ನಾರಾವಿ ಪರುಷಗುಡ್ಡೆ ಬಸದಿಯಲ್ಲಿ ಸರ್ವಧರ್ಮ ಸಮ್ಮಿಲನ ಸಾಧಕ ಸಮಾಜ ಬಾಂಧವರಿಗೆ ಸನ್ಮಾನ

naravi parusha gudde copyಕುತ್ಲೂರು : ಭಾರತೀಯ ಜೈನ್‌ಮಿಲನ್ ಮತ್ತು ಯುವ ಜೈನ್‌ಮಿಲನ್ ಪರುಷಗುಡ್ಡೆ ಶಾಖೆ ಇದರ ವತಿಯಿಂದ ಫೆಬ್ರವರಿ ತಿಂಗಳ ಮಿಲನ್ ಸಭೆ ಹಾಗೂ ಸರ್ವಧರ್ಮ ಸಮ್ಮಿಲನ-2017 ಎಂಬ ವೈಶಿಷ್ಟ್ಯಭರಿತ ಕಾರ್ಯಕ್ರಮ ಫೆ.5 ರಂದು ಇಲ್ಲಿನ ಪರುಷಪದ್ಮಾಂಬ ಸಭಾಭವನದಲ್ಲಿ ಜರುಗಿತು. ಪ್ರಮುಖ ನಾಲ್ಕು ಧರ್ಮಗಳಾದ ಕ್ರೈಸ್ತ ಧರ್ಮದ ಪರವಾಗಿ ನಾರಾವಿ ಸಂತ ಅಂತೋನಿ ಮಹಾವಿದ್ಯಾಲಯದ ಪ್ರಾಂಶುಪಾಲ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೋ, ಹಿಂದೂ ಧರ್ಮದ ಪರವಾಗಿ ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೋ. ಎ ಕೃಷ್ಣಪ್ಪ ಪೂಜಾರಿ, ಇಸ್ಲಾಂ ಧರ್ಮದ ಪರವಾಗಿ ತಾ| ಸುನ್ನೀ ಸಂಯುಕ್ತ ಜಮಾಅತ್ ಮಾಧ್ಯಮ ಕಾರ್ಯದರ್ಶಿ ಅಚ್ಚು ಮುಂಡಾಜೆ, ಜೈನ ಧರ್ಮದ ಪರವಾಗಿ ಜೈನ ವಿದ್ವಾಂಸ ಮುನಿರಾಜ ರೆಂಜಾಳ ಅವರು ಧರ್ಮ ಸಂದೇಶ ಸೂಕ್ಷ್ಮತೆಯನ್ನು ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ಪರುಷಗುಡ್ಡೆ ಜೈನ್ ಮಿಲನ್ ಅಧ್ಯಕ್ಷ ವಜ್ರಕುಮಾರ್ ಅಜ್ರಿ ಸ್ವಾಗತಿಸಿದರು. ಹಿರಿಯರಾದ ಗುಣಪಾಲ ಪೂವಣಿ ದೀಪ ಬೆಳಗಿ ಉದ್ಘಾಟನೆ ನೆರವೇರಿಸಿದರು.
ಸನ್ಮಾನ : ಈ ಸಂದರ್ಭ ಎಪಿಎಂಸಿ ಚುನಾವಣೆಯಲ್ಲಿ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾದ ಸಮಾಜ ಬಾಂಧವರಾದ ಜೀವಂಧರ್ ಕುಮಾರ್ ನಾರಾವಿ, ವರ್ತಕರ ಕ್ಷೇತ್ರದಿಂದ ಚುನಾಯಿತರಾದ ಪುಷ್ಪರಾಜ್ ಹೆಗ್ಡೆ ಮಡಂತ್ಯಾರು ಅವರನ್ನು ಸಮಾಜ ಬಾಂಧವರ ಪರವಾಗಿ ಸನ್ಮಾನಿಸಲಾಯಿತು. ವಿಶೇಷ ಉಪನ್ಯಾಸಕ್ಕಾಗಿ ಆಗಮಿಸಿದ್ದ ನಾಲ್ಕೂ ಧರ್ಮದ ಪ್ರತಿನಿಧಿಗಳನ್ನೂ ಈ ಸಂದರ್ಭ ಆಧರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ಸಂಯೋಜಿಸಿ ದರು. ವೇದಿಕೆಯಲ್ಲಿದ್ದ ವಲಯ ನಿರ್ದೇಶಕ ಬಿ ಸೋಮಶೇಖರ ಶೆಟ್ಟಿ ಅವರು ಶುಭ ಕೋರಿದರು. ಭಾರತಿ ಅಶೋಕ್ ಬಳ್ಳಾಲ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಶೋಕ್ ಕುಮಾರ್ ಜೈನ್ ವಂದನಾರ್ಪಣೆಗೈದರು. ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕರಿಸಿದರು. ಉದ್ಘಾಟನೆ ನೆರವೇರಿಸಬೇಕಿದ್ದ ಶಾಸಕ ವಸಂತ ಬಂಗೇರ ಅವರು ಕಾರ್ಯಕ್ರಮಕ್ಕೂ ಪೂರ್ವವಾಗಿ ಕ್ಷೇತ್ರಕ್ಕೆ ಆಗಮಿಸಿ ಶುಭ ಕೋರಿ ನಿರ್ಗಮಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.