ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಶಿಲಾನ್ಯಾಸ, ಧರ್ಮ ಕ್ಷೇತ್ರಗಳ ಉನ್ನತಿಯಿಂದ ಸಮಾಜದಲ್ಲಿ ನೆಮ್ಮದಿ : ಬ್ರಹ್ಮಾನಂದ ಶ್ರೀ

gejjegiri shilanyasa copy  ಪುನರುತ್ಥಾನಕ್ಕೆ ಶಿಲಾನ್ಯಾಸ
* ಕೋಟಿ-ಚೆನ್ನಯ ಮೂಲಸ್ಥಾನ ಗರಡಿ ನಿರ್ಮಾಣ
* ಗರಡಿಯ ಬಾಹ್ಯದಲ್ಲಿ ಬೆರ್ಮೆರ್ ಗುಂಡ
* ಗೆಜ್ಜೆಗಿರಿಯ ತಪ್ಪಲಲ್ಲಿ ೪೫೦ ವರ್ಷಗಳಿಂದಲೂ ಸುಪ್ತವಾಗಿರುವ ಮಾತೆ ದೇಯಿ ಬೈದ್ಯೆತಿಯ ಸಮಾಧಿಗೆ ಹೊಸ ರೂಪ.
* ಸಾಯನ ಬೈದ್ಯರು, ದೇಯಿ ಬೈದ್ಯೆತಿ ಮತ್ತು ಕೋಟಿ-ಚೆನ್ನಯರುಬಾಳಿ ಬೆಳಗಿದ್ದ ಮನೆಗೆ ಮತ್ತೆ ಪಾರಂಪರಿಕ ರೂಪ ಕೊಟ್ಟು ಭವ್ಯ ಧರ್ಮ ಚಾವಡಿ ನಿರ್ಮಾಣ
* ಧರ್ಮದೈವ ಧೂಮಾವತಿ ದೈವಸ್ಥಾನ ಮರು ನಿರ್ಮಾಣ
* ಸಂಪೂರ್ಣ ಜೀರ್ಣಾವಸ್ಥೆ ತಲುಪಿರುವ ಕುಪ್ಪೆ ಪಂಜುರ್ಲಿ ದೈವಸ್ಥಾನ ಪುನರ್‌ನಿರ್ಮಾಣ
* ಕಲ್ಲಾಲ್ದಾಯ ಸಾನಿಧ್ಯ
* ಅನುವಂಶಿಕ ಮೊಕ್ತೇಸರರ ಮನೆ

ಬೆಳ್ತಂಗಡಿ : ವಸುದೈವ ಕುಟುಂಬಕಂ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಆಶಯದಂತೆ ಶಾಂತಿ ನೆಲೆಸಬೇಕಾದರೆ ಧರ್ಮ ಕ್ಷೇತ್ರಗಳ ಉನ್ನತಿಯಾಗಬೇಕು. ರಾಮ ಲಕ್ಷ್ಮಣರಿಗೆ ಸಮಾನರಾದ ಕೋಟಿ-ಚೆನ್ನಯರು, ಮಾತೆ ದೇಯಿ ಬೈದ್ಯೆತಿಯ ಕ್ಷೇತ್ರ ಅಭಿವೃದ್ಧಿಗೆ ಕೈಂಕರ್ಯ ತೊಡುವ ಮೂಲಕ ಸುವರ್ಣಾಕ್ಷರದಲ್ಲಿ ಬರೆದಿಡುವ ಸಂದರ್ಭ ಸೃಷ್ಟಿಯಾಗಿದೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಮಾತೆ ದೇಯಿ ಬೈದ್ಯತಿ ಮತ್ತು ಕೋಟಿ-ಚೆನ್ನಯರ ಮೂಲಸ್ಥಾನ ವಾಗಿರುವ ಪೂತ್ತೂರು ತಾಲೂಕು ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಮೂಲಸ್ಥಾನ ಗರಡಿ ಸೇರಿ ೯ ಐತಿಹಾಸಿಕ ಸ್ಥಳಗಳ ಪುನರುತ್ಥಾನಕ್ಕೆ ಫೆ.೧೯ ರಂದು ನಡೆದ ಶಿಲಾನ್ಯಾಸ ಕಾರ್ಯಕ್ರಮದ ಸಭೆಯಲ್ಲಿ ಅವರ ಆಶೀರ್ವಚನ ನೀಡಿದರು.
ಅಭಿವೃದ್ಧಿಗೆ ಸಹಕಾರ
ಸಭಾ ಕಾರ್ಯಕ್ರಮ ಉದ್ಘಾಟಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಸಾಮಾಜಿಕ ಅಸಮಾನತೆ ವಿರುದ್ಧ ಧ್ವನಿಯೆತ್ತಿ ಹೋರಾಟದ ಕಿಚ್ಚು ಹಚ್ಚಿರುವರು ಕೋಟಿ-ಚೆನ್ನಯರು.
ಅವರ ಮೂಲ ಕ್ಷೇತ್ರ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು ಎಂದರು.
