ನೈತಿಕತೆ, ಸಂಸ್ಕೃತಿಯಿಂದ ಜೀವನದಲ್ಲಿ ಉನ್ನತಿ : ಸ್ವಾಮೀಜಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

indabettu grahapravesha copyಇಂದಬೆಟ್ಟು: ಮನೆಯಲ್ಲಿ ಹಾಗೂ ಶಾಲೆ ಯಲ್ಲಿ ದೊರೆ ಯುವ ನೈತಿಕ ಹಾಗೂ ಸಂಸ್ಕೃತಿ ಯ ಶಿಕ್ಷಣ ನಮ್ಮನ್ನು ಜೀವನದಲ್ಲಿ ಉನ್ನತ ಸ್ಥಾನಕ್ಕೇ ರಿಸುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠ ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು. ಅವರು ಫೆ.9ರಂದು ಇಂದಬೆಟ್ಟು ಗ್ರಾಮದ ಸೋಮಯದಡ್ಡ ಶ್ರೀಮತಿ ಜಯಶ್ರೀ ಮತ್ತು ಚಿದಾನಂದ ಗೌಡ ಎಂಬವರು ಸೋಮಯದಡ್ಡ ಎಂಬಲ್ಲಿ ಕಟ್ಟಿಸಿದ ನೂತನ ಮನೆ ‘ಕಾಲಭೈರವೇಶ್ವರ’ ನಿವಾಸ ಇದರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ತಂದೆ-ತಾಯಿಯರಂತೆ ಮಕ್ಕಳ ಮನಸ್ಸು ಚೆನ್ನಾಗಿದ್ದರೆ ಮನೆಯಲ್ಲಿ ಸಂತೋಷದ ವಾತಾವರಣ ತುಂಬಿ ಅಭಿವೃದ್ಧಿಯೂ ಸಾಗುತ್ತದೆ. ಉತ್ತಮ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಸಮಾಜದಲ್ಲಿ ಉನ್ನತ ಸಾಧನೆಗಳನ್ನು ಮಾಡುತ್ತಾರೆ ಎಂದು ಅಭಿಪ್ರಾಯ ಪಟ್ಟರು. ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿಯ ಶ್ರೀ ಗುಣನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಇಂದಬೆಟ್ಟಿಗೆ ಆಗಮಿಸಿದ ಸ್ವಾಮೀಜಿಯವರನ್ನು ಅರ್ಧನಾರೀಶ್ವರ ದೇವಾಲಯದ ದ್ವಾರದಿಂದ ಪೂರ್ಣಕುಂಭ ಕಲಶದೊಂದಿಗೆ ಭವ್ಯವಾಗಿ ಅಲಂಕೃತ ವಾಹನದಲ್ಲಿ ಸ್ವಾಗತಿಸಿ, ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭ ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ, ಜಿ.ಪಂ. ಸದಸ್ಯೆ ಸೌಮ್ಯಲತಾ, ಬಂಗಾಡಿ ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ ಸೇರಿದಂತೆ ಗಣ್ಯರು, ಕುಟುಂಬಸ್ಥರು ಆಗಮಿಸಿ ಶುಭ ಕೋರಿದರು. ಮನೆಯ ಮಾಲಕ ಚಿದಾನಂದ ಗೌಡ, ಶ್ರೀಮತಿ ಜಯಶ್ರೀ ಸ್ವಾಮೀಜಿಯವರನ್ನು ಹಾಗೂ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.