ಫೆ.18-20: ಕಾಪು-ಉಪ್ಪರಡ್ಕ ದೈವಸ್ಥಾನಗಳ ವಾರ್ಷಿಕ ಜಾತ್ರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ಹತ್ಯಡ್ಕ: ಇಲ್ಲಿಯ ಅರಸಿನಮಕ್ಕಿ, ಹತ್ಯಡ್ಕ ಗ್ರಾಮದ ಉಪ್ಪರಡ್ಕ ದೈವಗಳ ವಾರ್ಷಿಕ ಜಾತ್ರೆಯು ಫೆ.18ರಿಂದ ಫೆ.20ರ ವರೆಗೆ ಜರುಗಲಿದೆ.
ಫೆ.18ರಂದು ಕಾಪು ಸ್ಥಾನದಲ್ಲಿ ಗಣಹೋಮ, ತೋರಣ, ಭಂಡಾರ ಹಿಡಿಯುವುದು ಮತ್ತು ಬ್ರಹ್ಮರು, ಕುಮಾರ, ಬೊಳಾ, ಪಾಲೇಶರಾಯ, ಪಾಳೆದುಳ್ಳಾಲ್ತಿ, ಮುಗೇರ ಪಂಜುರ್ಲಿ ದೈವಗಳ ನೇಮೋತ್ಸವ ಜರುಗಲಿದೆ.
ಫೆ.19ರಂದು ಮಧ್ಯಾಹ್ನ ಮೆದಿನದಿಂದ ರುದ್ರಚಾಮುಂಡಿ ದೈವದ ಭಂಡಾರ ತರುವುದು, ಸಂಜೆ ಗುತ್ತುವಿನಿಂದ ಶಿರಾಡಿ ದೈವದ ಭಂಡಾರ ತರುವುದು ನಂತರ ಉಪ್ಪರಡ್ಕದಲ್ಲಿ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು. ರಾತ್ರಿ ಸುರೇಂದ್ರನ ಸಂಗೀತ ಎಂಬ ತುಳು ಸಾಮಾಜಿಕ ನಾಟಕ ನಡೆಯಲಿದೆ. ರಾತ್ರಿ ಗಂಟೆ 10ರಿಂದ ಬೆಳಗ್ಗಿನ ತನಕ ಬ್ರಹ್ಮರು, ರುದ್ರಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ಇತ್ಯಾದಿ ದೈವಗಳ ನೇಮೋತ್ಸವ ಜರುಗಲಿದೆ. ಫೆ.20ರಂದು ಕೊಡಮಣಿತ್ತಾಯ, ಶಿರಾಡಿ, ಬಚ್ಚನಾಯ್ಕ, ಗುಳಿಗ ಇತ್ಯಾದಿ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಫೆ.21ರಂದು ಶುದ್ಧಕಲಶ, ತಂಬಿಲ ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.