ಮಿತ್ತಬಾಗಿಲು : ಮಿತ್ತಬಾಗಿಲು ಗ್ರಾಮದ ಅಮೈ ನಿವಾಸಿ ಪಾರಂಪರಿಕ ಭತ್ತದ ತಳಿ ಸಂರಕ್ಷಿಸುತ್ತಿರವ ಬಿ.ಕೆ ದೇವರಾವ್ ಅವರಿಗೆ ಅಹಮದಾಬಾದ್ನ ಇನ್ವೇಶ್ಸನ್ ಫೌಂಡೇಶನ್ ಟ್ರಸ್ಟ್ ಇವರು ‘ಸೃಷ್ಠಿ ಸನ್ಮಾನ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಫೆ.5ರಂದು ಡೆಲ್ಲಿಯ ಪಾರ್ಲಿಮೆಂಟ್ ಭವನದಲ್ಲಿ ನಡೆದ ಇನ್ವೇಶ್ಸನ್ ಫೆಸ್ಟೀವೆಲ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ಮುಖರ್ಜಿ ಅವರು ದೇವರಾವ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಮಿತ್ತಬಾಗಿಲು ಗ್ರಾಮದ ಅಮೈಯಲ್ಲಿ ಕಳೆದ 30 ವರ್ಷಗಳಿಂದ ಸಾವಯವ ಕೃಷಿ ಮಾಡಿಕೊಂಡು ಬರುತ್ತಿರುವ ಬಿ.ಕೆ ದೇವರಾವ್ ಅವರು ಪಾರಂಪರಿಕ ಭತ್ತದ ಕೃಷಿಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಅವರು ತಮ್ಮ ಗದ್ದೆಯಲ್ಲಿ ಸುಮಾರು 154 ವಿವಿಧ ಭತ್ತದ ತಳಿಯನ್ನು ಬೆಳೆಸುತ್ತಿರುವುದು ವಿಶೇಷವಾಗಿದೆ. ಸುಮಾರು 72 ವರ್ಷ ಪ್ರಾಯದ ಅವರು ಇಂದಿಗೂ ನೇಜಿ ಹಾಕುವುದರಿಂದ ಹಿಡಿದು, ಗದ್ದೆಯಲ್ಲಿ ಭತ್ತ ನಾಟಿಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡುತ್ತಿರುವ ಹಿರಿಯ ಕೃಷಿಕರಾಗಿದ್ದಾರೆ. ಭತ್ತದ ಕೃಷಿಯಲ್ಲಿ ಬಹಳಷ್ಟು ಅನುಭವನ್ನು ಪಡೆದಿರುವ ಇವರು ಭತ್ತ 154 ತಳಿಗಳನ್ನು ನಾಟೀ ಮಾಡುತ್ತಿದ್ದು, ಅದರ ಬೀಜವನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಇವರ ಸಾಧನೆಯನ್ನು ಗುರುತಿಸಿ ಈಗಾಗಲೇ ಹಲವಾರು ಸಂಘ-ಸಂಸ್ಥೆಗಳು ಅವರನ್ನು ಗುರುತಿಸಿ ಗೌರವಿಸಿದ್ದಾರೆ.