ದಯಾ ವಿಶೇಷ ಮಕ್ಕಳ ಪಾಲನಾ ಕೇಂದ್ರ ಉದ್ಘಾಟನೆ ವಿಶೇಷ ಮಕ್ಕಳ ಸೇವೆ ನಿಜವಾದ ದೇವರ ಸೇವೆ: ಫಾ| ಡೋಲ್ಫಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

3

ಬೆಳ್ತಂಗಡಿ: ಕಪುಚಿನ್ ಕೃಷಿಕಾ ಸೇವಾ ಕೇಂದ್ರ ದಯಾಳ್‌ಬಾಗ್ ಗ್ರಾಮಾಭಿವೃದ್ಧಿ ಯೋಜನೆ ವಿಮುಕ್ತಿ ಕೊಯ್ಯೂರು ಕ್ರಾಸ್ ಬೆಳ್ತಂಗಡಿ ಇದರ ವತಿಯಿಂದ ನೂತನವಾಗಿ ಆರಂಭಿಸಲಾದ ದಯಾ ವಿಶೇಷ ಮಕ್ಕಳ ಪಾಲನಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಎ.೪ರಂದು ಜರುಗಿತು. ನೂತನ ಕಟ್ಟಡವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಪುಚಿನ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿ ರೇ| ಫಾ| ಡೋಲ್ಫಿ ಪಾಸ್ ಅವರು ಪ್ರಪಂಚದಲ್ಲಿ ಅಂಗವಿಕಲರು ಎಂಬವರೇ ಇಲ್ಲ, ಇಲ್ಲಿರುವ ಮಕ್ಕಳು ವಿಶೇಷ ಮಕ್ಕಳು, ದಿವ್ಯಾಂಗರು ಇವರಿಗೆ ಬೇರೆ, ಬೇರೆ ರೂಪದಲ್ಲಿ ವಿಶೇಷ ಶಕ್ತಿ ಇದೆ, ಇವರು ದೇವರ ಮಕ್ಕಳು ಇವರ ಸೇವೆ ನಿಜವಾದ ದೇವರ ಸೇವೆಯಾಗಿದೆ ಎಂದು ನುಡಿದರು. ವಿಶೇಷ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದೆ. ಇಂತಹ ಮಕ್ಕಳು ಹುಟ್ಟಿದಾಗ ತಂದೆ-ತಾಯಿ ಕಣ್ಣೀರು ಹಾಕಬಾರದು ಇವರಿಗೆ ಅವಕಾಶ ಕೊಟ್ಟು, ಉತ್ತಮ ಶಿಕ್ಷಣ ನೀಡಿದಾಗ ಇವರ ಜೀವನಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ. ಇಂತಹ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಇಂತವರು ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದ ಅನೇಕ ನಿದರ್ಶನಗಳು ನಮ್ಮ ಕಣ್ಣೆದುರಿಗಿದೆ. ಇವರ ಸೇವೆ ನಮ್ಮ ಜವಾಬ್ದಾರಿಯಾಗಿದೆ. ಫಾ| ವಿನೋದ್ ಅವರ ಈ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಮುಕ್ತಿ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷೆ ಶ್ರೀಮತಿ ಇಂದಿರಾ ಅವರು ಮಾತನಾಡಿ, ವಿಮುಕ್ತಿ ಗ್ರಾಮಾಭಿವೃದ್ಧಿ ಯೋಜನೆ ಕಳೆದ ೧೮ ವರ್ಷಗಳಿಂದ ಸ್ವಸಹಾಯ ಸಂಘದ ಮೂಲಕ ಮಹಿಳೆಯರ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಇಂದು ದಯಾ ವಿಶೇಷ ಮಕ್ಕಳ ಪಾಲನಾ ಕೇಂದ್ರ ಆರಂಭಿಸಿರುವುದು ಸಮಾಜದ ಶ್ರೇಷ್ಠ ಕಾರ್ಯವಾಗಿದೆ. ಇಂತಹ ಪುಣ್ಯ ಕಾರ್ಯದಲ್ಲಿ ಸಮಾಜದ ಎಲ್ಲರೂ ಕೈಜೋಡಿ ಹೆಚ್ಚಿನ ಸಹಕಾರ ನೀಡಬೇಕು ಎಂದು ಕರೆ ನೀಡಿದರು. ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ| ವಿನೋದ್ ಮಸ್ಕರೇನ್ಹಸ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಮುಕ್ತಿ ಸ್ವಸಹಾಯ ಸಂಘದವರ ಕೆಲ ಮನೆಗಳಲ್ಲಿ ವಿಶೇಷ ಮಕ್ಕಳು ಇದ್ದು, ಅವರು ಬೇರೆ ದೂರದ ಪಾಲನಾ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸಲು ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರು ನಮ್ಮಲ್ಲಿಯೂ ಇಂತಹ ಕೇಂದ್ರ ಆರಂಭಿಸುವಂತೆ ನೀಡಿದ ಪ್ರೇರಣೆಯೇ ಈ ಕೇಂದ್ರ ಸ್ಥಾಪನೆಗೆ ಕಾರಣವಾಯಿತು ಎಂದರು. ಕೇಂದ್ರ ಆರಂಭಿಸುವ ಮೊದಲು ನಡೆದ ಸರ್ವೆಯಲ್ಲಿ ೫೦ ವಿಶೇಷ ಮಕ್ಕಳು ಪತ್ತೆಯಾಗಿದ್ದಾರೆ. ವಿವಿಧ ಸಂಘ-ಸಂಸ್ಥೆಯವರ ಸಹಕಾರದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಬೆಳ್ತಂಗಡಿಯ ವಿನಾಯಕ, ಹಂಸಗಿರಿ, ರೈತಬಂಧು ಮಿಲ್‌ನವರು ಮಕ್ಕಳಿಗೆ ಊಟಕ್ಕೆ ಅಕ್ಕಿ ಕೊಟ್ಟು ಸಹಕರಿಸುತ್ತಿದ್ದಾರೆ. ಬದ್ಯಾರ್ ಮತ್ತು ಸರಕಾರಿ ಆಸ್ಪತ್ರೆಯ ವೈದ್ಯರು ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಿ ದ್ದಾರೆ. ಸರಕಾರದಿಂದ ಯಾವುದೇ ಅನುದಾನ ಸಿಕ್ಕಿಲ್ಲ, ಆದರೆ ಶಾಸಕರು ಅನುದಾನದ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ರೂ.೧೨ಲಕ್ಷ ಅನುದಾನ ನೀಡಿದ ಕೆನರಾ ವೆಲ್‌ಫೇರ್ ಎಸೋಸಿಯೇಶನ್ ಕುವೈಟ್‌ನ ರೊನಾಲ್ಡ್ ಸುವಾರಿನ್ ಮತ್ತು ರೀನಾ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಟ್ಟಡ ಕಾಮಗಾರಿ ನಿರ್ವಹಿಸಿದ ಇಂಜಿನಿಯರ್ ಹಾಗೂ ಇತರ ಕೆಲಸ ನಿರ್ವಹಿಸಿದವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಪುಚಿನ್ ಕೃಷಿಕಾ ಸೇವಾ ಕೇಂದ್ರದ ಕಾರ್ಯದರ್ಶಿ ರೇ|ಫಾ| ಫ್ರಾನ್ಸಿಸ್ ಆಸೀಸ್ ಎಡ್ವಿನ್ ಮೊನಿಸ್ ಉಪಸ್ಥಿತರಿದ್ದರು. ಮಕ್ಕಳ ಸ್ವಾಗತ ನೃತ್ಯದ ಬಳಿಕ ವಿಮುಕ್ತಿ ಸಂಸ್ಥೆಯ ಸಹ ನಿರ್ದೇಶಕ ಫಾ| ರೋಹನ್ ಲೋಬೊ ಸ್ವಾಗತಿಸಿದರು. ಲವಿನಾ ಕಾರ್ಯಕ್ರಮ ನಿರೂಪಿಸಿ,  ಮೋಹಿನಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.