ವೇಣೂರು: ಬಾಡಿಗೆ ಆಧಾರಿತ ಕೃಷಿ ಯಂತ್ರಧಾರೆ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

venur badige krishi yantra dare udhgatane copy ವೇಣೂರು: ನಮ್ಮ ಮುಖ್ಯ ಆಹಾರ ಬೆಳೆಯಾದ ಭತ್ತದ ಕೃಷಿ ವಿರಳವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇಂದು ಸ್ವಲ್ಪಮಟ್ಟಿಗೆ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ ಯುವಕರು ಸಹ ಕೃಷಿಯತ್ತ ಆಕರ್ಷಿತರಾಗಿದ್ದು, ಇದು ಉತ್ತಮ ಬೆಳವಣಿಗೆ. ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಅಧಿಕ ಇಳುವರಿಯ ಜೊತೆಗೆ ಅಧಿಕ ಲಾಭ ಪಡೆಯಲು ಸಾಧ್ಯ ಎಂದು ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಹೇಳಿದರು. ಅವರು ಫೆ.14 ರಂದು ವೇಣೂರು ಹೋಬಳಿಯ ಗೋಳಿಯಂಗಡಿ ಅಶೋಕ ನರ್ಸರಿ ವಠಾರದಲ್ಲಿ ವೇಣೂರು ಹೊಬಳಿಮಟ್ಟದ ಬಾಡಿಗೆ ಆಧಾರಿತ ಸೇವಾ ಕೇಂದ್ರ ಕೃಷಿ ಯಂತ್ರಧಾರೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ, ಭತ್ತದ ಕೃಷಿಯ ವಿನಾಶದಿಂದ ಇಂದು ಅಂತರ್ಜಲ ಕುಸಿದಿದೆ. ಇದರಿಂದ ನೇತ್ರಾವತಿ ನದಿ ತಿರುವಿನಿಂತ ಯೋಜನೆಗಳ ವಿರುದ್ಧ ಬೊಬ್ಬೆ ಹೊಡೆಯುಂತಾಗಿದೆ. ಯಂತ್ರೋಪಕರಣ ಬಳಸಿ ಕೃಷಿ ಚಟುವಟಿಕೆಗಳಿಗೆ ಒತ್ತುನೀಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದರು. ಅಳಿವಿನಂಚಿನಲ್ಲಿರುವ ಕೃಷಿ ಸಂಸ್ಕೃತಿಗೆ ಯಂತ್ರೋಪಕರಣಗಳ ಮೂಲಕ ಮರುಜೀವ ನೀಡಬೇಕಾಗಿದೆ ಎಂದು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಹೇಳಿದರು.
ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಕುವೆಟ್ಟು ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಸದಸ್ಯರುಗಳಾದ ಕೆ. ವಿಜಯ ಗೌಡ, ರೂಪಲತಾ, ಸುಶೀಲ, ಜಯರಾಮ್, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್., ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಮರೋಡಿ ಗ್ರಾ.ಪಂ. ಅಧ್ಯಕ್ಷೆ ಸದಾನಂದ, ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ಅಶೋಕ ನರ್ಸರಿಯ ಎಂ.ಪಿ. ಭಟ್, ಮಂಗಳೂರು ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಕೃಷಿ ಇಲಾಖೆಯ ಪುತ್ತೂರು ವಿಭಾಗದ ಉಪ ನಿರ್ದೇಶಕ ಡಿ.ಟಿ. ಮಂಜುನಾಥ್, ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ತಿಲಕ್ ಪ್ರಸಾದ್ ಹಾಗೂ ಹೋಬಳಿ ಮಟ್ಟದ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ವೇಣೂರು ಹೋಬಳಿ ಕೃಷಿ ಅಧಿಕಾರಿ ಎಚ್. ದಯಾನಂದ ಸ್ವಾಗತಿಸಿ ಸಹಾಯ ಎಂಟರ್ ಪ್ರೈಸಸ್ ಪ್ರೈಂಚೈಸಿ ಗೋವಿಂದ ಪ್ರಕಾಶ್ ವಂದಿಸಿದರು. ಬೆಳ್ತಂಗಡಿ ಕೃಷಿ ಅಧಿಕಾರಿ ನಾರಾಯಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.