ನಾವೂರು : ಕುಲಾಲ ಕುಂಬಾರ ಯುವ ವೇದಿಕೆ ಸಮಿತಿ ರಚನೆ

SABHE

ಜಯಾನಂದ ಕುಲಾಲ್ (ಅಧ್ಯಕ್ಷ),     ವಸಂತ ಕುಂಬಾರ (ಕಾರ್ಯದರ್ಶಿ)

ನಾವೂರು : ಕುಲಾಲ ಕುಂಬಾರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಲಾಯಿಲ ಜಿ.ಪಂ ವ್ಯಾಪ್ತಿಯ ನಾವೂರು ಗ್ರಾಮ ಕುಲಾಲ ಕುಂಬಾರ ಯುವ ವೇದಿಕೆಯನ್ನು ಪುಷ್ಪರಾಜ್ ಲಾಯಿಲ ಇವರ ನೇತೃತ್ವದಲ್ಲಿ ಸಭೆಯನ್ನು ನಡೆಸಿ ಸಮಿತಿಯನ್ನು ರಚಿಸಲಾಯಿತು.
ಸಮಿತಿಯಲ್ಲಿ ಗೌರವ ಸಲಹೆಗಾರರಾಗಿ ಹರೀಶ್ ಕಾರಿಂಜ, ನಾರಾಯಣ ಮೂಲ್ಯ ಕಣಾಲು, ವಿಜಯ ಕುಂಬಾರ ಹೊಡಿಕ್ಕಾರು ಇವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಯಾನಂದ ಕುಲಾಲ್ ನಾವೂರು, ಉಪಾಧ್ಯಕ್ಷರಾಗಿ ರವಿ ಕುಲಾಲ್ ಕುಡುಬಾಕ್ಕಾರು, ಕಾರ್ಯದರ್ಶಿಯಾಗಿ ವಸಂತ ಕುಂಬಾರ ನಾವೂರು, ಜೊತೆ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಹೊಡಿಕ್ಕಾರು ಹಾಗೂ 25 ಮಂದಿಯ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷರಾದ ನಾರಾಯಣ ಮೂಲ್ಯ ಕಣಾಲು, ಕಾರ್ಯದರ್ಶಿಯಾದ ನಾಗೇಶ್ ಕುಲಾಲ್ ಅದೇ ರೀತಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಹರೀಶ್ ಕಾರಿಂಜ, ಲಾಯಿಲ ಜಿ.ಪಂ ವಿಭಾಗದ ಸಂಘಟನಾ ಕಾರ್ಯದರ್ಶಿಯಾದ ಪುಷ್ಪರಾಜ್ ಲಾಯಿಲ ಸಂಘದ ಸದಸ್ಯರಾದ ಸದಾನಂದ ಮೂಲ್ಯ ನಾವೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.