ಸಾಧಾರಣ ಕಡಿಮೆ ತೂಕದ ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರ

Advt_NewsUnder_1
Advt_NewsUnder_1
Advt_NewsUnder_1

UJIRE MAKKALA TAPASANA SHIBIRA copyಉಜಿರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬೆಳ್ತಂಗಡಿ, ರೋಟರಿ ಕ್ಲಬ್ ಮತ್ತು ಆಯನ್ಸ್ ಕ್ಲಬ್ ಬೆಳ್ತಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಉಜಿರೆ, ಕೋಟ್ಯಾನ್ಸ್ ಏಜೆನ್ಸೀಸ್ ಬಿ.ಸಿ.ರೋಡ್, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘ, ಶಾರದಾ ಸೇವಾ ಟ್ರಸ್ಟ್ ಉಜಿರೆ, ಭಾರತೀಯ ದಂತ ವೈದ್ಯಕೀಯ ಸಂಘ, ಪುತ್ತೂರು ಶಾಖೆ ಹಾಗೂ ಜಾನ್ಸನ್&ಜಾನ್ಸನ್ ಇವುಗಳ ಜಂಟಿ ಆಶ್ರಯದಲ್ಲಿ ಸಾಧಾರಣ ಕಡಿಮೆ ತೂಕದ ಮಕ್ಕಳ ವಿಶೇಷ ಆರೋಗ್ಯ ತಪಾಸಣೆ ಹಾಗೂ ದಂತ ತಪಾಸಣಾ ಶಿಬಿರವು ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು.
ರೊಟರಿ ಕ್ಲಬ್ ನ ಅಧ್ಯಕ್ಷ ಡಿ.ಎಂ.ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಗೀತಾ ಪ್ರಭು ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಆನ್ಸ್ ಕ್ಲಬ್ ಅಧ್ಯಕ್ಷೆ ಡಾ.ಆಶಾ ರಾಘವೇಂದ್ರ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಸರಸ್ವತಿ. ಪಿ. ಕಾರ್ಯಕ್ರಮ ಉದ್ಘಾಟಿಸಿದರು ಅತಿಥಿಗಳಾದ ಶ್ರೀಮತಿ ಸುಧಾ, ಮಕ್ಕಳ ತಜ್ಞೆ ಡಾ.ಗೋವಿಂದ ಕಿಶೋರ್, ಅಮರ್ ಡ್ರಗ್ ಹೌಸ್ ಉಜಿರೆ ಮಾಲಕ ಕೇಶವ ಭಟ್ ಹಾಗೂ ಜಾನ್ಸನ್ ಎಂಡ್ ಜಾನ್ಸನ್ ಕಂಪನಿಯ ಶಿವಕುಮಾರ್ ಅವರು ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು.
ನಂತರ ನಡೆದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಗೋವಿಂದ ಕಿಶೋರ್, ಡಾ.ವಿನಯಾ ಕಿಶೋರ್, ಡಾ| ಸುಷ್ಮಾ ಡೋಂಗ್ರೆ, ಡಾ| ಸ್ಮಿತಾ ಜೈನ್, ಡಾ| ಭಾರತೀ.ಜಿ.ಕೆ. ಹಾಗೂ ದಂತ ವೈದ್ಯರಾದ ಡಾ| ರಾಘವೇಂದ್ರ ಪಿದಮಲೆ, ಡಾ| ಆಶಾ ರಾಘವೇಂದ್ರ, ಡಾ| ಅನಿತಾ ದಯಾಕರ್, ಡಾ| ದೀಪಾಲೀ ಡೋಂಗ್ರೆ ಇವರು ಗಳು ಭಾಗವಹಿಸಿದ್ದರು.
ರೊ.ಪ್ರಕಾಶ್ ಪ್ರಭು ಅವರು ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಜಾನ್ಸನ್ ಕಂಪನಿಯ ವತಿಯಿಂದ ಕಿಟ್‌ಗಳನ್ನು ವಿತರಿಸಲಾಯಿತು. ರೊ.ಯೋಗೀಶ್ ಭಿಡೆ ಹಾಗೂ ರೊ.ಶ್ರೀಧರ್ ಕೆ.ವಿ ಅವರು ಕಾರ್ಯಕ್ರಮ ಸಂಯೊಜಿಸಿದ್ದರು.
ಚಿತ್ರ. ವರದಿ : ಶೀಧರ ಕೆ.ವಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.