HomePage_Banner_
HomePage_Banner_
HomePage_Banner_

ಗ್ರಾ.ಪಂ ವ್ಯಾಪ್ತಿಯಲ್ಲಿ ಕೋಳಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ

melanthabettu gramashabe copy ಗ್ರಾಮಸ್ಥರ ಬೇಡಿಕೆ
ಕೋಳಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ
ರುದ್ರ ಭೂಮಿಯನ್ನು ಸಾರ್ವಜನಿಕರಿಗೆ ಉಪಯೋಗಕ್ಕೆ ಸಿದ್ದಗೊಳಿಸುವುದು.
ಸೋಲಾರ್ ಸರಿಪಡಿಸುವಿಕೆ.
ರಸ್ತೆ ಮರು ಡಾಮರೀಕರಣ.
ನೀರಿನ ಸಮಸ್ಯೆ ನಿವಾರಿಸುವುದು.

ಮೇಲಂತಬೆಟ್ಟು : ಮೇಲಂತಬೆಟ್ಟು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಳಿನಿ ಸೂಳ್ಯೊಡಿ ರವರ ಅಧ್ಯಕ್ಷತೆಯಲ್ಲಿ ಮಾ.22ರಂದು ಶ್ರೀ ರಾಧಕೃಷ್ಣ ಸಭಾಭವನ ಸವಣಾಲಿನಲ್ಲಿ ಜರಗಿತು.
ಉಪಾಧ್ಯಕ್ಷ ಶಿಮರಾಮ ಗೌಡ, ತಾ.ಪಂ. ಸದಸ್ಯೆ ಜಯಶೀಲ, ಕುಶಾಲಪ್ಪ ಗೌಡ, ಶಿಕ್ಷಣ ಇಲಾಖೆಯ ರಘುಪತಿ, ಅಬಕಾರಿ ಸಬ್ ಇನ್ಸ್‌ಪೆಕ್ಟರ್ ವಿಶ್ವನಾಥ ಗೌಡ, ಕೃಷಿ ಇಲಾಖೆಯ ಧರ್ಣಪ್ಪ ಪೂಜಾರಿ, ಅರಣ್ಯ ಇಲಾಖೆಯ ಅಧಿಕಾರಿ ಪ್ರದೀಪ್, ಆರೋಗ್ಯ ಇಲಾಖೆಯ(ವನ್ಯಜೀವಿ ವಿಭಾಗ), ಪೊಲೀಸ್ ಇಲಾಖೆಯ ರಾಮಯ್ಯ ಹೆಗಡೆ, ತೋಟಗಾರಿಕೆ ಇಲಾಖೆಯ ಭೀಮರಾಯ, ಕಂದಾಯ ಇಲಾಖೆಯ, ಶಿಶು ಅಭಿವೃದ್ಧಿ ಯೋಜನೆ ಸರಸ್ವತಿ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಕಾರ್ಯದರ್ಶಿ ರಾಜಶೇಖರ ಶೆಟ್ಟಿ ಗತ ಸಭೆಯ ವರದಿಯನ್ನು, ಜಮಾ ಖರ್ಚು, ವಾರ್ಡ್ ಸಭೆಯ ವರದಿ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾರ್ಯಗಳ ಸಮಗ್ರ ವಿವರ ನೀಡಿದರು. ಸವಣಾಲಿನಲ್ಲಿ ಅಳವಡಿಸಿದ ಸೋಲಾರ್ ದೀಪ ಉರಿಯುವುದಿಲ್ಲ ಇದನ್ನು ಕೂಡಲೇ ಸರಿಪಡಿಸಿ ಎಂದು ಗ್ರಾ.ಪಂ ಮಾಜಿ ಸದಸ್ಯ ಸುಬ್ರಹ್ಮಣ್ಯ ಭಟ್ ಒತ್ತಾಯಿಸಿದರು.
