ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಸಮಗ್ರ ಕಾಯಕಲ್ಪಕ್ಕೆ ನಿರ್ಧಾರ ಶಾಸಕರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿ, ಅಧಿಕಾರಿಗಳು, ಸಂಘ ಸಂಸ್ಥೆಯವರ ಜೊತೆ ಸಮಾಲೋಚನೆ

5

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯು ಕಾಯಕಲ್ಪ ವಿಭಾಗದಲ್ಲಿ ಈಗಾಗಲೆ ರಾಜ್ಯ ಮಟ್ಟದಲ್ಲಿ ೧೧ ನೇ ಪ್ರಶಸ್ತಿ ಪಡೆದುಕೊಂಡಿದ್ದು ಮುಂದಕ್ಕೆ ಕೇಂದ್ರದಿಂದಲೂ ದೊರೆಯುವ ಪ್ರಶಸ್ತಿ ಹಾಗೂ ವಿಶೇಷ ಪ್ರೋತ್ಸಾಹದಾಯಕ ಅನುದಾನ ಪಡೆಯುವಲ್ಲಿ ಸರ್ವ ಪ್ರಯತ್ನ ನಡೆಸುವ ನಿಟ್ಟಿನಲ್ಲಿ ಕಾಯಕಲ್ಪದ ಬಗೆಗಿನ ಸಮಾಲೋಚನಾ ಸಭೆಯು ಎ. ೩ ರಂದು ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ವಸಂತ ಬಂಗೇರರ ಅಧ್ಯಕ್ಷತೆಯಲ್ಲಿ ನಡೆಯಿತು.
ವರ್ಷಾಂತ್ಯದೊಳಗೆ ಕೇಂದ್ರ ಕಾಯಕಲ್ಪ ಪರಿವೀಕ್ಷಣಾ ತಂಡ ಆಗಮಿಸಿ ಆಸ್ಪತ್ರೆಯನ್ನು ಮೌಲ್ಯಮಾಪನಗೊಳಿ ಸುವುದಕ್ಕೂ ಮುನ್ನ ಆಸ್ಪತ್ರೆಯನ್ನು ಸಮಗ್ರ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಮಹತ್ವದ ಅಭಿವೃದ್ದಿ ಯೋಜನೆಗಳನ್ನು ಅನುಷ್ಠಾನಿಸುವ ಬಗ್ಗೆ ಚರ್ಚೆಗಳು ನಡೆದವು. ಸಭೆಯಲ್ಲಿ ವಿವಿಧ ಇಲಾಖಾ
ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದರವರು ಯಾರ‍್ಯಾರು?
ಸಭೆಯ ವೇದಿಕೆಯಲ್ಲಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಕೆ ಶಾಹುಲ್ ಹಮೀದ್, ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ ಸದಸ್ಯರಾದ ಸೌಮ್ಯಲತಾ ಜಯಂತ ಗೌಡ ಮತ್ತು ಮಮತಾ ಎಂ. ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್, ವಿಶೇಷ ಅಧಿಕಾರಿ ಡಾ| ಸಿಖಂದರ್ ಪಾಷಾ, ಕಾಯಕಲ್ಪ ವಿಭಾಗದ ಸಂಗೀತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಎ, ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಉಪಸ್ಥಿತರಿದ್ದರು. ಸಭೆಯಲ್ಲಿ ನಿವೃತ್ತ ಎಸ್.ಪಿ ಪಿತಾಂಬರ ಹೇರಾಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಯೋಜನಾಧಿಕಾರಿ ರೂಪಾ ಜಿ ಜೈನ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಸುಶೀಲಾ ಎಸ್ ಹೆಗ್ಡೆ, ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಮ್ ಗೌಡ, ಮಾಜಿ ಅಧ್ಯಕ್ಷ ಎಂ.ವಿ ಭಟ್ ಮುಂಡಾಜೆ, ಎಪಿಎಂಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಪ್ರಭಾಕರ ಧರ್ಮಸ್ಥಳ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ಆನ್ ಸಿಲ್ಕ್ ಮಾಲಿಕ ಜೇಸುದಾಸ್, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್. ನಗರ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಬಾಬು ಗೌಡ ಹಾಗೂ ಇತರ ಗಣ್ಯರುಗಳು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು. ತೋಟಗಾರಿಕಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯವರೂ ಉಪಸ್ಥಿತರಿದ್ದರು.

