ನಾಲ್ಕೂರು ಕಂಚಿನಡ್ಕ ಶ್ರೀ ನಾಗಪ್ರತಿಷ್ಠೆ, ಶ್ರೀ ಮುಜುಲ್ನಾಯ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಾಶಾಭಿಷೇಕ ಅಚಲವಾದ ಶ್ರದ್ಧಾ ಭಕ್ತಿಗೆ ಭಗವಂತನ ಅನುಗ್ರಹವಿದೆ : ಮುಕ್ತಾನಂದ ಶ್ರೀ

kanchinadka bhrammakalasa copy

ಸಮಾರಂಭವನ್ನು ಉದ್ದೇಶಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ ಮಾತನಾಡುತ್ತಿರುವುದು

ನಾಲ್ಕೂರು : ಕಂಚಿನಡ್ಕ ಈ ಪ್ರದೇಶ ತಫೋಭೂಮಿ, ಇಲ್ಲಿ ಭಗವಂತನ ಸಾನಿಧ್ಯವಿದೆ. ಅಚಲವಾದ ಶ್ರದ್ಧಾ ಭಕ್ತಿಯಿಂದ ದೇವರ ಸ್ಮರಣೆ ಪೂಜೆಯನ್ನು ನೆರವೇರಿಸಿದರೆ ಭಗವಂತನ ಅನುಗ್ರಹ ಸದಾ ನಮ್ಮ ಮೇಲಿರುತ್ತದೆ ಎಂದು ಶ್ರೀ ಸತ್ಯನಾರಾಯಣಪುರ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಅವರು ಫೆ.6ರಂದು ಕಂಚಿನಡ್ಕ ಕ್ಷೇತ್ರದ ನವೀಕರಣಗೊಂಡ ನಾಗಬನದಲ್ಲಿ ನಾಗಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ ಮತ್ತು ಮುಜುಲ್ನಾಯ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಾಭಿಷೇಕ ಹಾಗೂ ಶನೀಶ್ವರ ಪೂಜೆಯ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ನಾವು ಬದುಕಿನಲ್ಲಿ ದೇವರ ಅನುಗ್ರಹದಿಂದ ಬೇಕಾದಷ್ಟು ಸಂಪತ್ತು ಮಾಡುತ್ತೇವೆ. ಅ ಸಂಪತ್ತು ಸ್ಥಿರವಾಗಿ ನಮಗೆ ಸಿಗಬೇಕಾದರೆ ನಾಗದೇವರ ಆರಾಧನೆ ಮುಖ್ಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ವಹಿಸಿ ಮಾತನಾಡಿ ಕಂಚಿನಡ್ಕ ಎಂಬ ಕ್ಷೇತ್ರವು ಕಾರಣಿಕ ಶಕ್ತಿಯಿಂದ ಕೂಡಿದ್ದು ಮುಂದೊಂದು ದಿನ ರಾಜ್ಯದಲ್ಲಿಯೇ ಪವಿತ್ರ ಪುಣ್ಯ ಕ್ಷೇತ್ರವಾಗಲಿದೆ ಎಂದರು ಜೊತೆಗೆ ಇಲ್ಲಿನ ಅಭಿವೃದ್ಧಿ ಕೆಲಸವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಊರವರ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು. ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಸಂಪತ್ ಬಿ. ಸುವರ್ಣ ಮಾತನಾಡಿ ತುಳುನಾಡಿನ ಆಚಾರ-ವಿಚಾರ ಸಂಸ್ಕೃತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು, ಇಲ್ಲಿನ ಭೂತರಾಧನೆ, ನಾಗರಾಧನೆ, ಯಕ್ಷಕಲೆ, ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಿದ್ದು ಇಂಥ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಬದ್ದರಾಗೋಣ ಎಂದರು. ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ ನಮ್ಮ ಮನಸ್ಸಿನಲ್ಲಿರುವ ಬೇಧ-ಭಾವ, ಕಲ್ಮಶಗಳನ್ನು ಹೋಗಲಾಡಿಸಿ ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ಊರಿನ ದೇವಸ್ಥಾನ, ದೈವಸ್ಥಾನದ ಕೆಲಸ ಮಾಡುವುದರಿಂದ ದೇವರ ಆಶೀರ್ವಾದದಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದರು. ವೇದಿಕೆಯಲ್ಲಿ ತಾ.ಪಂ ಸದಸ್ಯೆ ವಿನೂಷ ಪ್ರಕಾಶ್ ಪೂಜಾರಿ, ತಾ.ಪಂ ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ, ಬೆಳ್ತಂಗಡಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಬಳಂಜ ಗ್ರಾ.ಪಂ ಅಧ್ಯಕ್ಷೆ ದೇವಕಿ ಕೊರಗಪ್ಪ ನಾಯ್ಕ, ನಾಲ್ಕೂರು ಬೋವಾಡಿಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕುರೆಲ್ಯ, ಕಂಚಿನಡ್ಕ ಬ್ರಹ್ಮಕಲಾಭಿಷೇಕ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಯೈಕುರಿ, ಕಾರ್ಯದರ್ಶಿ ಪ್ರಭಾಕರ ಪೂಜಾರಿ ಖಂಡಿಗ ಉಪಸ್ಥಿತರಿದ್ದರು. ಬೆಳಿಗ್ಗೆ ಗಣಪತಿ ಹೋಮ ಕಲಶಾರಾಧನೆ, ಕಲಶಾಧಿವಾಸ ಹೋಮ, ನಾಗಪ್ರತಿಷ್ಠೆ, ಸಾನಿಧ್ಯ ಕಲಾಭಿಷೇಕ, ನಾಗದೇವರ ಸನ್ನಿಧಿಯಲ್ಲಿ ಬ್ರಹ್ಮಕಲಾಭಿಷೇಕ ನಡೆಯಿತು. ಅಶ್ವಿತಾ ಹುಂಬೆಜಲ್ಕೆ ಪ್ರಾರ್ಥನೆ ಹಾಡಿ, ವಿಶ್ವನಾಥ ಹೊಳ್ಳ ಸ್ವಾಗತಿಸಿ, ಸಂತೋಷ್ ಪಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಜನಾರ್ಧನ ಪೂಜಾರಿ ಕುಕ್ಕದಕಟ್ಟೆ ಧನ್ಯವಾದವಿತ್ತರು. ಮಧ್ಯಾಹ್ನ ನಂತರ ಎಲ್ಲೂರು ರಾಮಚಂದ್ರ ಭಟ್ ನಿರ್ದೇಶನದ ಕದ್ರಿ ಮಹಿಳಾ ಒಕ್ಕೂಟದವರಿಂದ ಸುದರ್ಶನ ವಿಜಯ ಯಕ್ಷಗಾನ ನಡೆಯಿತು.
ಚಿತ್ರ : ಜ್ಯೋತಿಕಾ ಅಳದಂಗಡಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.