ತುಳುನಾಡ ಒಕ್ಕೂಟದ ಕೋಶಾಧಿಕಾರಿ ರವಿಚಂದ್ರ ಸವಣಾಲು ಅನುದಾನಿತ ಶಾಲೆ ಮುಚ್ಚುವ ಸ್ಥಿತಿಯಲ್ಲಿದೆ ಇದನ್ನು ಕೂಡಲೇ ಸರಿಪಡಿಸಬೇಕು ಎಂದರು. ಮಾಜಿ ಗ್ರಾ.ಪಂ ಸದಸ್ಯರಾದ ಸಚಿನ್ ಕುಮಾರ್ ನೂಜೋಡಿ, ಚಂದ್ರಶೇಖರ್ ಹಾಗೂ ಮೇಲಂತಬೆಟ್ಟು ಗ್ರಾಮಸ್ಥರು ಮೇಲಂತಬೆಟ್ಟುವಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಇದನ್ನು ಕೂಡಲೇ ನಿಲ್ಲಿಸಬೇಕೆಂದು ಅಬಕಾರಿ ಇಲಾಖೆಗೆ ಮನವಿ ಮಾಡಿದರು. ಬೆಳ್ತಂಗಡಿ ಸವಣಾಲು ರಸ್ತೆಯಲ್ಲಿ ಸತ್ತ ಕೋಳಿಗಳನ್ನು ಹಾಗೂ ಕಸ ಕಡ್ಡಿಗಳನ್ನು ಬಿಸಾಡುತ್ತಿದ್ದು ಇದನ್ನು ಕೂಡಲೇ ನಿಲ್ಲಿಸುವಂತೆ ಜಿ.ವಿ ಸವಣಾಲು ರವಿಚಂದ್ರ, ದೇವಿಡ್ ಲೊಬೊ ಹಿಯಾಜೆ, ಕಿರಣ್ ಕುಮಾರ್ ವಕೀಲರು ಭಿನ್ನವಿಸಿದರು. ಸವಣಾಲಿನ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಎಂದು ಜಿ.ವಿ ಸವಣಾಲು ವಿನಂತಿಸಿದರು. ಇತ್ತೀಚೆಗೆ ತಾಲೂಕು ಪಂಚಾಯತ್ ಅನುದಾನದಿಂದ ಆದ ಕಾಂಕ್ರೀಟ್ ರಸ್ತೆಯ ಕಾಮಗಾರಿ ಸಮರ್ಪಕವಾಗಿಲ್ಲ ಅದನ್ನು ಸಂಬಂಧಪಟ್ಟ ಇಲಾಖೆ ಸರಿಪಡಿಸಬೇಕೆಂದು ಮಂಜದಬೆಟ್ಟು ಗ್ರಾಮಸ್ಥರು ಮನವಿ ನೀಡಿದರು.
ತುಳುನಾಡ್ ಒಕ್ಕೂಟ ತಾಲೂಕು ಸಮಿತಿ ಅಧ್ಯಕ್ಷ ಜಿ.ವಿ ಹರೀಶ್ ಸವಣಾಲು ರುದ್ರ ಭೂಮಿಯನ್ನು ತಾಲೂಕು ಪಂಚಾಯತ್‌ನವರು ನಿರ್ಮಿಸಿದ್ದಾರೆ. ಆದರೆ ಅಲ್ಲಿ ಕಂಪೌಂಡ್ ಮಾತ್ರವಿದೆ. ಅದು ಉಪಯೋಗಕ್ಕೆ ಇಲ್ಲ, ಅದು ಪ್ರದರ್ಶನಕ್ಕೆ ಇಟ್ಟದ್ದೆ ಎಂದು ತಾ.ಪಂ ಸದಸ್ಯರಲ್ಲಿ ಪ್ರಶ್ನಿಸಿದರು. ತಾ.ಪಂ ಅನುದಾನವಿಲ್ಲ ನೇರ ಗ್ರಾ.ಪಂ ಇದನ್ನು ಸರಿಪಡಿಸಬೇಕೆಂದು ಹೇಳಿದರು. ಗ್ರಾ.ಪಂ ಕಾರ್ಯದರ್ಶಿಯವರು ನಾವು ಸರಿಪಡಿಸುತ್ತೇವೆ ಎಂದು ಭರವಸೆಯಿತ್ತರು, ಅಭಿವೃದ್ಧಿ ಅಧಿಕಾರಿ ರಾಜಶೇಖರ ಶೆಟ್ಟಿ ಸ್ವಾಗತಿಸಿದರು. ಅನುದಾನಿತ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ಮಹೇಶ್ ಕುಮಾರ್ ನಡಕ್ಕರ, ನಾರಾಯಣ ಪೂಜಾರಿ ಮೇಲಂತಬೆಟ್ಟು, ಜಗದೀಶ್ ಗೌಡ ಮಡ್ಯಲಮಾರ್, ಪ್ರಭಾಕರ ಆಚಾರ್ಯ, ಸತೀಶ್ , ರೇಖಾ, ಸುಮಲತಾ, ಯಶೋಧ, ಮಾಜಿ ಗ್ರಾ.ಪಂ ಸದಸ್ಯ ಸಚಿನ್ ಕುಮಾರ್ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಗ್ರಾ.ಪಂ ಸಿಬ್ಬಂದಿ ವಸಂತ ವಂದಿಸಿ ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.