  • ಎಂಡೋ ಪೀಡಿತರ ಮನೆಗೆ ತೆರಳಿ ಫಿಸಿಯೋಥೆರಫಿ ನಡೆಸುವ ವಾಹನಕ್ಕೆ ಚಾಲನೆ.
  •  ಪೆಟ್ರೋನೆಟ್ ಕಂಪೆನಿ ದೇಣಿಗೆ ನೀಡಿದ ಸ್ವಯಂ ಚಾಲಿತ ಲಾಂಡ್ರಿ ಮೆಷಿನ್ ಉದ್ಘಾಟನೆ.
  • ರೋಟರಿ ಕ್ಲಬ್‌ನವರು ಕೊಡುಗೆ ನೀಡಿದ ಲಾಂಡ್ರಿ ಮೆಷಿನ್ ಸುರಕ್ಷಿತ ಕಟ್ಟಡ ಉದ್ಘಾಟನೆ.
  • ಸರಕಾರಿ ಆಸ್ಪತ್ರೆಯಲ್ಲಿ ಫಿಸಿಯೋ ಥೆರಫಿ ಸೌಲಭದ್ಯ ಉದ್ಘಾಟನೆ.
  • ಮುಂದಕ್ಕೆ ಸರಕಾರಿ ಆಸ್ಪತ್ರೆ ಆವರಣದಲ್ಲಿ ಔಷಧಿ ಕೇಂದ್ರ ಉದ್ಘಾಟನೆ.
  • ಕೆಎಮ್‌ಎಫ್‌ನಿಂದ ಹಾಲಿನ ಕೇಂದ್ರ, ಸರಳ ಬೆಲೆಗೆ ಹಣ್ಣು ಮಾರಾಟ ಕೇಂದ್ರ ತೆರೆಯುವ ಯೋಜನೆ.
  • ಸಾರ್ವಜನಿಕ ಬಳಕೆಗೆ ಶೌಚಾಲಯ, ವಾಹನ ಪಾರ್ಕಿಂಗ್ ವ್ಯವಸ್ಥೆ.
  • ಆಯುರ್ವೇದ ವನ, ಇಂಟರ್ಲಾಕ್ ವ್ಯವಸ್ಥೆ.
  • ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಕ್ರಮ.
  • ಆಸ್ಪತ್ರೆ ಬಳಿ ಹೊಸ ಟಿ.ಸಿ. ಉದ್ಘಾಟನೆ.

ಆಸ್ಪತ್ರೆಯಲ್ಲಿ ಆಗಬೇಕಾಗಿರುವ ಪ್ರಮುಖ ಕಾಯಕಲ್ಪ ಯೋಜನೆಗಳು:
* ಆಸ್ಪತ್ರೆಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮತ್ತು ಪ್ರವೇಶ ಸ್ಥಳದಲ್ಲಿ ಪ್ರತ್ಯೇಕ ಎರಡು ಪ್ರವೇಶ ದ್ವಾರಗಳು. *ಆಯುರ್ವೇದಿಕ್ ವನ ರಚನೆ. * ಆವರಣ ಗೋಡೆ, ಅದರ ಸುತ್ತ ದೀಪಗಳು. * ಆಸ್ಪತ್ರೆ ಮುಂಭಾಗದಲ್ಲಿ ಹೈಮಾಸ್ಕ್ ದೀಪ. * ಕೌ ಕ್ಯಾಚರ್ ಅಳವಡಿಕೆ. * ಸುಂದರ ವನ ನಿರ್ಮಾಣ *ಆಸ್ಪತ್ರೆಯ ಸಭಾಭವನದಲ್ಲಿ ಪೋಡಿಯಂ ನಿರ್ಮಾಣ. *ಪ್ರೊಜೆಕ್ಟರ್ ಮತ್ತು ಎ.