ಸೇವಾ ಭಾರತಿಯ ಸೇವಾ ಕಾರ್ಯಗಳ ಲೋಕಾರ್ಪಣೆ : ಜೀವನದಲ್ಲಿ ತ್ಯಾಗ ಮಾಡುವವರು ಮಾತ್ರ ಸೇವೆ ಮಾಡಲು ಸಾಧ್ಯ : ನಿಕೇತರಾಜ್

Advt_NewsUnder_1
Advt_NewsUnder_1
Advt_NewsUnder_1

  1 copy ವಿವಿಧ ಸೇವಾ ಕಾರ‍್ಯಾಗಾರ ಲೋಕಾರ್ಪಣೆ :
ಇದೇ ಸಂದರ್ಭದಲ್ಲಿ ತಾಲೂಕಿನ 41 ಗ್ರಾಮಗಳ ಆಯ್ದ 37 ಸರಕಾರಿ ಶಾಲೆಗಳ ಗ್ರಂಥಾಲಯಕ್ಕೆ ರೂ 1.83 ಲಕ್ಷ ಮೌಲ್ಯದ ಪುಸ್ತಕಗಳನ್ನು ಸಾಂಕೇತಿಕವಾಗಿ 5 ಶಾಲೆಗಳಿಗೆ ವಿತರಿಸಲಾಯಿತು.. ತಾಲೂಕಿನ 10 ಅರ್ಹ ಮನೆಗಳಿಗೆ ರೂ 10,000 ವೆಚ್ಚದ ಉಚಿತ ಸೋಲಾರ್ ವಿದ್ಯುತ್ ಘಟಕಗಳನ್ನು ವಿತರಿಸಲಾಯಿತು. ಬೆನ್ನು ಮೂಳೆ ಮುರಿತಕ್ಕೊಳಗಾದ 10 ಮಂದಿ ದಿವ್ಯಾಂಗರಿಗೆ ಮತ್ತು ಕನ್ಯಾನದ ಭಾರತ ಸೇವಾಶ್ರಮಕ್ಕೆ ಗಾಲಿ ಕುರ್ಚಿ ವಿತರಿಸಲಾಯಿತು. ತಾಲೂಕಿನ 241 ಸರಕಾರಿ ಶಾಲೆಗಳ 606 ಅಡುಗೆ ಸಹಾಯಕಿಯರಿಗೆ ಬೇಳ್ತಂಗಡಿ ತಾ.ಪಂ. ಅಕ್ಷರದಾಸೋಹ ಬಿಸಿಯೂಟ ಯೋಜನೆಯ ನಿರ್ದೇಶಕ ಕೆ.ಜಿ ಲಕ್ಷಣ ಶೆಟ್ಟಿ ಉಚಿತ ರಕ್ಷಾಕವಚ (ಏಫ್ರನ್) ಸಾಂಕೇತಿಕವಾಗಿ ವಿತರಿಸಿ ಸೇವಾಭಾರತಿಯ ವಿಸ್ವಾರ್ಥ ಸೋಲಿಲ್ಲದ ಸೇವಾಕಾರ್ಯ ರಾಷ್ಟ್ರವ್ಯಾಪ್ತಿಯಾಗಿ ಬೆಳೆದು ಸಂಸ್ಥೆಗೆ ನೋಬೆಲ್ ಪಾರಿತೋಷಕ ಪ್ರಾಪ್ತವಾಗಲೆಂದು ಶುಭ ನುಡಿದರು. ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಆಯಾ ಗ್ರಾಮಗಳಲ್ಲಿ ಕಂಪ್ಯೂಟರ್ ತರಬೇತಿ ಶಿಕ್ಷಣ ಯೋಜನೆಯ ಶುಭಾರಂಭಕ್ಕೆ ಸಾಂಕೇತಿಕವಾಗಿ ಕಂಪ್ಯೂಟರ್ ವಿತರಿಸಲಾಯಿತು.

