ಯೂತ್ ನೈಟ್ : ಸುವರ್ಣ ಸಂಭ್ರಮ ವರ್ಷದ ಉದ್ಘಾಟನೆ

1

ic

icc

iccc

iccccc

ಮಡಂತ್ಯಾರ್ : ಭಾರತೀಯ ಕಥೋಲಿಕ್ ಯುವ ಸಂಚಾಲನ, ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರ್ ಇದರ ಸುವರ್ಣ ಸಂಭ್ರಮ ವರ್ಷದ ಉದ್ಘಾಟನೆ ಯೂತ್ ನೈಟ್ 2017 ಸೆಕ್ರೆಡ್ ಹಾರ್ಟ್ ಚರ್ಚ್ ಮೈದಾನದಲ್ಲಿ ಫೆ.5ರಂದು ಸಂಜೆ 6 ಘಂಟೆಗೆ ಬಹಳ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ವಂ| ಫಾ| ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ ನಿರ್ದೇಶಕರಾದ ವಂ| ಫಾ| ರೊನಾಲ್ಡ್ ಡಿಸೋಜಾರವರು ಸುವರ್ಣ ವರ್ಷದ ಲೋಗೋ ಉದ್ಘಾಟಿಸಿದರು. ಬೆಳ್ತಂಗಡಿ ವಲಯ ಐಸಿವೈಎಂ ನಿರ್ದೇಶಕರಾದ ವಂ| ಫಾ| ಅರುಣ್ ಲೋಬೋರವರು ತಮ್ಮ ಭಾಷಣದಲ್ಲಿ ಮಡಂತ್ಯಾರ್ ಘಟಕದ ಯುವಕರ ಸಾಧನೆಯನ್ನು ಶ್ಲಾಘಿಸಿದರು.
ಸುವರ್ಣ ಸಂಭ್ರಮ ವರ್ಷಕ್ಕೆ ರಚಿಸಿದ ಧ್ಯೇಯ ಗೀತೆ ಜನರ ಮನಸೂರೆಗೊಂಡಿತು ಬೃಹತ್ ಎಲ್.ಇ.ಡಿ ಉಳ್ಳ ವಿಜ್ರಂಬಿತ ವೇದಿಕೆ, ಶಿಲ್ಪ ಕುಟಿನ್ಹಾ ಹಾಗೂ ತಂಡದಿಂದ ಓ.ಲಾ.ರೇ ಸಂಗೀತ ರಸಮಂಜರಿ ಕಾರ‍್ಯಕ್ರಮ, ಶಬರಿ ಅವರಿಂದ ಅದ್ಭುತವಾದ ಚಿತ್ರಕಲೆ, ಮಡಂತ್ಯಾರ್‌ನ ಪ್ರತಿಭೆ, ಟೈಸನ್ ಟಿಕುನ್ಹಾರವರ ರಚಿಸಿದ ಯೇ ಮೊನಾ ಕೊಂಕಣಿ ಆಲ್ಬಂ ಬಿಡುಗಡೆ, ಟನ್ರೆ ಕಲಾಕರ್ ಅಭಿನಯದ ಕೊಣಾಯ್ಕಿ ಸಾಂಗಿನಾಕಾ ಕೊಂಕಣಿ ನಾಟಕ ಸುಮಾರು 2000 ಕ್ಕೂ ಮಿಕ್ಕಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ರೋಹನ್ ಲೂವಿಸ್, ಶೈನಿ ಡಿಸೋಜಾ ಹಾಗೂ ರೊನಾಲ್ಡ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.