ತಣ್ಣೀರುಪಂತ ಗ್ರಾ.ಪಂ. ಚುನಾವಣೆ: ಸದಸ್ಯರಾಗಿ ಕಾಂಗ್ರೆಸ್ ಬೆಂಬಲಿತ ತಾಜುದ್ದೀನ್ ಅಳಕೆ ಆಯ್ಕೆ

thajuddeen copy ತಣ್ಣೀರುಪಂತ : ತಣ್ಣೀರುಪಂತ ಗ್ರಾಮ ಪಂಚಾಯತದಲ್ಲಿ ತೆರವಾಗಿರುವ ತಣ್ಣೀರುಪಂತ 2ನೇ ಕ್ಷೇತ್ರದ 1ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಫೆ.15ರಂದು ಪೂರ್ಣಗೊಂಡಾಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತಾಜುದ್ದೀನ್ 343 ಮತಗಳನ್ನು ಪಡೆದು ಗ್ರಾ.ಪಂ. ಸದಸ್ಯರಾಗಿ ಚುನಾಯಿತರಾಗಿದ್ದಾರೆ.
ಎ. ಅಬ್ದುಲ್ಲ (ಪುತ್ತಾಕ) ಇವರು ನಿಧನರಾದ ಹಿನ್ನಲೆಯಲ್ಲಿ ದ.ಕ. ಜಿಲ್ಲಾಧಿಕಾರಿಯವರ ಆದೇಶದಂತೆ ಈ ಕ್ಷೇತ್ರಕ್ಕೆ ಫೆ.12ರಂದು ಚುನಾವಣೆ ನಡೆಯಿತು. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ತಾಜುದ್ದೀನ್, ಬಿಜೆಪಿ ಬೆಂಬಲಿತರಾಗಿ ರವಿಶಂಕರ್, ಪಕ್ಷೇತರರಾಗಿ ಕೆ.ಎಸ್. ಅಬ್ದುಲ್ಲ ಹಾಗೂ ಅಬೂಬಕ್ಕರ್ ಸ್ಪರ್ಧಿಸಿದ್ದು, ನಾಲ್ಕು ಮಂದಿ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು.
ಫೆ.15ರಂದು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ಪೂರ್ಣಗೊಂಡಾಗ ತಾಜುದ್ದೀನ್ 343 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ರವಿಶಂಕರ್ 265ಮತ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಬೂಬಕ್ಕರ್ ಬಿ 128ಮತ, ಕೆ.ಎಸ್. ಅಬ್ದುಲ್ಲ 113 ಮತಗಳನ್ನು ಪಡೆದು ಪರಾಭವಗೊಂಡರು. ಈ ಕ್ಷೇತ್ರದಲ್ಲಿ ಒಟ್ಟು 1,325 ಮತದಾರರಲ್ಲಿ 849 ಮಂದಿ ಮತ ಚಲಾಯಿಸಿದ್ದರು. ೬ ಮತಗಳು ತಿರಸ್ಕೃತಗೊಂಡವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.