ಬಂದಾರು ಗ್ರಾ.ಪಂ. ಮಹಿಳಾ ಗ್ರಾಮಸಭೆ

Mahila GramaSabhe copyಬಂದಾರು :  ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ಜಾಗೃತಗೊಳ್ಳುವ ಮೂಲಕ ಹಾಗೂ ಉದ್ಯೋಗದಿಂದ ಸಂಘಟಿತರಾಗುವ ಮೂಲಕ ದೌರ್ಜನ್ಯ ಮುಕ್ತ ಜೀವನವನ್ನು ಮಾಡಲು ಸಾರ್ಧಯ.ಅದಕ್ಕಾಗಿ ಸರಕಾರ ಮಹಿಳೆಯರಿಗಾಗಿ ಮಹಿಳಾ ಗ್ರಾಮಸಭೆ ಎಂಬ ಕಲ್ಪನೆಯನ್ನು ಜಾರಿ ತಂದಿದ್ದು ಮಹಿಳೆಯರ ಏಳಿಗೆಗಾಗಿ ಸರಕಾರ ಅಣೆಕ ಯೋಜನೆಗಳನ್ನು ಜಾರಿ ತಂದಿದೆ.ಇದರ ಸದುಪಯೋಗವನ್ನು ಮಹಿಳೆಯರು ಮಾಡಿಕೊಳ್ಳ ಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಯಶೋಧರವರು ಹೇಳಿದರು ಅವರು ಬಂದಾರು ಗ್ರಾಮ ಪಂಚಾಯತ್ ವತಿಯಿಂದ ಮಹಿಳಾ ಗ್ರಾಮಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ನೀಡುವ ಮೂಲಕ ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಬೇಕು ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವ ಮೂಲಕ ಮಹಿಳೆಯರಿಗೆ ಒಳ್ಳೆಯ ಜೀವನ ನಡೆಸಲು ಪ್ರತಿಯೊಬ್ಬರು ಸಹಕರಿಸಬೇಕಾಗಿದೆ ಎಂದು ಹೇಳಿದರು.ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯದ ಬಗ್ಗೆ ವಿವರಿಸಿದರು.ಈ ಮಹಿಳ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಬಿ.ಕೆ ವಹಿಸಿಕೊಂಡು ಮಹಿಳೆಯರ ಜೀವನ ಸುಧಾರಣೆಗೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿ ಸಾಧ್ಯ ಮತ್ತು ಮಹಿಳೆಯರು ಸಂಘಟಿತರಾಗುವ ಮೂಲಕ ದೌರ್ಜನ್ಯವನ್ನು ತಡೆಯಬಹುದು ಸರಕಾರದ ಅನೇಕ ಯೋಜನೆಗಳನ್ನು ಮತ್ತು ಮಹಿಳಾ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಹೇಳಿದರು.ಈ ಮಹಿಳಾ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತ್‌ನ ಸರ್ವಸದಸ್ಯರು ಉಪಸ್ಥಿತರಿದ್ದರು.ಇದೇ ಸಂಧರ್ಭದಲ್ಲಿ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ಸುಮಯ್ಯ ಜಿ.ಎಚ್ ಇವರು ಸ್ವಾಗತಿಸಿ ಎಲ್ಲರಿಗೂ ಧನ್ಯವಾದವಿತ್ತರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.