ಉಜಿರೆ: ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಅದ್ಭುತ ಶಕ್ತಿಯನ್ನಾಗಿ ಬೆಳೆಸಲು ಏಕಾಗ್ರತೆಯೇ ಪ್ರಮುಖ ಸಾಧನ.ಜೀವನದಲ್ಲಿ ಏನನ್ನಾದರೂ ತ್ಯಾಗ ಮಾಡುವವರಿಗೆ ಮಾತ್ರ ಸೇವೆ ಮಾಡಲು ಸಾದ್ಯ. ಸೇವೆ ಮಾಡಲು ಯಾವುದೇ ಪದವಿಯ ಅರ್ಹತೆ ಬೇಕಾಗಿಲ್ಲ.. ಬೇಕಾಗಿರುವುದು ಕೇವಲ ಹೃದಯ ಶ್ರೀಮಂತಿಕೆ ಮಾತ್ರ.. ನಾವು ಹಣ; ಕೀರ್ತಿಗಾಗಿ ದುಡಿಯದೆ ಜೀವನ ಸಾರ್ಥಕತೆಗಾಗಿ ದುಡಿಯಬೇಕು. ನಾವು ಯಾವುತ್ತೂ ಕೇಡಿಯಾಗುವುದಿಲ್ಲವೆಂಬ ಸಂಕಲ್ಪ ಮಾಡುವುದೇ ಅತಿ ದೊಡ್ಡ ದೇಶ ಸೇವೆಯೆಂದು ಕರ್ನಾಟಕ ಯುವ ಭಾರತ್ ರಾಜ್ಯ ಪ್ರಭಾರಿ ನಿಕೇತ್‌ರಾಜ್ ನುಡಿದರು.
ಅವರು ಫೆ.18ರಂದು ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಹಿ.ಪ್ರಾ.ಶಾಲಾ ವಠಾರದ ಜ್ಞಾನಗಂಗಾ ಸಭಾಂಗಣದಲ್ಲಿ ಸೇವಾ ಭಾರತಿಯ 14ನೇ ವಾರ್ಷಿಕ ಸಮಾರಂಭದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಲೋಕಾರ್ಪಣೆಗೊಳಿಸಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು ಬದುಕಿನಲ್ಲಿ ಸೇವೆಯನ್ನು ಉಸಿರಾಗಿಸಿ ಕೊಂಡವರು ಸ್ವಾಮಿ ವಿವೇಕಾನಂದರು; ಮನಸ್ಸು ಮಾಡಿದರೆ ನಮ್ಮಲ್ಭೊಬ್ಬರು ಭಗತ್‌ಸಿಂಗ್,ಅಬ್ದುಲ್‌ಕಲಾಂ ಮೊದಲಾದ ನೇತಾರರು ಹುಟ್ಟಿಬರಲು ಸಾದ್ಯವೆಂದು ಅಬ್ದುಲ್ ಕಲಾಂ ಅವರ ಆದರ್ಶ ವ್ಯಕ್ತಿತ್ವವನ್ನು ಮಕ್ಕಳಿಗೆ ಮನದಟ್ಟಾಗುವಂತೆ ಕಥೆಯ ಮೂಲಕ ತಿಳಿಸಿದರು. ಕಾರ್ಯಕ್ರಮವನ್ನು ಉದ್ಟಾಟಿಸಿದ ನ್ಯಾಯವಾದಿ, ಸೇವಾ ಭಾರತಿಯ ಪೋಷಕ ಬಿ.ಕೆ.ಧನಂಜಯರಾವ್ ಮನಷ್ಯ ಸಹಜ ಬೆಳೆಯುವ ಮಕ್ಕಳಲ್ಲಿ ಸೇವಾ ಮನೋಭಾವ ಸ್ವಯಂಪ್ರೇರಣೆಯಿಂದ ಮೂಡಿ ಬರಬೇಕು. ಸೇವಾ ಕೈಂಕರ್ಯಗಳು ನಿರಂತರವಾಗಿ ; ಅರ್ಥಪೂರ್ಣವಾಗಿ ನಡೆಯುವ ಮೂಲಕ ಸುಖ ಶಾಂತಿ ನೆಮ್ಮದಿ ಸಂಸ್ಕೃತಿ ಬೆಳಗಲಿ ಎಂದು ಆಶಿಸಿ ಶುಭಕೋರಿದರು.
