ಅರೆಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ನೇಮೋತ್ಸವ, ಉತ್ಸವಗಳಿಂದ ಧರ್ಮ-ಸಂಸ್ಕೃತಿಯ ಉಳಿವು : ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

aramalebetta jatre copyಗುರುವಾಯನಕೆರೆ : ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.12ರಂದು ವೈಭವಪೂರ್ಣವಾಗಿ ನಡೆಯಿತು.
ಅಂದು ಬೆಳಗ್ಗೆ ದೈವದ ಭಂಡಾರ ಬಂದ ಬಳಿಕ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಪತಿ ಹೋಮ, ಕಲಶಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ, ಧ್ವಜಾರೋಹಣ, ಬಲಿ ಉತ್ಸವ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ದ.ಕ. ಜಿ.ಪಂ. ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಅವರು ಮಾತನಾಡಿ, ನಮ್ಮ ಹಿರಿಯರು ದೈವ ದೇವರ ಆರಾಧಕರಾಗಿದ್ದು, ಅದು ಪರಂಪರೆಯಾಗಿ ಇಂದಿಗೂ ಬೆಳೆದು ಬಂದಿದೆ. ಇಂದು ಯುವ ಸಮುದಾಯದಲ್ಲಿ ಧರ್ಮ, ದೇವರ ಪೂಜೆ, ಆರಾಧನೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯುವ ಸಮುದಾಯ ಹೆಚ್ಚು ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುಂಜಾಲಕಟ್ಟೆ ಸ.ಪ್ರ.ದ ಕಾಲೇಜಿನ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಮಾತನಾಡಿ ನಾವು ಗುರು ಹಿರಿಂiiನ್ನು ಗೌರವಿಸಬೇಕು, ಪ್ರಕೃತಿ, ಗೋಮಾತೆಯನ್ನು ಪೂಜಿಸುವುದ ರೊಂದಿಗೆ ಸಮಾಜದಲ್ಲಿ ಆದರ್ಶರಾಗಿ ಬಾಳಬೇಕು, ಉತ್ತಮ ಸತ್ಕಾರ್ಯಗಳ ಮೂಲಕ ಅತ್ಮೋನ್ನತಿಯನ್ನು ಪಡೆಯಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದ ಅನುವಂಶೀಯ ಆಡಳಿತ ಮೊಕ್ತೇಸರ ಡಾ| ಎಂ. ಹರ್ಷಸಂಪಿಗೆತ್ತಾಯ ಮಾತನಾಡಿ ದೈವ ದೇವರ ಮೇಲೆ ಶ್ರದ್ಧಾಭಕ್ತಿ ಇದ್ದರೆ ಜೀವನದಲ್ಲಿ ಉನ್ನತಿಯನ್ನು ಪಡೆಯಬಹುದು ಎಂದರು. ಜಯಕರ್ನಾಟಕ ಬೆಳ್ತಂಗಡಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಶುಭ ಕೋರಿದರು. ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರ ಹಿನ್ನಲೆ ಹಾಗೂ ಇಲ್ಲಿಯ ಶಕ್ತಿಯ ಆರಾಧಾನೆಯಿಂದ ಭಕ್ತರ ಮೇಲಾದ ಪರಿಣಾಮಗಳನ್ನು ವಿವರಿಸಿದರು.
ಸಂಖ್ಯಾ ಮತ್ತು ಸುರಭಿ ಇವರ ಪ್ರಾರ್ಥನೆ ಬಳಿಕ ಅನುವಂಶಿಯ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು ಸ್ವಾಗತಿಸಿದರು. ಪುಂಜಾಲಕಟ್ಟೆ ಶಾಲಾ ಶಿಕ್ಷಕ ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಪದ್ಮರಾಜ್ ಜೈನ್, ನಾಗವರ್ಮ ಜೈನ್, ಸನ್ಮಾತಿ ಜೈನ್, ಶ್ರೀಮತಿ ಸನ್ಮಾತಿ, ಸುನೀಶ್ ಕುಮಾರ್ ಕಡಂಬು ಅತಿಥಿಗಳನ್ನು ಗೌರವಿಸಿದರು.
ರಾತ್ರಿ 9ಕ್ಕೆ ದೈವದ ಬಲಿ ಉತ್ಸವ, ರಾತ್ರಿ 12ರಿಂದ ಕೊಡಮಣಿತ್ತಾಯ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಅನ್ನಸಂತರ್ಪಣೆ ಶ್ರೀಮತಿ ಕಾಶಿ ಶೆಟ್ಟಿ ಮತ್ತು ಮಕ್ಕಳು ನವಶಕ್ತಿ ಕೃಪಾ ಶಕ್ತಿನಗರ ಗುರುವಾಯನಕೆರೆ ಇವರಿಂದ ಸೇವಾ ರೂಪವಾಗಿ ನಡೆಯಿತು. ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಟೀಲು ಮೇಳದವರಿಂದ ‘ಸಂಪೂರ್ಣ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.