ಧರ್ಮಸ್ಥಳ ವಲಯ ಒಕ್ಕೂಟಗಳ ಪದಗ್ರಹಣ ಸಮಾರಂಭ ಮತ್ತು ಎಸ್.ಕೆ.ಡಿ.ಆರ್.ಡಿ.ಪಿ-ಎಸ್.ಎಚ್.ಜಿ ಆಪ್ ಬಿಡುಗಡೆ

sd

skdrdpಧರ್ಮಸ್ಥಳ :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಳ್ತಂಗಡಿ ತಾಲೂಕು ವಲಯ ಒಕ್ಕೂಟಗಳು ಇವರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯ ಒಕ್ಕೂಟಗಳ ಪದಗ್ರಹಣ ಸಮಾರಂಭ ಮತ್ತು ಎಸ್.ಕೆ.ಡಿ.ಆರ್.ಡಿ.ಪಿ-ಎಸ್.ಎಚ್.ಜಿ ಆಪ್ ಬಿಡುಗಡೆಯು ಇಂದು (ಫೆ.15) ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಂಬೈ ನಬಾರ್ಡ್ ಅಧ್ಯಕ್ಷ ಡಾ| ಹರ್ಷಕುಮಾರ್ ಭಾನ್ವಾಲಾ ಎಸ್.ಕೆ.ಡಿ.ಆರ್.ಡಿ.ಪಿ-ಎಸ್.ಎಚ್.ಜಿ ಆಪ್ ಬಿಡುಗಡೆ ಮಾಡಿದರು. ಮಂಗಳೂರು ಕಾರ್ಪೋರೇಷನ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಜಿ.ಎಂ ಭಗತ್ ಟ್ಯಾಬ್ ಫೋನ್ ವಿತರಣೆ ಮಾಡಿದರು. ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಅಧ್ಯಕ್ಷೆ ಶ್ರೀಮತಿ ಹೇಮಾವತಿ ವೀ.ಹೆಗ್ಗಡೆಯವರು ಪದಗ್ರಹಣದ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ವಸಂತ ಬಂಗೇರ, ಬೆಂಗಳೂರು ಶ್ರೀ.ಧ.ಮ ಶಿಕ್ಷಣ ಸಂಸ್ಥೆ ಯೋಜನಾ ನಿರ್ದೇಶಕರಾದ ಶ್ರೇಯಸ್ ಕುಮಾರ್, ಬೆಂಗಳೂರು ನಬಾರ್ಡ್ ಮುಖ್ಯ ಮಹಾಪ್ರಬಂಧಕರಾದ ಎಂ.ಐ.ಗಣಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹಣಕಾಸು ನಿರ್ದೇಶಕರಾದ ಶಾಂತಾರಾಮ್ ಆರ್.ಪೈ, ತಂತ್ರಜ್ಞಾನ ನಿರ್ದೇಶಕರಾದ ಡಿ.ಜಯರಾಮ್, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್ ಮಂಜುನಾಥ್, ನಿರ್ದೇಶಕರಾದ ಚಂದ್ರಶೇಖರ್, ಯೋಜನಾಧಿಕಾರಿ ಶ್ರೀಮತಿ ರೂಪಾ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.