ಸೌತಡ್ಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

kokkadaಕೊಕ್ಕಡ : ಜಿಲ್ಲೆಯ ಎಗ್ರೇಡ್ ದೇವಸ್ಥಾನಗಳಲ್ಲೊಂದಾದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ನೂತನ ಆಡಳಿತ ಸಮಿತಿಯು ದಾರ್ಮಿಕ ದತ್ತಿ ಇಲಾಖೆಯಿಂದ ನೇಮಕವಾಗಿದ್ದು ಮುಂದಿನ 3 ವರ್ಷದ ಅವಧಿಗೆ 9 ಜನರಿರುವ ನೂತನ ವ್ಯವಸ್ಥಾಪನಾ ಸಮಿತಿಯು ರಚನೆಯಾಗಿದೆ. ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕೆ. ಸುಬ್ರಹ್ಮಣ್ಯ ಶಬರಾಯ ಇವರು ಮುಂದಿನ 1ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ. ಸಮಿತಿಯ ಸದಸ್ಯರಾಗಿ ವಿಶ್ವನಾಥ ಪೂಜಾರಿ ಕೊಲ್ಲಾಜೆ, ಪ್ರಶಾಂತ ರೈ ಅರಂತ ಬೈಲು, ಪಿ. ವಿಶ್ವನಾಥ ಶೆಟ್ಟಿ, ಅಣ್ಣಪ್ಪ ಗೌಡ ಕಾಶಿ, ಸೌಮ್ಯ ಕೆ. ಕುವೆತ್ಯಾರು,ಸಿನಿ ಗುರುದೇವನ್, ಗಣೇಶ್ ಪಿ.ಕೆ., ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಇವರು ಆಯ್ಕೆಯಾಗಿರುತ್ತಾರೆ.
ಧಾರ್ಮಿಕ ದತ್ತಿ ಇಲಾಖೆಯಿಂದ ಆಯ್ಕೆಗೊಂಡ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರ ಸಭೆಯು ಎ.4 ರಂದು ಶ್ರೀ ಕ್ಷೇತ್ರ ಸೌತಡ್ಕ ದಲ್ಲಿ ಶ್ರೀ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಇವರ ಉಪಸ್ಥಿತಿಯಲ್ಲಿ ನಡೆಯಿತು . ಈ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಮುಂದಿನ 1 ವರ್ಷದ ಅವಧಿಗೆ ಕೆ. ಸುಬ್ರಹ್ಮಣ್ಯ ಶಬರಾಯ ಇವರನ್ನು ಆರಿಸಲಾಯಿತು.
ಕೊಕ್ಕಡ ನಿವಾಸಿಯಾಗಿರುವ ಸುಬ್ರಹ್ಮಣ್ಯ ಶಬರಾಯರವರು ಕೊಕ್ಕಡ ವಿಶ್ವಮಿತ್ರ ಪ್ರಿಂಟರ‍್ಸ್‌ನ ಮಾಲಕರಾಗಿದ್ದಾರೆ. ಇವರು ಕೊಕ್ಕಡ ಗ್ರಾ.ಪಂ ನಲ್ಲಿ 2 ಅವಧಿಗೆ ಅಧ್ಯಕ್ಷರಾಗಿ, ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ 7 ವರ್ಷ ಆಡಳಿತ ಮೊಕ್ತೇಸರರಾಗಿ, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ 3 ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕೊಕ್ಕಡ ವರ್ತಕ ಸಂಘದ ಅಧ್ಯಕ್ಷರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.