ಎಸ್.ಡಿ.ಎಂ. ನ್ಯಾಚುರೋಪತಿಗೆ ಆರ್.ಜಿ.ಯು.ಹೆಚ್.ಎಸ್ ನ ಗೋಲ್ಡ್ ಮೆಡಲ್.

sdm

sdm1ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 2016-17ನೇ ಸಾಲಿನಲ್ಲಿ ನೇಪಾಳದ ವಿದ್ಯಾರ್ಥಿ ಡಾ. ಅಂಜು ಮಹಾರ್ಜನ್ ಅಂತಿಮ ವರ್ಷದಲ್ಲಿ ಗರಿಷ್ಠ ಅಂಕ ಗಳಿಸಿ ಚಿನ್ನದ ಪದಕವನ್ನು  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 19ನೇ ಘಟಿಕೋತ್ಸವದಲ್ಲಿ  ಕರ್ನಾಟಕದ ಘನತೆವೆತ್ತ ರಾಜ್ಯಪಾಲ ವಜುಭಾಯಿ ವಾಲಾರವರು ಪ್ರಧಾನಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ವ್ಯೆದ್ಯಕೀಯ ಶಿಕ್ಷಣ ಸಚಿವರಾದ ಡಾ| ಶರಣ ಪ್ರಕಾಶ್ ಪಾಟೀಲ್ ಮತ್ತು ಬೆಂಗಳೂರಿನ ಮಾನವ ತಳಿ ಶಾಸ್ತ್ರ ಕೇಂದ್ರದ ನಿರ್ದೇಶಕರಾದ ಡಾ| ಹೆಚ್. ಈ ಶರತ್ ಚಂದ್ರ ಹಾಗೂ ವಿಶ್ವವಿದ್ಯಾನಿಲಯದ ಕುಲಪತಿಗಳು ಹಾಗೂ ಕುಲಸಚಿವರು ಉಪಸ್ಥಿತರಿದ್ದರು ಎಂದು ಕಾಲೇಜು ಪ್ರಾಂಶುಪಾಲರಾದ ಪ್ರಶಾಂತ್ ಶೆಟ್ಟಿಯವರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.