ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನದ ಸಹಯೋಗದಲ್ಲಿ ಉಜಿರೆಯ ಶ್ರೀ ಧ.ಮಂ. ಪದವಿ ಕಾಲೇಜಿನಲ್ಲಿ ಫೆಬ್ರವರಿ 13 ರಿಂದ ಇಪ್ಪತ್ತನೆಯ ವರ್ಷದ ಎರಡು ದಿನಗಳ ಕಾಲ ಕಥೆ-ಕವನ ಅನುಸಂಧಾನ ಶಿಬಿರ ನಡೆಯಲಿದೆ.
ಕಾಲೇಜಿನ ಕನ್ನಡ ಸಂಘವು ಸ್ನಾತಕೋತ್ತರ ಪತ್ರಿಕೋಧ್ಯಮ ವಿಭಾಗದ ಸಹಕಾರದಲ್ಲಿ ಏರ್ಪಡಿಸಿರುವ ಈ ಶಿಬಿರವನ್ನು ಧರ್ಮಸ್ಥಳದ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ.
20ನೆಯ ವರ್ಷದ ಸಾಹಿತ್ಯ ಅಧ್ಯಯನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ವಿಮರ್ಶಕ ಪ್ರೊ. ಟಿ.ಪಿ ಅಶೋಕ, ಖ್ಯಾತ ಲೇಖಕರಾದ ಜಯಂತ ಕಾಯ್ಕಿಣಿ, ನಿರ್ದೇಶಕರು ಹಾಗು ಕಲಾವಿದೆ ಶ್ರೀಮತಿ ವಿದ್ಯಾ ಹೆಗಡೆ, ಸಾಕ್ಷ್ಯ ಚಿತ್ರ ಪರಿಣತ ಶಿಶಿರ ಹೆಗ್ಗೋಡು, ಅಂಕಣಕಾರ ಡಾ. ಮಾಧವ ಚಿಪ್ಪಳಿ ಅವರು ಪಾಲ್ಗೊಳ್ಳುವರು. ಶ್ರೀ ಧ. ಮಂ. ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯಕ್ರಮ ಜರುಗಲಿದೆ.