ಸುರ್ಯ ದೇವಸ್ಥಾನ : ಪ್ರತಿಷ್ಠಾ ವಾರ್ಷಿಕೋತ್ಸವ

Advt_NewsUnder_1
Advt_NewsUnder_1
Advt_NewsUnder_1

2

ನಡ : ಇತಿಹಾಸ ಪ್ರಸಿದ್ಧ ಮಣ್ಣಿನ ಹರಕೆಯ ಕ್ಷೇತ್ರ ಶ್ರೀ ಸದಾಶಿವರುದ್ರ ದೇವಸ್ಥಾನ ಸುರ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ.೪ರಂದು ಜರುಗಿತು. ಪೂರ್ವಾಹ್ನ ಗಂಟೆ ೭.೩೦ಕ್ಕೆ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಗಂಟೆ ೧೨.೩೦ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ೮ರಿಂದ ರಂಗಪೂಜೆ, ದೇವರ ಉತ್ಸವ ಮೊದಲಾದ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಎ.೫ರಿಂದ ಎ.೯ರವರೆಗೆ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು, ಎ.೮ರಂದು ಪೂರ್ವಾಹ್ನ ಗಂಟೆ ೮.೪೫ರಿಂದ ದರ್ಶನ ಬಲಿ ಉತ್ಸವ, ಮಧ್ಯಾಹ್ನ ೧೨.೩೦ರಿಂದ ಮಹಾಪೂಜೆ, ಮಧ್ಯಾಹ್ನ ೧ ಗಂಟೆಯಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ೮ ಗಂಟೆಯಿಂದ ಉತ್ಸವ ಹೊರಟು ನೃತ್ಯಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾ ಪೂಜೆ, ಭೂತ ಬಲಿ ಶಯನೋತ್ಸವ ಎ.೯ರಂದು ಸಂಜೆ ೬ಕ್ಕೆ ಅವಭೃತ ಸ್ನಾನಕ್ಕೆ ಹೊರಡುವುದು, ಧ್ವಜಾವರೋಹಣ, ರಾತ್ರಿ ೧೧ರಿಂದ ದೈವಗಳ ನೇಮ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.