ಬಲಾಢ್ಯತೆ ಹೊಂದಬೇಕು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬಿಲ್ಲವ ಸಮುದಾಯದವರು ಸಾಮಾಜಿಕ, ರಾಜಕೀಯವಾಗಿ ಬಲಾಢ್ಯತೆ ಹೊಂದಬೇಕು. ಗೆಜ್ಜೆಗಿರಿ ಕ್ಷೇತ್ರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ೫೦ಲಕ್ಷ ರೂ. ಅನುದಾನ ಒದಗಿಸಲಾಗುವುದು ಎಂದು ಭರವಸೆಯಿತ್ತರು.
ಬೆಳ್ತಂಗಡಿ ಶಾಸಕ .ಕೆ ವಸಂತ ಬಂಗೇರ ನಿಧಿ ಸಮರ್ಪಣಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಬಿಲ್ಲವರಲ್ಲಿ ಸಂಘಟನೆ ಇದೆ. ಶಕ್ತಿ ಇದೆ. ಆದರೆ ಜನಾರ್ದನ ಪೂಜಾರಿಯವರನ್ನು ಸೋಲಿಸುವಾಗ ಈ ಶಕ್ತಿ, ಸಂಘಟನೆ ಎಲ್ಲಿತ್ತು. ಸಮುದಾಯ ಒಗ್ಗಟ್ಟಾಗಿ
ಇರುತ್ತಿದ್ದರೆ ಪೂಜಾರಿಯವರು ಖಂಡಿತಾ ಸೋಲುತ್ತಿರಲಿಲ್ಲ. ಪಕ್ಷ ಯಾವುದೇ ಇರಲಿ, ಸಮುದಾಯದಲ್ಲಿ ಸಮುದಾಯದವರನ್ನು ಬೆಂಬಲಿಸುವ ಶಕ್ತಿ ಬರಬೇಕು. ಸಮಾಜ ಒಗ್ಗಾಟ್ಟಾಗದಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ ಎಂದರು. ಇಂದಿನ ಶಿಲಾನ್ಯಾಸ ಮುಂದಿನ ವರ್ಷ ಉದ್ಘಾಟನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿ ಎಂಬುದೇ ನನ್ನ ಪ್ರಾರ್ಥನೆಯಾಗಿದೆ ಎಂದು ಅವರು ಹೇಳಿದರು.
ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಗೆಜ್ಜೆಗಿರಿ ನಂದನ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದರು. ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಶ್ರೀ ಕ್ಷೇತ್ರದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.
ಕೇರಳ ವರ್ಕಳ ಶಿವಗಿರಿ ಮಠಾಧೀಶ ಶ್ರೀ ವಿಶುದ್ಧಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭ ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರನಟ, ನಿರ್ಮಾಪಕ ಡಾ| ರಾಜಶೇಖರ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವಿನಯ್ ಕುಮಾರ್ ಸೊರಕೆ, ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಮಧು ಬಂಗಾರಪ್ಪ, ರಾಜ್ಯ ಮಹಿಳಾ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ, ಸದಸ್ಯ ರಾಧಾಕೃಷ್ಣ ಬೋರ್ಕರ್, ಬಡಗನ್ನೂರು ಗ್ರಾ.ಪಂ ಅಧ್ಯಕ್ಷ ಕೇಶವ ಗೌಡ, ವಿವಿಧ ಕಡೆಗಳ ಬಿಲ್ಲವ ಸಂಘಗಳ ಪ್ರಮುಖರು, ವಿವಿಧ ಮುಖಂಡರು ವೇದಿಕೆಯಲ್ಲಿದ್ದರು.
ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಲೀಲಾವತಿ ಪೂಜಾರಿ ಮತ್ತು ಮಕ್ಕಳು, ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಕಾರ್ಯಾಧ್ಯಕ್ಷರಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪದಾಧಿಕಾರಿಗಳು ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಸೋಮನಾಥ ಬಂಗೇರ, ಕಾರ್ಯದರ್ಶಿ ನಿತ್ಯಾನಂದ ನಾವರ, ಮಹಿಳಾ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಕಾರ್ಯದರ್ಶಿ ರಾಜಶ್ರೀ ರಮಣ್, ಜಗನ್ನಾಥ ಬಂಗೇರ, ಶೇಖರ ಬಂಗೇರ, ಜಯಂತ್ ಕೋಟ್ಯಾನ್ ಸಚಿನ್ ನೂಜೋಡಿ, ಧರಣೇಂಧ್ರ ಕುಮಾರ್, ರತ್ನಾಕರ ಬುಣ್ಣನ್, ಸುಧೀರ್ ಆರ್. ಸುವರ್ಣ, ಜಯವಿಕ್ರಮ್ ಹಾಗೂ ವಲಯಾಧ್ಯಕ್ಷರು ಬೆಳ್ತಂಗಡಿ ತಾಲೂಕು ಸಮಿತಿಯ ಪದಾಧಿಕಾರಿಗಳು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.