ಕುರಾಯ ಸದಾಶಿವ ದೇವಸ್ಥಾನಕ್ಕೆ ಡಾ. ಹೆಗ್ಗಡೆ ಭೇಟಿ ಶಿಥಿಲಗೊಂಡ ದೇವಸ್ಥಾನಗಳ ರಕ್ಷಿಸುವ ಕಾರ್ಯ ಅಗತ್ಯ

 

4

ಬಂದಾರು: ದೇವಸ್ಥಾನ ಎಂದರೆ ದೇವರ ಶಕ್ತಿಯನ್ನು ಕೇಂದ್ರೀಕರಿಸುವ ಸ್ಥಳ, ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡು ಶಿಥಿಲಗೊಂಡ ಕ್ಷೇತ್ರಗಳ ಮರುನಿರ್ಮಾಣದ ಮೂಲಕ ಅವುಗಳನ್ನು ರಕ್ಷಿಸುವ ಕಾರ್ಯ ನಡೆಯಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ
ಸಂದರ್ಭದಲ್ಲಿ ಎ.೩ರಂದು ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.
ನಮ್ಮ ಹಿರಿಯರು ನೂರಾರು ವರ್ಷಗಳ ಹಿಂದೆಯೇ ಅಲ್ಲಲ್ಲಿ ಕ್ಷೇತ್ರಗಳ ನಿರ್ಮಾಣ ಮಾಡಿ ಶಕ್ತಿ ಸಂಚಯನ ಮಾಡಿದ್ದಾರೆ. ಇಂತಹ ದೇವಸ್ಥಾನಗಳ ರಕ್ಷಣೆ ಮಾಡಿದಲ್ಲಿ ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ನಾವು ದೇವರಲ್ಲಿ ಪರಿಪೂರ್ಣ ಮನಸ್ಸಿನ ಭಕ್ತಿಯಿಂದ ಪೂಜಿಸಿದರೆ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಉಜಿರೆ ದೇವಸ್ಥಾನದ ಆನುವಂಶೀಯ ಆಡಳಿತ ಮೊಕೇಸರ ಯು. ವಿಜಯರಾಘವ ಪಡ್ವೆಟ್ನಾಯ, ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಕಾರ್ಯಾಧ್ಯಕ್ಷ ಧರ್ಣಪ್ಪ ಗೌಡ ಅಂಡಿಲ, ಗೋಪಾಲಕೃಷ್ಣ ಹೊಳ್ಳ, ಕೋಶಾಧಿಕಾರಿ ಹರೀಶ್ ಹೊಳ್ಳ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ತಿಮ್ಮಯ ಗೌಡ, ಭಜನಾ ಮಂಡಳಿ ಅಧ್ಯಕ್ಷ ಧನಂಜಯ ಗೌಡ, ಕಾರ್ಯದರ್ಶಿ ಶಿವಣ್ಣ ಗೌಡ ಉಪಸ್ಥಿತರಿದ್ದರು. ನಾರಾಯಣ ಗೌಡ ಮಚ್ಚೂರು ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.