ನೆಲ್ಯಾಡಿ : ಜೀಪು, ಬೈಕ್ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಶಿರಾಡಿ ನಿವಾಸಿ ಮೃತ್ಯು

ನೆಲ್ಯಾಡಿ : ಜೀಪೊಂದು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಮರದ ಡಿಪೋ ಬಳಿ ಎ. 6ರಂದು ನಡೆದಿದೆ.
ಶಿರಾಡಿ ಗ್ರಾಮದ ಕಡಂಬೂರು ನಿವಾಸಿ ಶಿವಣ್ಣ ಗೌಡರ ಪುತ್ರ ಪುರುಷೋತ್ತಮ ಗೌಡ(36ವ) ಮೃತ ದುರ್ದೈವಿ ಬೈಕ್ ಸವಾರರಾಗಿದ್ದಾರೆ. ಜೀಪಿನಲ್ಲಿದ್ದ ರೆಖ್ಯ ನಿವಾಸಿಗಳಾದ ಧರ್ಣಪ್ಪ (46ವ) ಹಾಗೂ ವಿಶ್ವನಾಥ ಎಂಬವರು ಗಾಯಗೊಂಡಿದ್ದು, ಇವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುರುಷೋತ್ತಮ ಗೌಡರು ನೆಲ್ಯಾಡಿಯಿಂದ ಶಿರಾಡಿಗೆ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ಸಂದರ್ಭ ಕೊಕ್ಕಡದಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಾಗಿ ನೆಲ್ಯಾಡಿಗೆ ಬರುತ್ತಿದ್ದ ಸರ್ವೀಸ್ ಜೀಪು ನಡುವೆ ಮಣ್ಣಗುಂಡಿ ಸಮೀಪ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಪುರುಷೋತ್ತಮರವರು ರಸ್ತೆಗೆಸೆಯಲ್ಪಟ್ಟು ಗಂಬೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.