ಬಂಟ್ವಾಳ ತಾಲೂಕಿನ ಕನ್ಯಾನ ಭಾರತ ಸೇವಾಶ್ರಮ ಸಂಸ್ಥೆಯ ಪರವಾಗಿ ಈಶ್ವರ ಭಟ್ ದಂಪತಿಗಳು ಮತ್ತು ಬಂಗಾಡಿಯ ಪ್ರಗತಿ ಪರ ಭತ್ತದ ತಳಿ ಕೃಷಿ ಸಾಥಕ ಬಿ.ಕೆ ದೇವರಾವ್ ದಂಪತಿಗಳನ್ನು ವಿಶೇಷವಾಗಿ ಸಮ್ಮಾನಿಸಿ ಗೌರವಿಸಲಾಯಿತು. ಸೇವಾಭಾರತಿ ಅಧ್ಯಕ್ಷ ಬಿ.ಕೃಷ್ಣಪ್ಪ ಗುಡಿಗಾರ್ ಸ್ವಾಗತಿಸಿ : ಕಾರ್ಯದರ್ಶಿ ವಿನಾಯಕರಾವ್ ಕನ್ಯಾಡಿ ಪ್ರಸ್ತಾವಿಸಿ ಸಾರ್ವಜನಿಕರು ಸೇವಾಭಾರತಿ ಗೆ ನೀಡುವ ಕೊಡುಗೆ ದೇಣಿಗೆಗಳಿಗೆ 8೦ಜಿ ಅನ್ವಯ ಕರ ವಿನಾಯಿತಿಯಿದೆಯೆಂದು ತಿಳಿಸಿದರು. ಈಶ್ವರಭಟ್ ಸಮ್ಮಾನಕ್ಕೆ ಉತ್ತರಿಸಿ ಸೇವಾಭಾರತಿಯ ಸೇವಾ ಕಾರ್ಯಗಳ ಬಗೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಹರೀಶ್‌ರಾವ್ ಮುಂಡ್ರುಪ್ಪಾಡಿ ವಾರ್ಷಿಕ ವರದಿ ಮಂಡಿಸಿ : ಮಹೇಶ ಕನ್ಯಾಡಿ ಮತ್ತು ಶ್ರೀಧರ ಕೆ.ವಿ ಸಮ್ಮಾನಿತರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಸಹ ಸಂಸ್ಥೆಗಳ ಪದಾಧಿಕಾರಿಗಳಾದ ಹರಿದಾಸ ಗಾಂಭೀರ. ದಿವಾಕರ ಆಚಾರ್ಯ, ವಸಂತಿ ಗೌಡ, ಸವಿತಾ ಎಂ ರಾವ್.ಪಿ ರಾಜಶೇಖರ ಹೆಬ್ಬಾರ್,ಕೆ.ಕುಸುಮಕರ ಗೌಡ, ಡಿ.ಸದಾಶಿವ, ಕೆ.ಈಶ್ವರಭಟ್. ಅರುಣ ಶಿಬೆಲ್ಲೊ, ಕೇಶವ ಎಂ, ಮುರಲೀಧರ ದಾಸ್ ಮೊದಲಾದವರು ಉಪಸ್ಥಿತರಿದ್ದರು. ಕರ್ನೋಡಿ ಶಾಲೆಯ ವಿಕಲಾಂಗ ಗೈಡ್ಸ್ ಪ್ರತಿಭೆ ಪಾವನಾ ಕೆ.ಎಸ್. ಅವರನ್ನು ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಯಿತು. ರಾಜಪ್ರಸಾದ್ ಪೋಳ್ನಾಯ ಮತ್ತು ಸ್ವರ್ಣಗೌರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಜ್ಞಾನಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ವಂದಿಸಿದರು.
ಚಿತ್ರ/ವರದಿ: ಸಾಂತೂರು ಶ್ರೀನಿವಾಸ ತಂತ್ರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.