ಫೆ.17ರಿಂದ ಎಸ್‌ಡಿಎಂ ಝೇಂಕಾರ್ ಉತ್ಸವ

  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಸ್ನಾತಕೋತ್ತರ ಕೇಂದ್ರವು ಫೆಬ್ರವರಿ 17 ಮತ್ತು 18 ರಂದು ಎರಡು ದಿನಗಳ ಕಾಲ ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಎಸ್‌ಡಿಎಂ ಝೇಂಕಾರ್ ಉತ್ಸವವನ್ನು ಆಯೋಜಿಸಿದೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪದವಿ ಅಧ್ಯಯನ ನಿರತ ಕಲೆ, ವಿಜ್ಞಾನ, ನಿರ್ವಹಣ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ತಂಡಗಳು ವಿವಿಧ ಸ್ಪರ್ಧಾ ವಿಭಾಗಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಲಿವೆ.
ಯುವ ವಿಜ್ಞಾನಿಗಳನ್ನು ಗುರುತಿಸುವ ಉದ್ದೇಶದ ಯಂಗ್ ಸೈಂಟಿಸ್ಟ್ಸ್ ಸ್ಪರ್ಧೆಯು ಮೂರು ಹಂತಗಳಲ್ಲಿ ಏರ್ಪಡಲಿದೆ. ಉದ್ಯಮ ವಲಯದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುವ ಹಂಬಲದ ಉದ್ಯಮಶೀಲ ಪ್ರತಿಭೆಗಳ ಅನಾವರಣಕ್ಕಾಗಿ ಬೆಸ್ಟ್‌ಎಂಟರ್ ಪ್ರ್ಯಿನ್ಯೂರ‍್ಸ್, ನಾಯಕತ್ವದ ಗುಣಗಳ ವ್ಯಕ್ತಿತ್ವಗಳ ಆಯ್ಕೆಗಾಗಿ ರೈಸಿಂಗ್ ಲೀಡರ್ಸ್, ಬರವಣಿಗೆಯ ಕೌಶಲ್ಯದ ವಿದ್ಯಾರ್ಥಿಗಳಿಗಾಗಿ ಕ್ರಿಯೇಟಿವ್ ರೈಟಿಂಗ್, ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ನೃತ್ಯ ಪ್ರದರ್ಶಿಸುವ ಪ್ರತಿಭಾನ್ವಿತರಿಗಾಗಿ ಡಾನ್ಸ್ ಫಾರ್ ಅ ಥೀಮ್, ವಿಭಿನ್ನ ಪರಿಕಲ್ಪನೆಯ ಟ್ರೆಸರ್ ಹಂಟ್, 15 ನಿಮಿಷಗಳ ಕಿರುಚಿತ್ರ ನಿರ್ಮಾಣ, ರೇಡಿಯೋ ನಿರೂಪಣೆಯ ಕೌಶಲ್ಯದ ಬೆಸ್ಟ್ ಆರ್‌ಜೆ, ಕ್ಯಾಷ್‌ಲೆಸ್ ದುನಿಯಾ ಥೀಮ್‌ನ ಮ್ಯಾಡ್‌ಆಡ್, ಬೆಸ್ಟ್ ನ್ಯೂಸ್ ಆಂಕರ್, ದೇಸಿ ಯುತ್‌ರ‍್ಯಾಂಪ್ ಸ್ಪರ್ಧೆಗಳು ಜರುಗಲಿವೆ. ಪ್ರತಿಯೊಂದು ಕಾಲೇಜಿನಿಂದ 12 ವಿದ್ಯಾರ್ಥಿಗಳನ್ನು ಒಳಗೊಂಡ ಒಂದು ತಂಡ ಭಾಗವಹಿಸುವ ಅವಕಾಶವಿದೆ. ತಂಡದ ಸದಸ್ಯರು ವಿವಿಧ ಸ್ಪರ್ಧಾ ವಿಭಾಗಗಳಲ್ಲಿ ಭಾಗವಹಿಸಬಹುದು. ಸ್ಪರ್ಧಾ ಚಾಂಪಿಯನ್‌ಷಿಪ್ ಮನ್ನಣೆಗಾಗಿ ತಂಡವೊಂದು ಕನಿಷ್ಠ 9 ಸ್ಪರ್ಧಾ ವಿಭಾಗಗಳಲ್ಲಿ ಭಾಗವಹಿಸಿರಬೇಕು. ಭಾಗವಹಿಸಲಿಚ್ಛಿಸುವ ನೋಂದಣಿ ಅರ್ಜಿಗಳನ್ನು ಫೆಬ್ರವರಿ 14 ರೊಳಗೆ [email protected] ಗೆ ಕಳುಹಿಸಿಕೊಡಬೇಕು ಎಂದು ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ಮೋಹನ ನಾರಾಯಣ ತಿಳಿಸಿದ್ದಾರೆ. ಮೊಬೈಲ್ ಮತ್ತು ದೂರವಾಣಿ (9880088705, 9483456111, 08256-237800) ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು. www.sdmcujire.in ವೆಬ್‌ಸೈಟ್‌ಗೂ ಭೇಟಿ ನೀಡಿ ವಿವರಗಳನ್ನು ತಿಳಿದುಕೊಳ್ಳಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.