ಸಿ. ಅಳವಡಿಕೆ. * ಶವಾಗಾರ ಕೊಠಡಿ ದುರಸ್ಥಿ * ಶವಾಗಾರದಲ್ಲಿ ಶೈತ್ಯಾಗಾರದ ವ್ಯವಸ್ಥೆ. * ಡ್ರೈನೇಜ್ ವ್ಯವಸ್ಥೆ *ಆಸ್ಪತ್ರೆಯ ಒಳಗಿನ ಸ್ವಚ್ಚತೆಗಾಗಿ ಕ್ಲೀನಿಂಗ್ ಮೆಷಿನ್. * ಹೊರ ಆವರಣದಲ್ಲಿ ಕಳೆಗಿಡಗಳನ್ನು ಕೊಚ್ಚಲು ಕಟ್ಟಿಂಗ್ ಮೆಷಿನ್. * ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವಾಹನ ನಿಲುಗಡೆ. * ಆಗಮಿಸುವವರಿಗೆ ಸಾಕಷ್ಟು ಕುರ್ಚಿಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ. * ಔಷಧಿ ಉಗ್ರಾಣ ಕೊಠಡಿಗೆ ರ‍್ಯಾಕ್‌ಗಳು * ಅಡುಗೆ ಕೋಣೆಯಿಂದ ವಾರ್ಡ್‌ಗೆ ಅನ್ನಾಹಾರ ತರಲು ಗಾಡಿ. * ನಿರಂತರ ವಿದ್ಯುತ್ ಸೌಲಭ್ಯಕ್ಕಾಗಿ ೪ ಇನ್ವರ್ಟರ್‌ಗಳು. * ರೋಗಿಗಳ ಉಪಯೋಗಕ್ಕೆ ೧೦೦ ಬೆಡ್‌ಶೀಟ್‌ಗಳು. * ವಿವಿಧ ವಾರ್ಡ್‌ಗಳಿಗೆ ಕೊರತೆಇರುವ ಫ್ಯಾನ್‌ಗಳ ಅಳವಡಿಕೆ * ೩ ಟಿ. ವಿ ಗಳು. * ವೀಲ್‌ಚೇರ್ ಮತ್ತು ಸ್ಟ್ರಕ್ಚರ‍್ಸ್. *ಜನರೇಟರ್ ಕೊಠಡಿ ಮತ್ತು ತ್ಯಾಜ್ಯ ನಿರ್ವಹಣಾ ಕೊಠಡಿ ದುರಸ್ಥಿ. * ಆಸ್ಪತ್ರೆ ಆವರಣಕ್ಕೆ ಡಾಮರು ಮತ್ತು ಇಂಟರ್‌ಲಾಕ್ ಅಳವಡಿಕೆ. * ಸೊಳ್ಳೆ ನಿಯಂತ್ರಣ ಸಲುವಾಗಿ ಕಿಟಕಿಗಳಿಗೆ ಮೆಷ್ ಅಳವಡಿಕೆ ಇತ್ಯಾಧಿ ಪ್ರಮುಖ ಬೇಡಿಕೆಗಳ ಪಟ್ಟಿ ತಯಾರಿಸಿ ಸಭೆಯಲ್ಲಿ ಮಂಡಿಸಲಾಯಿತು.
ಕೆಲವೊಂದು ಕಾಮಗಾರಿಗಳನ್ನು ವ್ಯಕ್ತಿಗಳು ಮತ್ತು ಸಂಘ ಸಂಸ್ಥೆ ವಹಿಸಿಕೊಂಡರು. ಕೆಲವೊಂದನ್ನು ಗ್ರಾ.ಯೋ, ಜಿ.ಪಂ. ಅನುದಾನ, ಜಿ.ಪಂ. ಸದಸ್ಯರ ವೈಯುಕ್ತಿಕ ಅನುದಾನದಲ್ಲಿ ತಲಾ ೫೦ ಸಾವಿರ ವಿನಿಯೋಗಿಸುವುದೆಂದು ತೀರ್ಮಾನಕ್ಕೆ ಬರಲಾಯಿತು. ಸಾರ್ವಜನಿಕರು, ಸಂಘ ಸಂಸ್ಥೆಯವರು ನೆರವು ನೀಡುವಂತೆ ವೈದ್ಯಾಧಿಕಾರಿಗಳಾದ ಡಾ. ಕಲಾಮಧು ಶೆಟ್ಟಿ ಮತ್ತು ಡಾ. ಆದಂ ಅವರು ಈ ಸಂದರ್ಭ ಕೇಳಿಕೊಂಡರು. ಚಂದ್ರಶೇಖರ್ ಸಹಕಾರ ನೀಡಿದರು. ಆಸ್ಪತ್ರೆಯ ಫಿಸೀಶಿಯನ್ ಡಾ. ಚಂದ್ರಕಾಂತ್ ಸ್ವಾಗತಿಸಿದರು. ಎಲ್ಲಾ ವ್ಯದ್ಯಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.