HomePage_Banner_
HomePage_Banner_
HomePage_Banner_

ಗ್ರಾಮ ಸಭೆಗೆ ಗ್ರಾಮಸ್ಥರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ : ಸತೀಶ್

kashipatna gramashabe copyಉದ್ಯೋಗ ಖಾತರಿ ಯೋಜನೆಯಲ್ಲಿ ರೂ. 54 ಲಕ್ಷ ಬಳಕೆ- ಜಿಲ್ಲೆಗೆ ಪ್ರಥಮ

*ಖಾತರಿ 54 ಲಕ್ಷ ಬಳಕೆ – ಇಂಜಿನಿಯರ್ ನಿತಿನ್ ರೈ
*ಹೊಸಂಗಡಿ – ಬಡಕೋಡಿಯಲ್ಲಿ 10 ಎಕ್ರೆ ಸ್ಥಳದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ – ಮೋಹನ್ ರಾವ್ ನೋಡಲ್ ಅಧಿಕಾರಿ
*ನಗದು ರಹಿತ ವ್ಯವಹಾರಕ್ಕೆ ಒತ್ತು ನೀಡಿ – ಆರ್ಥಿಕ ಸಾಕ್ಷರತೆ ಕಾರ್ಯಕರ್ತೆ

ಕಾಶಿಪಟ್ಣ: ಗ್ರಾಮಸಭೆಗಳು ವರ್ಷಕ್ಕೆ ಎರಡು ಬಾರಿ ನಡೆಯುವುದು. ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಫೆ.೧೩13ರಂದು ಕಾಶಿಪಟ್ಣ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಅಧ್ಯಕ್ಷ ಸತೀಶ್ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಚರ್ಚಿಸಬೇಕು ಎಲ್ಲಾ ಗ್ರಾಮಸ್ಥರಿಗೆ ಕ್ರಮಬದ್ಧವಾಗಿ ಮನೆಗಳನ್ನು ಹಂಚಲಾಗಿದೆ. ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ನೀರಿನ ದುರುಪಯೋಗ ನಿಲ್ಲಿಸಬೇಕು ಎಂದರು. ಅಗತ್ಯವಿದ್ದವರು ಮಾತ್ರ ನೀರನ್ನು ಸರಿಯಾಗಿ ಬಳಸಬೇಕು. ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಉದ್ಯೋಗ ಖಾತರಿ ಯೋಜನೆ ಅಡಿ ಬಳಕೆಯಾದ ಹಣ ಜಿಲ್ಲೆಯಲ್ಲಿಯೇ ಪ್ರಥಮ ಎಂದು ಇಂಜಿನಿಯರ್ ತಿಳಿಸಿದ ಮೇರೆಗೆ ಎಲ್ಲಾ ಉದ್ಯೋಗ ಖಾತರಿ ಯೋಜನೆಯಡಿ ನೊಂದಾಯಿಸಿದಲ್ಲಿ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಸಲು ಸುಲಭ, ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ಸಬ್ಸಿಡಿ ಹಣಕ್ಕಾಗಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು.
ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಮೋಹನ್‌ರಾವ್ ಸಭೆ ನಡೆಸಿಕೊಟ್ಟರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕೆ. ತಾ.ಪಂ. ಸದಸ್ಯ ಓಬಯ್ಯ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಮತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ ಅಧಿಕಾರಿ, ಕಂದಾಯ, ತೋಟಗಾರಿಕಾ, ಕೃಷಿ ಅಧಿಕಾರಿ, ಉದ್ಯೋಗ ಖಾತರಿ ಇಂಜಿನಿಯರ್ ನಿತಿನ್ ರೈ
ಪಂಚಾಯತ್ ಸದಸ್ಯರಾದ ಪ್ರವೀಣ್ ಪಿಂಟೋ, ಶ್ರೀಮತಿ ವಾರಿಜ, ಶ್ರೀಮತಿ ಸುಶೀಲ, ಶ್ರೀಮತಿ ವನಜ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಜಿ. ವಾಸುದೇವ ಸ್ವಾಗತಿಸಿ ವರದಿ ವಾಚಿಸಿದರು. ಕಾರ್ಯದರ್ಶಿ ನಾರಾಯಣ ಮೂಲ್ಯ, ಸಿಬ್ಬಂದಿಗಳಾದ ಸುರೇಶ್, ಶ್ರೀಮತಿ ಶ್ವೇತಾ ವಿದ್ಯಾನಂದ, ಜಯ ಅಮೀನ್, ಶ್ರೀಮತಿ ಸುರೇಖ, ಮುಕುಂದ, ಪ್ರದೀಪ್, ಕುಮಾರಿ ರೇಶ್ಮಾ ಸಹಕರಿಸಿದರು. ಗ್ರಾ.ಪಂ. ಸದಸ್ಯ ಮಹಮ್ಮದ್ ಶಾಫಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.