ಆಪತ್ಬಾಂಧವ ಚಾರ್ಮಾಡಿ ಹಸನಬ್ಬರಿಗೆ ಜೀವ ರಕ್ಷಕ ಪ್ರಶಸ್ತಿ

charmady hasanabba sanmana copyಬೆಳ್ತಂಗಡಿ : ಕರ್ನಾಟಕ ಸರಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದರ ವತಿಯಿಂದ ಮುಖ್ಯಮಂತ್ರಿ ಹರೀಶ್ ಯೋಜನೆಯಡಿಯಲ್ಲಿ ಕೊಡಮಾಡುವ ಜೀವ ರಕ್ಷಕ ಪ್ರಶಸ್ತಿಗೆ ಚಾರ್ಮಾಡಿಯ ಹೊಟೇಲ್ ಉದ್ಯಮಿ, ಆಪದ್ಬಾಂಧವ ಎಂದೇ ಖ್ಯಾತಿ ಗಳಿಸಿರುವ, ಸಮಾಜ ಸೇವಕ ಹಸನಬ್ಬ ಚಾರ್ಮಾಡಿ ಅವರು ಬಾಜನರಾಗಿದ್ದಾರೆ.
ಜ.26ನೇ ಗಣರಾಜ್ಯೋತ್ಸವ ಶುಭ ದಿನದಂದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು, ಜಿಲ್ಲಾಧಿಕಾರಿ ಡಾ| ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ಸಹಿತ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಹಾಗೂ ಮಂಗಳೂರಿನ ಶಾಸಕರಾದ ಜೆ.ಅರ್. ಲೋಬೋ ಮತ್ತು ಮೊದಿನ್ ಬಾವಾ ಸಹಿತ ಜನಪ್ರತಿನಿಧಿಗಳ ಸಮ್ಮುಖ ಪ್ರಶಸ್ತಿ ನೀಡಿ ಗೌರವಿಸಿದರು. ಹಸನಬ್ಬ ಅವರು ಈ ಹಿಂದೆಯೇ ತಾಲೂಕು ಮತ್ತು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡವರಾಗಿದ್ದು, ಚಾರ್ಮಾಡಿ ಕಣಿವೆ ರಸ್ತೆ ಸಹಿತ ಈ ಭಾಗದಲ್ಲಿ ಎಲ್ಲೇ ಅಪಘಾತ ಹಾಗೂ ಇನ್ನಿತರ ತುರ್ತು ಸಂದರ್ಭಗಳು ಎದುರಾದಾಗ ರಾತ್ರಿ ಹಗಲೆನ್ನದೆ ಸ್ಥಳಕ್ಕೆ ಧಾವಿಸಿ ಅಗತ್ಯ ನೆರವು ಹಾಗೂ ಪರಿಹಾರ ಕ್ರಮಗಳನ್ನು ಕೈಗೊಂಡು ಈ ಭಾಗದಲ್ಲಿ ಆಪದ್ಭಾಂದವರೆಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.