ಕೊಕ್ಕಡ- ಎಂಡೋ ಸಂತ್ರಸ್ಥರ ಬೃಹತ್ ಸಮಾಲೋಚನಾ ಸಭೆ

Advt_NewsUnder_1
Advt_NewsUnder_1
Advt_NewsUnder_1

endo

endo1ಕರ್ನಾಟಕ ಸರಕಾರ ಎಂಡೋ ಸಂತ್ರಸ್ಥರಿಗಾಗಿ ಈವರೆಗೆ ಯಾವುದೇ ಪರಿಣಾಮಕಾರಿಯಾದ ಪುನರ್ವಸತಿಯನ್ನು ಕಲ್ಪಿಸಿಲ್ಲ ಎನ್ನುವ ಸರಕಾರದ ಧೋರಣೆಯನ್ನು ಖಂಡಿಸಿ ಮತ್ತು ಕೂಡಲೇ ಎಂಡೋ ಸಂತ್ರಸ್ಥರಿಗೆ ಪೂರ್ಣ ಪ್ರಮಾಣದ ಸೌಲಭ್ಯಗಳನ್ನು ಕಲ್ಪಿಸಬೇಕೆನ್ನುವ ಆಗ್ರಹವನ್ನು ಮುಂದಿನ ಹಂತದಲ್ಲಿ ರಾಜ್ಯ ವ್ಯಾಪಿ ಪ್ರತಿಭಟನೆಯ ಮೂಲಕ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಎ. 8ರಂದು ಕೊಕ್ಕಡ ಸೌತಡ್ಕ ಕ್ಷೇತ್ರದ ಗಣೇಶ ಕಲಾ ಮಂದಿರದಲ್ಲಿ ಸಮಾಲೋಚನಾ ಸಭೆಯು ನಡೆಯಿತು.
ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಶ್ರೀಧರ ಗೌಡ ಕೆಂಗುಡೇಲು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು ನವಚೇತನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮಂಜುನಾಥ್, ಉಚ್ಚ ನ್ಯಾಯಾಲಯದ ನ್ಯಾಯವಾದಿ ಹರೀಶ್ ಪೂಂಜ, ಉಡುಪಿ, ದ.ಕ. ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಡಾ. ಮುರಳೀಧರ ನಾಯಕ್, ಕನ್ಯಾಡಿ ಸೇವಾ ಭಾರತಿಯ ಸಂಯೋಜಕ ವಿನಾಯಕ ರಾವ್ ಕನ್ಯಾಡಿ, ಸ್ಥಳೀಯ ಉದ್ಯಮಿ ಪೂವಾಜೆ ಕುಶಾಲಪ್ಪ ಗೌಡ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಿ.ಕೆ. ನಾರಾಯಣ ಗೌಡ , ಆಲ್ಬರ್ಟ್ ಮಿನೇಜಸ್, ಜಿಲ್ಲಾ ಅಂಗವಿಕಲರ ಸಂಘದ ಕಾರ್ಯದರ್ಶಿ ಕೊರಗಪ್ಪ ಗೌಡ ,ಕೊಕ್ಕಡ ಎಂಡೋ ಸಂತ್ರಸ್ಥರ ಪೋಷಕಿ ರೇವತಿ ತಾಮಣಕರ್ ಉಪಸ್ಥಿತರಿದ್ದರು.
ಮೇ 24 ರಿಂದ ಕೊಕ್ಕಡದಲ್ಲಿ 4 ದಿನ ನಿರಂತರ ಅಹರ್ನಿಶಿ ಧರಣಿ , ಮುಖ್ಯಮಂತ್ರಿ ಸ್ವತಃ ಪ್ರತಿಭಟನಾ ಸ್ಥಳಕ್ಕೆ ಬಂದು ಬೇಡಿಕೆಯನ್ನು ಈಡೇರಿಸಲು ಆಗ್ರಹ, 4 ದಿನದಲ್ಲೂ ಮುಖ್ಯಮಂತ್ರಿಯವರು ಪ್ರತಿಭಟನಾ ಸ್ಥಳಕ್ಕೆ ಬಾರದೇ ಉಳಿದಲ್ಲಿ ಮೇ.27 ರಿಂದ ಎಂಡೋ ಸಂತ್ರಸ್ಥರ ಅಮರಣಾಂತ ಉಪವಾಸ, ಮೇ 26 ರಂದು ಬೆಂಗಳೂರು ನ ಫ್ರೀಡಂ ಪಾರ್ಕಿನಲ್ಲಿ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಲವಾರು ಸಂಘಟನೆಗಳಿಂದ ಎಂಡೋ ಸಂತ್ರಸ್ಥರ ಸಮಸ್ಯೆಯನ್ನು ಈಡೇರಿಸುವಂತೆ ಪ್ರತಿಭಟನೆ, ಇವಿಷ್ಟು ಈ ಸಭೆಯಲ್ಲಿ ನಿರ್ಣಯವಾದ ವಿಷಯಗಳು .
ಎಂಡೋ ವಿರೋಧೀ ಹೋರಾಟ ಸಮಿತಿ ಕಾರ್ಯದರ್ಶಿ ಪುರಂದರ ಕಡಿರ ಸ್ವಾಗತಿಸಿದರು. ರೇವತಿ ತಾಮಣಕರ್ ವಂದಿಸಿದರು. ಹಿತ್ತಲು ಸುದರ್ಶನ ಭಟ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.