ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ದೇವರ ಮೇಲೆ ಭಯ-ಭಕ್ತಿ ಅಗತ್ಯ : ಶಾಸಕ ಬಂಗೇರ

odilu temple copy ಓಡೀಲು: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡಂಗಡಿಯಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೇ| ಮೂ| ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ಫೆ.2 ಮತ್ತು ಫೆ.3ರಂದು ಜರುಗಿತು.
ಫೆ.2ರಂದು 11.30ಕ್ಕೆ ಶತರುದ್ರಾಭಿಷೇಕ, ಸಂಜೆ 6ರಿಂದ ರಾಕ್ಷೋಘ್ನ ಹೋಮ, ಶ್ರೀ ದುರ್ಗಾಪೂಜೆ ಜರುಗಿತು. ಹಸಿರು ಹೊರೆ ಕಾಣಿಕೆಯನ್ನು ಶಿವದರ್ಶನ್ ಆಗ್ರೋ ಇಂಡಸ್ಟ್ರೀಸ್‌ನ ಪಾಲುದಾರ ಬಾಲಕೃಷ್ಣ ಸಿ.ನಾಯಕ್ ಉದ್ಘಾಟಿಸಿದರು. ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ, ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು.
ಫೆ.೩ರಂದು ಗಣಪತಿ ಹೋಮ, ಕಲಶಾಧಿವಾಸ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾರುದ್ರಯಾಗ, ಧ್ವಜಾರೋಹಣ ಅನ್ನಸಂತರ್ಪಣೆ ಸಂಜೆ ರಂಗಪೂಜೆ, ಮಹೋತ್ಸವ, ದೇವರ ನೃತ್ಯಬಲಿ ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ದೈವಗಳ ಭೇಟಿ ಧ್ವಜಾವರೋಹಣ ಮೊದಲಾದ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಕೆ.ವಸಂತ ಬಂಗೇರ ಅವರು ಮಾತನಾಡಿ, ಯಾವುದೇ ದೇವಸ್ಥಾನದ ಜೀರ್ಣೋದ್ಧಾರ ಅಥವಾ ಅಭಿವೃದ್ಧಿಯಾಗಬೇಕಾದರೆ ದೇವರ ಅನುಗ್ರಹ ಬೇಕು, ಇಲ್ಲವಾದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದಕ್ಕೆ ಓಡೀಲು ದೇವಸ್ಥಾನ ಸಾಕ್ಷಿಯಾಗಿದೆ. ೧೯೮೨ರಲ್ಲಿ ತಾನು ಪ್ರಥಮ ಶಾಸಕನಾಗಿದ್ದಾಗ ಈ ದೇವಸ್ಥಾನದ ಅಭಿವೃದ್ಧಿಗೆ ಸಂಕಲ್ಪ ಮಾಡಿ ಅಷ್ಟಮಂಗಳ ಪ್ರಶ್ನೆಯಲ್ಲಿ ೨೪ ವರ್ಷ ಆದರೂ ಇದು ಅಭಿವೃದ್ಧಿಯಾಗುವುದಿಲ್ಲ ಎಂದು ದೈವಜ್ಞರು ತಿಳಿಸಿದ್ದರು. ನಂತರ ಮೂರು ಬಾರಿ ಶಾಸಕನಾದರೂ ಅಭಿವೃದ್ಧಿ ಸಾಧ್ಯವಾಗಿಲ್ಲ, ನಾಲ್ಕನೇ ಬಾರಿ ಶಾಸಕನಾದಾಗ ಇದರ ಬ್ರಹ್ಮಕಲಶೋತ್ಸವ ನೋಡುವಂತಾಯಿತು ನಮಗೆ ದೇವರ ಬಗ್ಗೆ ಭಯ, ಭಕ್ತಿ, ಪ್ರೀತಿ, ವಿಶ್ವಾಸ ಬೇಕು, ಒಳ್ಳೆಯ ಮನುಷ್ಯರಾಗಿ ಬದುಕಬೇಕು ಎಂದರು.
