ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಫೆ. 10-14: ಆಯನ ಮತ್ತು ಸಿರಿಗಳ ಜಾತ್ರೆ -ಫೆ. 13ರಂದು ಕುಮಾರ ದರ್ಶನ

marodi pressmeet copyಬೆಳ್ತಂಗಡಿ : ಅಜೀರ್ಣಾವಸ್ಥೆಯ ಲ್ಲಿದ್ದ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನವು ನಾಲ್ಕು ವರ್ಷಗಳ ಹಿಂದೆ ಊರ ಪರವೂರ ಭಕ್ತರ ಸಹಕಾರದಿಂದ ಸುಮಾರು 1.5 ಕೋಟಿ ವೆಚ್ಚದಲ್ಲಿ ಶಿಲಾಮಯವಾಗಿ ನವೀಕರಿಸಲ್ಪಟ್ಟಿದ್ದು ಇದೀಗ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಜೊತೆಗೆ 5ನೇ ವರ್ಷದ ಆಯನ ಮತ್ತು ಸಿರಿಗಳ ಜಾತ್ರೆ ಫೆ.10ರಿಂದ 14ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ. ಈ ಜಾತ್ರೆಯ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ಸುಮಾರು 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಭಾಭವನ ಮತ್ತು ಅನ್ನಛತ್ರಕ್ಕೆ ಶಿಲಾನ್ಯಾಸ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಜಯಂತ ಕೋಟ್ಯಾನ್ ಫೆ. 6 ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮರೋಡಿ ಕ್ಷೇತ್ರದಲ್ಲಿ ಬ್ರಹ್ಮಲಿಂಗೇಶ್ವರ, ಗಣಪತಿ, ದುರ್ಗಾ ಪರಮೇಶ್ವರೀ ಸಾನ್ನಿಧ್ಯವಲ್ಲದೆ, ನಾಗಬ್ರಹ್ಮ, ರಕ್ತೇಶ್ವರಿ, ನಂದಿ, ಕ್ಷೇತ್ರಪಾಲರನ್ನು ಒಳಗೊಂಡ ಪಂಚಸಾನ್ನಿಧ್ಯವೂ ಈ ಕ್ಷೇತ್ರದ ವಿಶೇಷ. ಜತೆಗೆ ಸಿರಿಕುಮಾರ, ಅಬ್ಬಗ ದಾರಗ, ನಂದಿಗೋಣ ಮುಂತಾದ ಶಕ್ತಿಗಳು ಒಂದೇ ಕ್ಷೇತ್ರದಲ್ಲಿ ನೆಲೆಯಾಗಿರುವ ಅಪರೂಪದ ಕ್ಷೇತ್ರ ಕೂಡ ಹೌದು.
ಕಾರ್ಯಕ್ರಮ ನಡೆಯುವ ದಿನಾಂಕದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಭಾ ಕಾರ್ಯ ಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾಧಿ ನಡೆಯಲಿವೆ. ಫೆ. 13 ರಂದು ರಾತ್ರಿ 8 ಗಂಟೆಗೆ ವೈಶಿಷ್ಟ್ಯಭರಿತವಾದ ಕುಮಾರ ದರ್ಶನ ನಡೆಯಲಿದೆ. ಫೆ.12ರಂದು ಬೆಳಿಗ್ಗೆ 10.30ಕ್ಕೆ ಸಭಾಭವನ ಮತ್ತು ಅನ್ನಛತ್ರಕ್ಕೆ ಶಿಲಾನ್ಯಾಸ ನಡೆಯಲಿದೆ. ಬಳ್ಳಾರಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಡಾ. ರಾಜಶೇಖರ ಕೋಟ್ಯಾನ್, ಬೆಂಗಳೂ ರಿನ ಉದ್ಯಮಿ ಸುರೇಶ್ ಹೆಗ್ಡೆ, ನವಿ ಮುಂಬೈನ ಶ್ರೀ ಶನೀಶ್ವರ ದೇವಸ್ಥಾನದ ಮೊಕ್ತೇಸರ ಪ್ರಭಾಕರ ಹೆಗ್ಡೆ, ಬೆಂಗಳೂರಿ ನ ಉದ್ಯಮಿ ಉದಯ ಹೆಗ್ಡೆ, ಪೂನಾದ ಉದ್ಯಮಿ ಉದಯ ಶೆಟ್ಟಿ ಕಾಂತಾವರ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ರಾಘವೇಂದ್ರ ಹೆಗ್ಡೆ, ಹೈಕೋರ್ಟ್ ವಕೀಲ ಹರೀಶ್ ಪೂಂಜಾ, ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಮುಂಬೈ ಉದ್ಯಮಿ ಹರೀಶ್ ಡಿ. ಸಾಲ್ಯಾನ್ ಬಜಗೋಳಿ, ಮುಂಬೈ ಉದ್ಯಮಿ ಸುರೇಶ್ ಪೂಜಾರಿ ಬರಂಜ ಕಾಶಿಪಟ್ಣ, ಶಿರ್ತಾಡಿ ಪ್ರಭಾ ಕ್ಲಿನಿಕ್‌ನ ಡಾ. ಆಶೀರ್ವಾದ್ ಭಾಗವಹಿಸುವರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಡಂಗೆ ಕೊಕ್ರಾಡಿ ಅಧ್ಯಕ್ಷತೆ ವಹಿಸುವರು ಎಂದರು. ಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ವಿಜಯ ಆರಿಗ, ದಿವಾಕರ ಹೆಗ್ಡೆ ಮತ್ತು ಪ್ರದೀಶ್ ಮರೋಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.