ಅಂತರ್ಜಿಲ್ಲಾ ಚದುರಂಗ ಸ್ಪರ್ಧೆ, ಚದುರಂಗ ಆಟ ಮಿದುಳಿಗೆ ವ್ಯಾಯಾಮ ನೀಡುತ್ತದೆ

chess copy  ಪುತ್ತಿಲ: ಚದುರಂಗ ಸ್ಪರ್ಧೆಯು ದೇಹಕ್ಕಿಂತ ಜಾಸ್ತಿ ಮೆದುಳಿಗೆ, ಬುದ್ಧಿಮತ್ತೆಗೆ, ಆಲೋಚನಾ ಶಕ್ತಿ ಮತ್ತು ಚಿಂತನಾ ದೂರದೃಷ್ಟಿಯ ಆಲೋಚನೆಗೆ ವ್ಯಾಯಾಮ ನೀಡುವ ಮಹತ್ತರ ಆಟವಾಗಿದೆ ಎಂದು ಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ| ಜೆಸ್ಸಿ ಮೇರಿ ಡಿಸೋಜಾ ಹೇಳಿದರು.
ಉಬಾರ್ ಚೆಸ್ ಅಕಾಡಮಿ ಉಪ್ಪಿನಂಗಡಿ ಇದರ ವತಿಯಿಂದ ನವೀನ್ ರೈ, ಅಸ್ಗರ್ ಅಲಿ, ಜಗನ್ನಾಥ ಅಡಪ ಅವರ ಪ್ರಧಾನ ಪ್ರಾಯೋಜ ಕತ್ವದಲ್ಲಿ ಫೆ. 12ರಂದು ಉಪ್ಪಿನಂಗಡಿ ಶಾಲೆಯಲ್ಲಿ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಅಸ್ಗರ್ ಆಲಿ, ಬೆಳ್ತಂಗಡಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ನವೀನ್ ರೈ ಪುತ್ತಿಲ, ಉಪ್ಪಿನಂಗಡಿ ಸಹಕಾರಿ ಸಂಘದ ಅಧ್ಯಕ್ಷ ಯಶವಂತ ಜಿ. ಗೌಡ, ಡೇರಿಕ್ ಚೆಸ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕರುಗಳಾದ ಡೇರಿಕ್ ಪಿಂಟೋ ಮತ್ತು ಪ್ರಸನ್ನ ಕುಮಾರ್, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ವಿಜಯಕುಮಾರ್ ಕಲ್ಲಳಿಕೆ, ಸರಕಾರಿ ಮಾದರಿ ಶಾಲೆ ಉಪ್ಪಿನಂಗಡಿ ಇಲ್ಲಿನ ಮುಖ್ಯೋಪಾಧ್ಯಾಯಿನಿ ದೇವಿಕಾ ಇವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಸಂಜೆ ನಡೆದು, ಅಧ್ಯಕ್ಷತೆಯನ್ನು ಪಿಎಲ್‌ಡಿ ಬ್ಯಾಂಕ್ ಬೆಳ್ತಂಗಡಿ ನಿದೇರ್ಶಕ ನವೀನ್ ರೈ ವಹಿಸಿದ್ದರು. ಪ್ರಧಾನ ಅತಿಥಿಯಾಗಿದ್ದ ಬೆಳ್ತಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ಮಾತನಾಡಿ, ಮನುಷ್ಯನಿಗೆ ಮಿದುಳಿನ ಲ್ಲಿರುವ 100 ಶೇ. ಶಕ್ತಿಯ ಪೈಕಿ ನಾವು 3 ಶೇ. ಮಾತ್ರ ಬಳಸುತ್ತಿದ್ದೇವೆ. ಚೆಸ್‌ನಿಂದ ಈ ಬುದ್ದಿಮತ್ತೆಯ ಪ್ರಮಾಣ ಹೆಚ್ಚಲಿದ್ದು ಬದುಕಿನ ಇತರ ವಿಭಾಗಗಳಲ್ಲೂ ನಮ್ಮ ಪ್ರಯೋಜನಕ್ಕೆ ಬರಲಿದೆ ಎಂದರು. ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಕೆ ಶಾಹುಲ್ ಹಮೀದ್ ಸಹಿತ ಗಣ್ಯರು ಭಾಗಿಯಾಗಿದ್ದರು. ತಾ.ಪಂ. ಸದಸ್ಯೆ ಸುಜಾತಾ ನವೀನ್ ರೈ ಸ್ವಾಗತಿಸಿದರು. ಭವ್ಯಾ ಜಗನ್ನಾಥ ಅಡಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.