ತೆಂಕಕಾರಂದೂರು : ಅಕ್ರಮ ದಿಮ್ಮಿ ಸಾಗಿಸುತ್ತಿದ್ದ ಪಿಕಪ್ ವಶ

thenkakarandooru akrama marada dimmi copyತೆಂಕಕಾರಂದೂರು : ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿ ಅಕೇಶಿಯಾ ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಸಂಖ್ಯೆ ಕೆ.ಎ.21 ಬಿ 5249ನ್ನು ಫೆ.14ರಂದು ರಾತ್ರಿ 10.30ರ ವೇಳೆ ವಾಹನ ಸಹಿತ ಅಂದಾಜು 8 ಲಕ್ಷ ಸೊತ್ತನ್ನು ಅಳದಂಗಡಿ ಉಪ ವಲಯ ಅರಣ್ಯಾಧಿಕಾರಿ ರಾಜೇಶ್ ಇವರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ನಾವೂರು ಗ್ರಾಮದ ಕೊಡೇಲು ಮನೆಯ ಸಂಜೀವ ಪೂಜಾರಿಯವರ ಪುತ್ರ ರಮಾನಂದ ಸಾಲಿಯಾನ್, ಮುಂಡೂರು ಗ್ರಾಮದ ಪರಂಬುಡೆ ಮನೆ ಸಾಂತಪ್ಪ ಬಂಗೇರರವರ ಪುತ್ರ ಸುರೇಶ್, ಮುಂಡೂರು ಗ್ರಾಮದ ಬಲ್ಲಿದಡ್ಡ ಮನೆ, ಧರ್ಣಪ್ಪ ಸಾಲಿಯಾನ್‌ರವರ ಪುತ್ರ ವಸಂತರವರ ಮೇಲೆ ಅರಣ್ಯ ತಕ್ಷೀರು ದಾಖಲಿಸಿಕೊಳ್ಳಲಾಗಿರುತ್ತದೆ.
ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ರಕ್ಷಕರಾದ ಶಶಿಕಾಂತ್, ಜನಾರ್ಧನ ಗೌಡ ಹಾಗೂ ಅರಣ್ಯ ವೀಕ್ಷಕರಾದ ಸಂತೋಷ್, ವೆಂಕಪ್ಪ ನಾಯ್ಕರವರ ಸಹಕಾರದಿಂದ ಹಾಗೂ ವೇಣೂರು ವಲಯಯ ವಲಯ ಅರಣ್ಯಧಿಕಾರಿಯಾದ ಸುಬ್ರಹ್ಮಣ್ಯ ಆಚಾರ್ ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿದ್ದಾರೆ.
ಸದರಿ ಪ್ರಕರಣವನ್ನು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ವಿ ಅಮರನಾಥ್ ಐಎಫ್‌ಎಸ್ ಇವರ ನಿರ್ದೇಶನದಂತೆ ಸುಬ್ರಹ್ಮಣ್ಯ ಹೆಚ್.ಆರ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮೂಡಬಿದ್ರೆ ಉಪವಿಭಾಗ ಇವರು ಸದರಿ ಪ್ರಕರಣದ ತನಿಖೆಯನ್ನು ಕೈಗೊಂಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.