ವೇಣೂರು ಸಂಸ್ಕಾರ ಭಾರತಿ ಘಟಕದ ಉದ್ಘಾಟನೆ

venur samskara bharathi udhgatane copy

 

ವೇಣೂರು: ನಮ್ಮ ತುಳುನಾಡಿನ ಹಾಗೂ ದೇಶದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ಹೆತ್ತವರದ್ದಾಗಿದೆ. ಸಂಸ್ಕಾರ ಭಾರತಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ವೇಣೂರು ವೇಣೂರು ಪ್ರಾ.ಕೃ.ಪ.ಸ .ಸಂಘದ ಅಧ್ಯಕ್ಷ, ಚಿತ್ರನಟ ಸುಂದರ ಹೆಗ್ಡೆ ಹೇಳಿದರು.
ಅವರು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಅಖಿಲ ಭಾರತ ಸಂಘಟನೆ ಸಂಸ್ಕಾರ ಭಾರತಿ ವೇಣೂರು ಘಟಕದ ಉದ್ಘಾಟನಾ ಸಮಾರಂಭ ಹಾಗೂ ಯುಗಾದಿ ಮಹೋತ್ಸವದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಸ್ಥಾನದ ಆಡಳಿತಾಧಿಕಾರಿ ಕೆ. ಜಯಕೀರ್ತಿ ಜೈನ್ ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ನಿಟ್ಟೆ ಕಾಲೇಜಿನ ಉಪನ್ಯಾಸಕಿ ಅಕ್ಷಯ ಗೋಖಲೆ ಮಾತನಾಡಿ, ಭಾರತ ಬಹು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ರಾಷ್ಟ್ರವಾಗಿದೆ. ಈ ಸಮಾಜದ ಶ್ರೇಷ್ಠತೆ, ಆಚಾರ-ವಿಚಾರ, ಚಿಂತನೆಗಳನ್ನೂ ಉಳಿಸುವ ಕಾರ್ಯವನ್ನೂ ಸಂಸ್ಕಾರಭಾರತಿ ಮಾಡಲಿದೆ ಎಂದರು.
ರೋಹಿಣಿ ಅಜಯ್ ಹಾಗೂ ಹೇಮಲತಾ ಸಂಸ್ಕಾರ ಭಾರತಿಯ ಧ್ಯೇಯ ಗೀತೆ ಹಾಡಿದರು. ಸಂಸ್ಕಾರ ಭಾರತಿ ವೇಣೂರು ಘಟಕದ ಅಧ್ಯಕ್ಷ ಬಿ. ಶಶಿಕುಮಾರ್ ಇಂದ್ರ ಸ್ವಾಗತಿಸಿ ಕೋಶಾಧಿಕಾರಿ ವಿ. ನೇಮಯ್ಯ ಕುಲಾಲ್ ವೇಣೂರು ವಂದಿಸಿದರು. ಕಾರ್ಯದರ್ಶಿ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವೇಣೂರು ಸಾಂದೀಪನಿ ಶಿಶು ಮಂದಿರದ ಪುಟಾಣಿಗಳಿಂದ ನೃತ್ಯ, ಕುಮಾರಿ ಶ್ರವಣ ಹಲ್ಲಂದೋಡಿ ಇವರಿಂದ ಭರತನಾಟ್ಯ, ಕುಮಾರಿ ಪವಿತ್ರ ಪೈ ಹಾಗೂ ನಿರ್ಮಲ್ ಪೈ ಇವರಿಂದ ಶಾಸ್ತ್ರೀಯ ಸಂಗೀತ, ಕಲಾವಿದ ಸತೀಶ್ ಆಚಾರ್ಯ ನಡ್ತಿಕಲ್ಲು ಇವರಿಂದ ಮಿಮಿಕ್ರಿ ಇತ್ಯಾದಿ ಮನರಂಜನಾ ಕಾರ್ಯಕ್ರಮಗಳು ಜರುಗಿತು. ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಯಂದೂರು, ಮಹಿಳಾ ಮಂಡಲದ ಸದಸ್ಯರು, ದೇವಳ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.