ್ರೇರಣೆಯಿಂದ ಲೋಕಲ್ಯಾಣಾರ್ಥವಾಗಿ ಶಿಶಿಲ, ಶಿಬಾಜೆ, ಹತ್ಯಡ್ಯ, ರೆಖ್ಯ ಮತ್ತು ಕಳೆಂಜ ಗ್ರಾಮ ವ್ಯಾಪ್ತಿಯ ಭಕ್ತವೃಂದದವರ ಒಗ್ಗೂಡುವಿಕೆಯೊಂದಿಗೆ ಶ್ರೀ ಕ್ಷೇತ್ರ ಮೋಟೆತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನ ಶಿಬಾಜೆ ಇಲ್ಲಿ ಏ. 8ರಂದು ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕ್ಷೇತ್ರೀಯ ಕಾರ್ಯಕಾರಿಣ ಸದಸ್ಯ ಡಾ| ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಭಾಷಣ ಮಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಟಿ ಪಿಲಿಕಬೆ ವಹಿಸಿದ್ದರು. ವೇದಿಕೆಯಲ್ಲಿ ತಾ| ಬಿಜೆಪಿ ಅಧ್ಯಕ್ಷ ರಂಜನ್ ಜಿ ಗೌಡ, ನ್ಯಾಯವಾದಿ ಪ್ರತಾಪಸಿಂಹ ನಾಯಕ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ, ಪುತ್ತೂರಿನ ಉದ್ಯಮಿ ರಾಘವೇಂದ್ರ ನಾಯಕ್ ಬರ್ಗುಳ, ಶಿಬಾಜೆ ಗ್ರಾ.ಪಂ ಅಧ್ಯಕ್ಷೆ ಸುಶೀಲಾ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಇವರುಗಳು ಉಪಸ್ಥಿತರಿದ್ದರು.
ಕೃಷ್ಣಪ್ಪ ಬೇಂಗಳ ಸ್ವಾಗತಿಸಿದರು. ಶಿಕ್ಷಕಿ ಅನುರಾಧಾ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಉದಯಶಂಕರ್ ಧನ್ಯವಾದವಿತ್ತರು. ಬಿಂಧುಮಾಧವ ಮತ್ತು ಬಳಗದ ವೈಧಿಕ ಮಂತ್ರಘೋಷ ಮೊಳಗಿಸಿದರು. ಗೋಪಿನಾಥ ಪ್ರಿಯ ಭಜನಾ ಮಂಡಳಿ ಮುಳಬಾಗಿಲು ಇವರು ಪ್ರಾರ್ಥನೆ ಹಾಡು ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.