ನಾರಾವಿ ಐ.ಸಿ.ವೈ.ಎಮ್ ಘಟಕದ ಬೆಳ್ಳಿಹಬ್ಬ

naravi icym belli habba mahithi copy

ನಾರಾವಿ : ಸಂತ ಅಂತೋನಿ ಚರ್ಚ್ ನಾರಾವಿ, ಇಲ್ಲಿನ ಭಾರತೀಯ ಕಥೋಲಿಕ ಯುವ ಸಂಚಲನ (ಐ.ಸಿ.ವೈ.ಎಮ್) ಇದರ ಬೆಳ್ಳಿಹಬ್ಬ ಸಮಾರೋಪ ಕಾರ‍್ಯಕ್ರಮವು ನಡೆಯಿತು. ಇದರ ಅಧ್ಯಕ್ಷತೆಯನ್ನು ಧರ್ಮಗುರುಗಳಾದ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹೊರವರು ವಹಿಸಿ, ಯುವಜನರು ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳದೆ ಸದಾ ಆಶಾವಾದಿಗಳಾಗಿ ಬಾಳಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಧರ್ಮಪ್ರಾಂತ್ಯದ ಐ.ಸಿ.ವೈ.ಎಮ್. ನಿರ್ದೇಶಕರಾದ ವಂದನೀಯ ಸ್ವಾಮಿ ರೊನಾಲ್ಡ್ ಡಿಸೋಜರವರು ಕಾರ‍್ಯಕ್ರಮವನ್ನು ಉದ್ಘಾಟಿಸಿದರು. ಇನ್ನೋರ್ವ ಅತಿಥಿ ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯ ಜೋಯೆಲ್ ಮೆಂಡೋನ್ಸ, ಆಗಮಿಸಿ ಯುವಜನರು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿ ಕರೆ ನೀಡಿದರು. ವೇದಿಕೆಯಲ್ಲಿ ವಂದನೀಯ ಸ್ವಾಮಿ ಲ್ಯಾನ್ಸಿ ಸಲ್ಡಾನ್ಹ, ಐ.ಸಿ.ವೈ.ಎಮ್.ನ ಕೇಂದ್ರೀಯ ಅಧ್ಯಕ್ಷ ಜಾಕ್ಸನ್ ಡಿಕೋಸ್ತ ಮತ್ತಿತರರು ಉಪಸ್ಥಿತರಿದ್ದರು. ಐ.ಸಿ.ವೈ.ಎಮ್. ಘಟಕದ ನಿರ್ದೇಶಕರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಸ್ವಾಗತಿಸಿ, ಐ.ಸಿ.ವೈ.ಎಮ್. ಅಧ್ಯಕ್ಷ ರೋವಿನ್ ಕಡೋಝ ವಂದಿಸಿದರು. ಜೋವೆಲ್ ಫೆರ್ನಾಂಡಿಸ್ ಕಾರ‍್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಯುವಜನರಿಂದ ಸಾಂಸ್ಕೃತಿಕ ಕಾರ‍್ಯಕ್ರಮ ಹಾಗೂ ಐಟಿ ದೇವದಾಸ್ ಕಾಪಿಕಾಡ್‌ರವರ ಬಂಗಾರ್ ತುಳು ನಾಟಕ ಪ್ರದರ್ಶಿಸಲ್ಪಟ್ಟಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.