ಗ್ರಾ.ಪಂ. ಸಿಬ್ಬಂದಿಗಳಿಂದ ಜಿ.ಪಂ. ಕಚೇರಿ ಬಳಿ ಪ್ರತಿಭಟನೆ ಕರ್ತವ್ಯದ ಒತ್ತಡ ನಿವಾರಿಸಲು ಬೇಡಿಕೆ; ಗ್ರಾ.ಪಂ. ಕಚೇರಿಗೆ ಹಾಜರಾಗದೆ ಬೇಡಿಕೆ ಈಡೇರಿಕೆಗೆ ಒತ್ತಾಯ

Advt_NewsUnder_1
Advt_NewsUnder_1
Advt_NewsUnder_1

1

ಬೆಳ್ತಂಗಡಿ: ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಸಹಿತ ವಿವಿಧ ಮಟ್ಟದ ಸಿಬ್ಬಂದಿಗಳನ್ನು ಸರಕಾರ ಮಿತಿಮೀರಿ ದುಡಿಸುತ್ತಿದ್ದು ಈ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿ ಎ. ೩ ರಂದು ಎಲ್ಲಾ ಗ್ರಾ.ಪಂ. ಸಿಬ್ಬಂದಿಗಳು ಪಂಚಾಯತ್‌ನ ಕರ್ತವ್ಯಕ್ಕೆ ಹಾಜರಾಗದೆ ಬಂದ್ ನಡೆಸಿ ಮಂಗಳೂರು ಜಿ.ಪಂ. ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಲೆಕ್ಕಸಹಾಯಕರು, ಗುಮಾಸ್ತರು, ಕಂಪ್ಯೂಟರ್ ಅಪರೇಟರ್‌ಗಳು, ಕರ ವಸೂಲಿಗಾರರು, ಪಂಪುಚಾಲಕರು, ಜವಾನರು, ಶುಚಿತ್ವ ನೌಕರರು ಹಾಗೂ ಇತರ ಸಿಬ್ಬಂದಿಗಳಿಗೆ ಕಾರ್ಯ ಒತ್ತಡ ಜಾಸ್ತಿಯಾಗಿದ್ದು ಈಗಾಗಲೇ ಅವರಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುತ್ತಿದೆ ಎಂಬುದು ಅವರ ವಾದ.
ಉದ್ಯೋಗ ಖಾತರಿ ಯೋಜನೆ ಕಡತ, ಎಂಐಎಸ್ ನಿರ್ವಹಣೆ, ಆಧಾರ್ ಸೀಡಿಂಗ್, ಖಾತೆಗಳ ನಿರ್ವಹಣೆ, ಹತ್ತು ಹಲವು ವಹಿಗಳ ನಿರ್ವಹಣೆ, ಎಸ್.ಬಿ.ಎಮ್. ಯೋಜನೆ, ಪಂಚತಂತ್ರ, ಬಿ.ಆರ್. ಜಿಯೋ ಟ್ಯಾಗ್, ವಸತಿ ಯೋಜನೆಯ ಜಿ.ಪಿ.ಎಸ್. ಹಾಗೂ ಕಡತ ನಿರ್ವಹಣೆ, ಇ-ಪಾವತಿ, ವರ್ಕ್ ಸಾಪ್ಟ್, ಈ-ಸ್ವತ್ತು ನಿರ್ವಹಣೆ, ಇ-ಮೇಲ್ ನಿರ್ವಹಣೆ, ಹತ್ತು ಹಲವು ವರದಿ ತಯಾರಿ, ವಿವಿದ ಮೊಬೈಲ್ ಆಪ್ ನಿರ್ವಹಣೆ, ಅದರೊಂದಿಗೆ ಬಾಪೂಜಿ ಸೇವಾ ಕೇಂದ್ರದ ಪಹಣಿ ಪತ್ರ ವಿತರಣೆ, ಕಂದಾಯ ಇಲಾಖೆಯ ಜಾತಿ ಆದಾಯ ಪ್ರಮಾಣ ಪತ್ರ, ವಾಸ್ತವ್ಯ ದೃಢಪತ್ರ, ಮನಸ್ವಿನಿ, ವೃಧ್ಯಾಪ್ಯ, ವಿಕಲಾಂಗ, ಸಂಧ್ಯಾಸುರಕ್ಷ ಅರ್ಜಿಗಳ ವಿಲೇವಾರಿ, ಇದರ ನಡುವೆ ಪಡಿತರ ಚೀಟಿ ಅರ್ಜಿಗಳು ಮತ್ತು ಪಡಿತರ ಚೀಟಿಗಳ ಕುಂದುಕೊರತೆಗಳ ಪರಿಹಾರ ಹೀಗೆ ಹತ್ತು ಹಲವು ಕಾರ್ಯಗಳಿಂದ ಒತ್ತಡಗಳು ಇದ್ದು, ತಾಲೂಕಿನಲ್ಲಿ ಸಿಬ್ಬಂದಿಗಳಿಗೆ ಸೂಕ್ತ ನಿದರ್ಶನ ನೀಡಲು ತಾಲೂಕು ಮಟ್ಟದ ಅಧಿಕಾರಿಗಳು ಇಲ್ಲದೆ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರಕುತ್ತಿಲ್ಲ. ಅಧಿಕ ಕಾರ್ಯದ ಒತ್ತಡದಿಂದಾಗಿ ಸಿಬ್ಬಂದಿಗಳ ಕಾರ್ಯಧಕ್ಷತೆ ಕುಂಠಿತವಾಗಿ, ತಮ್ಮದಲ್ಲದ ಇತರ ಇಲಾಖೆಗಳ ಕಾರ್ಯಗಳ ನಿರ್ವಹಣೆಯಿಂದಾಗಿ ಪಂಚಾಯತ್ ರಾಜ್ ಇಲಾಖೆಯ ಪ್ರಗತಿಯಲ್ಲಿ ಹಿನ್ನಡೆಯಾಗುತ್ತಿದೆ. ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹೆಚ್ಚುವರಿ ಡಾಟ ಎಂಟ್ರಿ ಅಪರೇಟರ್‌ಗಳ ಅಗತ್ಯತೆ ಕೂಡ ಇದೆ. ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಿ ಸದ್ರಿ ಸಿಬ್ಬಂದಿಗಳ ನಿಯೋಜನೆಗೆ ಸೂಕ್ತ ಕ್ರಮ ಕೈಗೊಂಡು ಗ್ರಾಮ ಪಂಚಾಯತ್ ನೌಕರರ ಮೇಲೆ ಇರುವ ಕಾರ್ಯ ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಹಿಂಸೆ ಅನುಭವಿಸುವುದನ್ನು ತಪ್ಪಿಸಬೇಕು ಎಂಬಿತ್ಯಾಧಿ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಯಿತು.
ಧ್ವಜಾರೋಹಣ, ನೀರು ಸರಬರಾಜಿಗೆ ಕ್ರಮ
ಎಲ್ಲ ಸಿಬ್ಬಂದಿಗಳೂ ಪ್ರತಿಭಟನಾರ್ಥವಾಗಿ ಕರ್ತವ್ಯಕ್ಕೆ ಒಂದು ದಿನ ರಜೆ ಹಾಕಿದ್ದರೂ ಗ್ರಾಮ ಪಂಚಾಯತಿನ ಪ್ರಮುಖ ಕಾರ್ಯಗಳಲ್ಲಿ ಒಂದಾದ ದ್ವಜಾರೋಹಣ ಮತ್ತು ಕುಡಿಯುವ ನೀರಿನ ಸರಬರಾಜನ್ನು ಎಂದಿನಂತೆ ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ವ್ಯವಸ್ಥೆ ಕೈಗೊಂಡಿತ್ತು.
ಗ್ರಾ.ಪಂ. ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಬೊಲ್ಮ ಅವರ ನೇತೃತ್ವದಲ್ಲಿ ತಾಲೂಕಿನಿಂದ ನೂರಾರು ಸಂಖ್ಯೆಯ ಸಿಬ್ಬಂದಿಗಳು ಹಕ್ಕೊತ್ತಾಯದಲ್ಲಿ ಭಾಗಿಯಾದರು.

ಭರವಸೆ: ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ರವಿ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರು, ತಮ್ಮ ಬೇಡಿಕೆಯ ಬಗ್ಗೆ ಸರಕಾರ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಬೇಸಿಗೆಕಾಲವಾಗಿರುವುದರಿಂದ ಜನತೆಗೆ ಆಗುವ ತೊಂದರೆಯನ್ನು ಮನಗಂಡು ತಾವು ಅನಿರ್ದಿಷ್ಟಾವಧಿ ಹೋರಾಟವನ್ನು ಹಿಂಪಡೆಯುವಂತೆ ವಿನಂತಿಸಿಕೊಂಡರು. ಪ್ರತಿಭಟನೆಯಲ್ಲಿ ಜಿಲ್ಲೆಯ ೨೩೦ ಗ್ರಾಮ ಪಂಚಾಯತ್‌ಗಳ ಎಲ್ಲಾ ಸಿಬ್ಬಂದಿಗಳು ಕಛೇರಿ ಕರ್ತವ್ಯಕ್ಕೆ ರಜೆ ಹಾಕಿ ಹೋರಾಟದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.