ಫೆ.18 : ಉಜಿರೆಯಲ್ಲಿ ವಿಜ್ಞಾನ ಪ್ರದರ್ಶನ ಉಜಿರೆಯ ಇಬ್ಬರು ವಿಜ್ಞಾನಿಗಳ ನೇತೃತ್ವ

Advt_NewsUnder_1
Advt_NewsUnder_1
Advt_NewsUnder_1

ujire

ಪ್ರೋ| ಎಂ. ಸೀತಾರಾಮ ಭಟ್    ಡಾ. ಎಂ. ಮಂಜುನಾಥ ನಾಯಕ್

ಬೆಳ್ತಂಗಡಿ: ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿದ್ದ ದಿ| ಆರ್.ಎನ್. ಭಿಡೆಯವರ ಜನ್ಮ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಫೆ.೧೮ರಂದು ಉಜಿರೆಯಲ್ಲಿ ನಡೆಯಲಿರುವ ಪ್ರೌಢ ಶಾಲಾ ಮಕ್ಕಳ ‘ವಿಜ್ಞಾನ ಪ್ರದರ್ಶನ’ವನ್ನು ಇದೇ ಶಾಲೆಯಲ್ಲಿ ಕಲಿತ ಇಬ್ಬರು ವಿಜ್ಞಾನಿಗಳ ನೇತೃತ್ವದಲ್ಲಿ ಆಯೋಜಿಸಲಾಗಿದೆ.
1966-67ರಲ್ಲಿ ಧರ್ಮಸ್ಥಳ ಕರ್ನಾಟಕ ವಿದ್ಯಾಲಯ ಎಂಬ ಹೆಸರನ್ನು ಹೊಂದಿದ್ದ, ಉಜಿರೆ ಶ್ರೀ ಧ.ಮಂ. ಸೆಕೆಂಡರಿ ಅನುದಾನಿತ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಇಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್) ಯಲ್ಲಿ ವಿಜ್ಞಾನಿಗಳಾಗಿರುವ ಉಜಿರೆಯ ನಿವಾಸಿಗಳಾದ ಪ್ರೋ| ಎಂ. ಸೀತಾರಾಮ ಭಟ್ ಮತ್ತು ಡಾ. ಎಂ. ಮಂಜುನಾಥ ನಾಯಕ್ ಈ ವಿಜ್ಞಾನ ಪ್ರದರ್ಶನದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿರುವುದು ವಿಶೇಷವಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರೋ| ಎಂ. ಸೀತಾರಾಮ ಭಟ್ ಅವರು 1967ರಲ್ಲಿ ಉಜಿರೆ ಎಸ್.ಡಿ.ಎಂ. ಸೆಕೆಂಡರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ, 1968ರಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಪಿ.ಯು.ಸಿ.
ಶಿಕ್ಷಣ, 1972ರಲ್ಲಿ ಮಹಾವೀರ ಕಾಲೇಜು ಮೂಡಬಿದ್ರೆಯಲ್ಲಿ ಬಿಎಸ್‌ಸಿ ಪದವಿಯನ್ನು ಪಡೆದಿದ್ದರು. ನಂತರ 1975ರಲ್ಲಿ ಇಲೆಕ್ಟ್ರಿಕಲ್ ಕಮ್ಯೂನಿಕೇಶನ್‌ನಲ್ಲಿ ಬಿ.ಇ. ಪದವಿ, 1977ರಲ್ಲಿ ಏರೋನ್ಯೂಟಿಕಲ್‌ನಲ್ಲಿ ಎಂ.ಇ. ಪದವಿ ಹಾಗೂ 1982ರಲ್ಲಿ ಕಂಟ್ರೋಲ್ ಸಿಸ್ಟಮ್‌ನಲ್ಲಿ ಪಿ.ಹೆಚ್.ಡಿ.ಯನ್ನು ಪಡೆದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನಲ್ಲಿ ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದು, ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಇವರು ಉಜಿರೆ ಅತ್ತಾಜೆಯ ಮಜಿ ಕೇಶವ ಭಟ್ ಮತ್ತು ಶ್ರೀಮತಿ ಸುಭದ್ರಮ್ಮ ಇವರ ಪುತ್ರ.
ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್ ಸಂಸ್ಥೆಯಲ್ಲಿ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್‌ನ ಸಂದರ್ಶಕ ಪ್ರೋಪೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಎಂ. ಮಂಜುನಾಥ್ ನಾಯಕ್ ಉಜಿರೆ ಅವರು ಉಜಿರೆ ಹಳೆಪೇಟೆಯ ಗುಂಡುರಾಯ ನಾಯಕ್ ಮತ್ತು ಶ್ರೀಮತಿ ರಮಾಭಾಯಿ ನಾಯಕ್ ಅವರ ಪುತ್ರ. ಇವರಿಬ್ಬರ ನೇತೃತ್ವದಲ್ಲಿ ಫೆ.18ರಂದು ನಡೆಯಲಿರುವ ವಿಜ್ಞಾನ ಪ್ರದರ್ಶನದಲ್ಲಿ ಒಟ್ಟು 40 ಮಂದಿ ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲಿ 7 ಮಂದಿ ವಿಜ್ಞಾನಿಗಳು ಬೆಳ್ತಂಗಡಿ ತಾಲೂಕಿನವರೇ ಆಗಿರುವುದು ವಿಶೇಷವಾಗಿದೆ. ಇವರು ವಿಜ್ಞಾನ ಪ್ರದರ್ಶ ನದ ಜೊತೆಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಯೋಗಗಳನ್ನು ಮಕ್ಕಳಿಂದಲೇ ಮಾಡಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.