ಇಂದು ಎತ್ತಿನ ಹೊಳೆ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಸತ್ಯಾಗ್ರಹ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ದ.ಕ. ಜಿಲ್ಲೆಯ ಉಳಿವಿಗಾಗಿ, ನೇತ್ರಾವತಿ ನದಿ ರಕ್ಷಣೆಗಾಗಿ ಮತ್ತು ಎತ್ತಿನ ಹೊಳೆ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಹಾಗೂ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಇಂದು(ಫೆ.10) ನಡೆಯಿತು.
ಅಂದು ಬೆಳಗ್ಗೆ 9.45ಕ್ಕೆ ಪುರಭವನದ ಎದುರಿನ ಗಾಂಧಿ ಪಾರ್ಕ್‌ನಲ್ಲಿ ಮಹಾತ್ಮಗಾಂಧೀಜಿ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಉಪವಾಸಕ್ಕೆ ಚಾಲನೆ ದೊರೆಯಿತು. ಬೆಳಗ್ಗೆ 10.15ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಧರ್ಮಗಳ ಗುರುಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಡಂರುಗಳು, ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದರು.
ಉಪವಾಸ ಸತ್ಯಾಗ್ರಹದಲ್ಲಿ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಸತ್ಯಜಿತ್ ಸುರತ್ಕಲ್, ಹರೀಶ್ ಪೂಂಜ, ಎಂ.ಜಿ. ಹೆಗಡೆ, ಶಶಿರಾಜ ಶೆಟ್ಟಿ ಕೊಳಂಬೆ, ನಾರಾಯಣಾ ಬಂಗೇರ, ಸಿರಾಜ್ ಆಡ್ಕರೆ, ಹನೀಫ್‌ಖಾನ್ ಕೊಡಾಜೆ, ಕಿರಣ್ ರೈ ಬಜಾಲ್, ಡಾ. ಭರತ್ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಕೆ. ಮೋನಪ್ಪ ಭಂಡಾರಿ ಭಾಗವಹಿಸಿದರು. ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಜನರು ಬೆಂಬಲ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.