ವೈಜ್ಞಾನಿಕ ಆವಿಷ್ಕಾರ ಅಭಿವೃದ್ಧಿಗೆ ಪೂರಕವಾಗಲಿ : ಡಾ| ಸುಷ್ಮಾ ಡೋಂಗ್ರೆ

pilya padagrahana copyಪಿಲ್ಯ ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

ಪಿಲ್ಯ : ವೈಜ್ಞಾನಿಕ ಆವಿಷ್ಕಾರಗಳು ದೇಶದ ಅಭಿವೃದ್ಧಿಗೆ ಮಾರಕವಾಗದೆ ಪೂರಕವಾಗಿರಬೇಕು ಎಂದು ಅಳದಂಗಡಿ ವೈದ್ಯೆ ಡಾ| ಸುಷ್ಮಾ ಡೋಂಗ್ರೆ ಅಭಿಪ್ರಾಯಪಟ್ಟರು.
ಅವರು ಫೆ.12 ರಂದು ಪಿಲ್ಯ ಸ.ಪ್ರಾ.ಶಾಲೆಯಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳದಂಗಡಿ ವಲಯದ ಪಿಲ್ಯ ಪ್ರಗತಿಬಂಧು, ಜ್ಞಾನವಿಕಾಸ ಮತ್ತು ಸ್ವಸಹಾಯ ಸಂಘಗಳ ನೂತನ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನದ ಪ್ರಗತಿಯಿಂದ ಯುವಜನರು ಮೌಲ್ಯಗಳಿಂದ ದೂರ ಹೋಗುತ್ತಿರುವುದು ವಿಷಾದನೀಯ. ಹೀಗಾಗಿ ತಂದೆತಾಯಿಯರು ಎಳವೆಯಲ್ಲಿಯೇ ಮಕ್ಕಳನ್ನು ತಿದ್ದಿ ತೀಡಿ ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ಮಾಡಬೇಕು. ಸಶಕ್ತ ದೇಶದ ನಿರ್ಮಾಣದಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂದ ಅವರು ಒಕ್ಕೂಟ ಸಭೆಗಳಲ್ಲಿ ಆರೋಗ್ಯ ಮಾಹಿತಿ ನೀಡುತ್ತಿರಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿ ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರು, ಅಳದಂಗಡಿ ವಲಯ ಜ.ಜಾ.ವೇದಿಕೆ ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪಿಲ್ಯ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯ ಕೊರಗಪ್ಪ ಪೂಜಾರಿ, ಅಳದಂಗಡಿ ವಲಯ ಮೇಲ್ವಿಚಾರಕ ಶಿವರಾಮ ಉಪಸ್ಥಿತರಿದ್ದು. ಸಮುದಾಯ ಅಭಿವೃದ್ಧಿ ವಿಭಾಗ ಯೋಜನಾಧಿಕಾರಿ ಸತೀಶ್ ನಾಯ್ಕ ಯೋಜನೆ ಯಶೋಗಾಥೆಯನ್ನು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟ ಅಧ್ಯಕ್ಷ ನಾರಾಯಣ ಸಾಲ್ಯಾನ್ ವಹಿಸಿದ್ದರು. ನಿರ್ಗಮನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೀಪಕ್ ಆಠವಳೆ, ಉಪಾಧ್ಯಕ್ಷ ಕೃಷ್ಣರಾಜ ಭಟ್, ಕಾರ್ಯದರ್ಶಿಯಾಗಿ ಸುಜಾತಾ, ಜತೆ ಕಾರ್ಯದರ್ಶಿಯಾಗಿ ವಸುಂಧರಾ ಮರಾಠೆ ಕೋಶಾಧಿಕಾರಿ ರುಕ್ಮಯ ಪೂಜಾರಿ ಇವರಿಗೆ ಒಕ್ಕೂಟದ ಪುಸ್ತಕಗಳನ್ನು ಹಸ್ತಾಂತರಿಸುವುದರ ಮೂಲಕ ಅಧಿಕಾರ ನೀಡಿದರು.
ಒಕ್ಕೂಟ ತಾಂತ್ರಿಕ ತರಬೇತಿದಾರ ಶ್ರೀಕಾಂತ ಪಟವರ್ಧನ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಹರಿಣಾಕ್ಷಿ ಲತೀಶ್ ವರದಿ ಮಂಡಿಸಿದರು. ಕಾರ್ಯದರ್ಶಿ ಶೈಲೇಶ್ ವಂದಿಸಿದರು. ಪತ್ರಕರ್ತ ವಿಜಯಕುಮಾರ್ ನಾವುರ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.