ತೆಂಕಕಾರಂದೂರು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ ತುಳುನಾಡಿನ ಮಣ್ಣಿನಲ್ಲಿ ವಿಶೇಷ ದೈವಿಕ ಶಕ್ತಿಯಿದೆ: ಡಾ. ಹೆಗ್ಗಡೆ

Thenkakaranduru heggade copy ತೆಂಕಕಾರಂದೂರು : ಇತ್ತೀಚಿನ ದಿನಗಳಲ್ಲಿ ನಾಶವಾದ, ಪಾಳುಬಿದ್ದ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದೆ. ಸಾಮಾನ್ಯ ಜನರಲ್ಲಿ ದೇವರ ಬಗ್ಗೆ ಶ್ರದ್ಧೆ, ಭಕ್ತಿ ಹೆಚ್ಚುತ್ತಿದೆ. ತುಳುನಾಡು ಸತ್ಯ, ಧರ್ಮಗಳ ಬೀಡಾಗಿದ್ದು, ವಿಶೇಷವಾದ ದೈವಿಕ ಶಕ್ತಿ ಈ ಮಣ್ಣಿಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಅವರು ಫೆ.1ರಂದು ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಾಲಯಗಳಲ್ಲಿ ದೇವರ ಶಕ್ತಿ ಇರುತ್ತದೆ. ದೇವರ ಅನುಗ್ರಹಕ್ಕಾಗಿ ಪೂಜೆ ಹಾಗೂ ಇನ್ನಿತರ ಕಾರ್ಯಕ್ರಮದ ಮೂಲಕ ಸಂಬಂಧ ಬೆಳೆಸಿಕೊಳ್ಳಬೇಕು. ದೇವರು ಎಂದಿಗೂ ಭಕ್ತರನ್ನು ದ್ವೇಷಿಸುವುದಿಲ್ಲ, ದೇವರ ಮೇಲೆ ನಮಗೆ ಪ್ರೀತಿ ಇರಬೇಕು. ಪ್ರೀತಿಯ ಸೇವೆಯಿಂದ ಅನುಗ್ರಹ ಪ್ರಾಪ್ತವಾಗುತ್ತದೆ. ದೇವಸ್ಥಾನದ ಪರಿಸರ ಸ್ವಚ್ಛವಾಗಿರಬೇಕು. ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಜನವರಿಯಲ್ಲಿ ರಾಜ್ಯದ ೮ಸಾವಿರ ದೇವಾಲಯಗಳಲ್ಲಿ ಸ್ವಚ್ಛಾತಾ ಕಾರ್ಯ ನಡೆದಿದ್ದು, 7ಲಕ್ಷ ಸ್ವಯಂ ಸೇವಕರು ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿ, ದೇವಾಲಯಗಳು ನಮ್ಮ ಬದುಕಿಗೆ ಭದ್ರತೆ ನೀಡುವ ಜೊತೆಗೆ ಆಧ್ಯಾತ್ಮಿಕ ಸಂಸ್ಕಾರವನ್ನು ನೀಡುತ್ತದೆ. ಹಿಂದೆ ಬುದ್ಧಿ ಜೀವಿಗಳು ಈ ದೇಶದ ಸಂಪತ್ತು ಎನ್ನಲಾಗುತ್ತಿತ್ತು. ಈಗ ಇವರಿಂದಲೇ ಆಪತ್ತು ಎಂಬ ಸ್ಥಿತಿಯಾಗಿದೆ ಎಂದರು.
ಚಲನಚಿತ್ರ ನಟ ವಿನೋದ್ ಆಳ್ವ, ಮಂಗಳೂರು ಜೈನ್ ಟ್ರಾವೆಲ್ಸ್‌ನ ಮಾಲಕ ರತ್ನಾಕರ ಜೈನ್, ಜನಜಾಗೃತಿ ಸ್ಥಾಪಕ ಅಧ್ಯಕ್ಷ ವಸಂತ ಸಾಲ್ಯಾನ್ ಮಾತನಾಡಿ ದೇವಸ್ಥಾನದ ಪ್ರಗತಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅನಿಲ್‌ಕುಮಾರ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ, ಕೋಶಾಧಿಕಾರಿ ಸಂತೋಷ್ ಹೆಗ್ಡೆ ಉಪಸ್ಥಿತರಿದ್ದರು
‘ಸಮಾಜ ಸೇವಾ ಭೂಷಣ ಪ್ರಶಸ್ತಿ’ : ತೆಂಕಕಾರಂದೂರು ಸೇರಿದಂತೆ ಎಂಟು ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ನೇತೃತ್ವ ವಹಿಸಿ, ಯುವಕರನ್ನು ಸಂಘಟಿಸಿ, ಯಶಸ್ವಿಯಾಗಿ ಕಾರ್ಯಕ್ರಮವನ್ನು ರೂಪಿಸಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್. ನಡಕ್ಕರ ಇವರನ್ನು ಊರವರು ಹಾಗೂ ದೇವಸ್ಥಾನದ ವತಿಯಿಂದ ‘ಸಮಾಜ ಸೇವಾ ಭೂಷಣ’ ಪ್ರಶಸ್ತಿ ನೀಡಿ ಡಾ. ಹೆಗ್ಗಡೆಯವರು ಗೌರವಿಸಿದರು. ಈ ಸಂದರ್ಭದಲ್ಲಿ ಅನ್ನದಾನಿಗಳಾದ ಕೃಷ್ಣ ಸಂಪಿಗೆತ್ತಾಯ, ಶ್ರೀನಿವಾಸ ರೈ ಕರಂದೂರು, ವಸಂತ ಸಾಲ್ಯಾನ್ ಕಾಪಿನಡ್ಕ, ಹರಿನಾರಾಯಣ ಸಂಪಿಗೆತ್ತಾಯ, ಕಾಶಿಶೆಟ್ಟಿ ಮತ್ತು ಮಕ್ಕಳು ನವಶಕ್ತಿ, ಆರ್.ಎಸ್. ಲಕ್ಷ್ಮೀ, ಬಾಲಕೃಷ್ಣ ಸಿ. ನಾಯಕ್, ವನಿತಾ ವಾಮನ ನಾಯಕ್, ಸಂಪತ್ ಕುಮಾರ್ ಜೈನ್ ಪಡಂಗಡಿ, ಬಾಲಕೃಷ್ಣ ಶೆಟ್ಟಿ ಕಾರ್ಯಾಣ ಇವರನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ ವಂದಿಸಿದರು. ಪೆರೋಡಿತ್ತಾಯಕಟ್ಟೆ ಶಾಲಾ ಶಿಕ್ಷಕ ದೇವುದಾಸ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.