ಕೆಂಪೇಗೌಡ ವಿಮಾನ ನಿಲ್ದಾಣದ ಹೆಸರು ಬದಲಾವಣೆ ?

  ಇನ್ಮುಂದೆ ವಿಮಾನ ನಿಲ್ದಾಣಗಳನ್ನು ಆಯಾ ಊರಿನ ಹೆಸರಿನಿಂದಲೇ ಕರೆಯಬೇಕು. ಇಷ್ಟು ದಿನ ಐತಿಹಾಸಿಕ ಪುರುಷರು ಅಥವಾ ಗಣ್ಯ ವ್ಯಕ್ತಿಗಳ ಹೆಸರಿನಿಂದ ಕರೆಯುತ್ತಿದ್ದ ವಿಮಾನ ನಿಲ್ದಾಣದ ಹೆಸರುಗಳು ಇತಿಹಾಸದ ಪುಟ ಸೇರಲಿವೆ. ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣವನ್ನು ಕೆಂಪೇಗೌಡ ಏರ್‌ಪೋರ್ಟ್ ಮಾಡಿದ್ದ ಮೋದಿ ಸರ್ಕಾರ, ಆ ಹೆಸರನ್ನ ಅಳಿಸೋಕೆ ಮುಂದಾಗಿದೆ. ಕೆಂಪೇಗೌಡ ಏರ್‌ಪೋರ್ಟ್, ಇಂದಿರಾಗಾಂಧಿ ಏರ್‌ಪೋರ್ಟ್, ರಾಜೀವ್ ಗಾಂಧಿ ಏರ್‌ಪೋರ್ಟ್, ಅಂಬೇಡ್ಕರ್ ಏರ್‌ಪೋರ್ಟ್ ಅನ್ನೋ ಹೆಸರುಗಳು ಇನ್ಮುಂದೆ ಮರೆಯಾಗಲಿದೆ. ಯಾಕಂದ್ರೆ ಕೇಂದ್ರ ಸರ್ಕಾರ ಹೊಸ ಮಸೂದೆಯೊಂದನ್ನ ಜಾರಿಗೆ ತರುತ್ತಿದ್ದು, ಯಾವುದೇ ವಿಮಾನ ನಿಲ್ದಾಣಗಳಿಗೆ ವ್ಯಕ್ತಿಗಳ ಹೆಸರನ್ನ ಇಡುವಂತಿಲ್ಲ ಅಂತ ಮಸೂದೆ ಸಿದ್ಧಪಡಿಸಿದೆ. ಅಷ್ಟೇ ಅಲ್ಲದೆ ಈ ಮಸೂದೆಯಲ್ಲಿ ಪ್ರಸ್ತ್ತುತ ಇರೋ ವಿಮಾನ ನಿಲ್ದಾಣಗಳ ಹೆರಸನ್ನು ಬದಲಾವಣೆ ಮಾಡುವಂತಹ ನಿಯಮಗಳನ್ನು ಅಳವಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.