ತಮ್ಮ ಭಾಷಣ ನಡೆಯುತ್ತಿದ್ದಾಗ ಆಗಮಿಸಿದ ಎಪಿಎಂಸಿ ಸದಸ್ಯ ಅಶೋಕ್ ಗೋವಿಯಸ್‌ರನ್ನು ವೇದಿಕೆಗೆ ಬನ್ನಿ ಎಂದು ಆಹ್ವಾನಿಸಿದ ಶಾಸಕರು ಭಾರತ ಜ್ಯಾತ್ಯಾತೀತ ರಾಷ್ಟ್ರ, ಇಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬದುಕುವ ವಾತಾವರಣವಿದೆ. ಮೊನ್ನೆ ಕೊಕ್ಕಡದ ಸರಕಾರಿ ಕಾರ್ಯಕ್ರಮದಲ್ಲಿ ಶಿಷ್ಟಚಾರದ ಪ್ರಕಾರ ಗ್ರಾ.ಪಂ. ಅಧ್ಯಕ್ಷ ಸೆಬಾಸ್ಟಿನ್ ವೇದಿಕೆಯಲ್ಲಿದ್ದುದಕ್ಕೆ ಆಕ್ಷೇಪಿಸಿ ನಿಮ್ಮವರೇ ಪ್ರತಿಭಟನೆ ನಡೆಸಿದರು. ಆದರೆ ಇದು ಸರಿಯಲ್ಲ, ಇಲ್ಲಿ ಜಾತ್ರೆಯ ಕಾರ್ಯಕ್ರಮ ಸಮಿತಿಯವರು ನಿಮ್ಮನ್ನು ಕರೆದು ಸೌಹಾರ್ದತೆ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಗಣೇಶ್ ಸುವರ್ಣ ಅವರು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಭಕ್ತರ ಸಹಕಾರ ಕೋರಿದರು. ಬೆಳ್ತಂಗಡಿ ಸ.ಪ.ಪೂ. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಕೆ.ಆರ್. ಸುವರ್ಣ ಕುಮಾರಿ ಅವರು ಧಾರ್ಮಿಕ ಉಪನ್ಯಾಸ ನೀಡಿ, ದೇವಸ್ಥಾನ ಗ್ರಾಮದ ಶಕ್ತಿ ಕೇಂದ್ರ, ದೇವಸ್ಥಾನದೊಳಗಿನ ಸಕಾರತ್ಮಕ ಅಲೆ ನಮ್ಮಲ್ಲಿ ಪರಿವರ್ತನೆಯಾಗಿ, ಶಾಂತಿ, ನೆಮ್ಮದಿಯನ್ನು ತರುತ್ತದೆ. ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು, ಮಹಿಳೆಯರು ಮಕ್ಕಳಿಗೆ ಮಾದರಿಯಾಗಿ ಬದುಕಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ ವಾತ್ಸಲ್ಯ, ಕೊಯ್ಯೂರು ದೇವಸ್ಥಾನದ ಪ್ರಧಾನ ಅರ್ಚಕ ಅಶೋಕ್ ಭಾಗಿಣ್ಣಾಯ, ತಾ.ಪಂ. ಸದಸ್ಯ ಗೋಪಿನಾಥ ನಾಯಕ್, ಎಪಿಎಂಸಿ ನಿರ್ದೇಶಕ ಅಶೋಕ್ ಗೋವಿಯಸ್, ಪಿಲಿಚಾಮುಂಡಿಕಲ್ಲು ದೊಂಪದಬಲಿ ಉತ್ಸವ ಸಮಿತಿ ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಪಾಡ್ಯಾರು, ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತದಾರ ಸುಕೇಶ್ ಕುಮಾರ್, ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ, ಗೋಪಾಲ ಶೆಟ್ಟಿ ಕೋರ‍್ಯಾರು, ಎಮ್. ರಾಮಚಂದ್ರ ಪ್ರಜ್ವಲ್ ಪಡಂಗಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್. ಗಂಗಾಧರ ರಾವ್ ಕೆವುಡೇಲು ಸ್ವಾಗತಿಸಿದರು. ಸುಧಾಕರ ಪ್ರಭು ಕಾರ್ಯಕ್ರಮ ನಿರೂಪಿಸಿ, ಜಯರಾಮ ಶೆಟ್ಟಿ ಮುಂಡಾಡಿಗುತ್ತು ಧನ್ಯವಾದವಿತ್ತರು. ಪ್ರಧಾನ ಅರ್ಚಕ ರಘುರಾಮ ಭಟ್ ಮಠ, ಜಾತ್ರಾ ಸಮಿತಿ ಅಧ್ಯಕ್ಷ ರಾಮಭಟ್, ಪ್ರಧಾನ ಕಾರ್ಯದರ್ಶಿ ವಿದ್ಯಾ ಶೆಣೈ, ಕಾರ್ಯದರ್ಶಿ ದಾಮೋದರ ಪೂಜಾರಿ, ಉಪಾಧ್ಯಕ್ಷರಾದ ರಾಜ್‌ಪ್ರಕಾಶ್, ರಾಜ್‌ಗೋಪಾಲ್, ಧನಲಕ್ಷ್ಮೀ, ಸುಖೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ನಾರಾಯಣ ಮೂಲ್ಯ, ಚಂದ್ರಹಾಸ ಕೇದೆ, ಸಂತೋಷ್ ಕುಮಾರ್ ಪುರಿಪಟ್ಟ, ವ್ಯವಸ್ಥಾಪನಾ ಸಮಿತಿ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ್ದರು. ರಾತ್ರಿ ಕುವೆಟ್ಟು ಶಾಲಾ ಮಕ್ಕಳಿಂದ ಮತ್ತು ಶ್ರೀ ವಿಷ್ಣು ಕಲಾವಿದೆರ್ ಮದ್ದಡ್ಕ ಇವರಿಂದ ತುಳು ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.