ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಊಂತನಾಜೆ: ಸಮುದಾಯ ಭವನ ಕಟ್ಟಡದ ವಿಜ್ಞಾಪನಾಪತ್ರ ಬಿಡುಗಡೆ

pathraಮೊಗ್ರು: ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಊಂತನಾಜೆ ಇಲ್ಲಿ ನಿರ್ಮಾಣ ಮಾಡಲುದ್ದೇಶಿಸಿರುವ ಸಮುದಾಯ ಭವನ ಕಟ್ಟಡದ ವಿಜ್ಞಾಪನಾಪತ್ರ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ರಂಜನ್ ಜಿ ಗೌಡ ಸದ್ರಿ ಪತ್ರವನ್ನು ಬಿಡುಗಡೆ ನಿರ್ವಹಿಸಿದರು.
ಬಳಿಕ ಮಾತನಾಡಿದ ಅವರು, ರಾಜಕೀಯ ಭೇದವಿಲ್ಲದೆ ಎಲ್ಲರೂ ಸೇರಿ ಸಭಾಂಗಣ ನಿರ್ಮಿಸಲು ಪ್ರಯತ್ನ ಮಾಡೋಣ. ಶ್ರದ್ಧಾ ಭಕ್ತಿಯಿಂದ ಈ ರೀತಿ ಆರಾಧನಾ ಕೇಂದ್ರಗಳಿಗೆ ಹೆಚ್ಚಿನ ಸಹಕಾರ ಮಾಡುವಲ್ಲಿ ಶ್ರಮಿಸಬೇಕಾಗಿದೆ. ಮೊಗ್ರು ಭಾಗದಲ್ಲಿ ಸಾರ್ವಜನಿಕ ಸಭೆ ನಡೆಸಲು ವ್ಯವಸ್ಥೆ ಇಲ್ಲದಿರುವುದರಿಂದ ಈ ಸಭಾಂಗಣ ಇಲ್ಲಿಯ ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ತಾಲ್ಲೂಕು ಬಿಜೆಪಿ ಯುವನಾಯಕ ಸಂಪತ್ ಬಿ ಸುವರ್ಣ, ಧ. ಗ್ರಾ. ಯೋಜನೆಯ ಗಂಗಾಧರ್ ಶುಭಹಾರೈಸಿದರು. ಮುಗೇರಡ್ಕ ಕ್ಷೇತ್ರದ ಮೋಕ್ತೇಸರ ಮನೋಹರ್ ಗೌಡ, ಕೆಂಚಪ್ಪ ಗೌಡ, ಧರ್ಣಪ್ಪ ಗೌಡ ಅತಿಥಿಗಳಾಗಿದ್ದರು. ಬಂದಾರು ಗ್ರಾ. ಪಂ. ಅಧ್ಯಕ್ಷ ಉದಯ ಕುಮಾರ್ ಬಿ. ಕೆ, ಪ್ರಭಾಕರ ಗೌಡ ಕುತ್ಯೋಡಿ, ತಾ. ಪಂ ಸದಸ್ಯ ಪುಂಡಲೀಕ ಆಚಾರ್, ಮೇದಪ್ಪ ಗೌಡ, ಉಮೇಶ್ ಗೌಡ ಮತ್ತಿತರರು ಹಾಜರಿದ್ದರು. ಸಮಿತಿ ಕಾರ್ಯದರ್ಶಿ ಶಿವಣ್ಣ ಗೌಡ ಪ್ರಸಾವನೆಗೈದರು. ಯೋಜನೆಯ ಮೇಲ್ವಿಚಾರಕ ಆದಿತ್ಯ ನಿರೂಪಿಸಿದರು. ಊಂತನಾಜೆ ಮೊಗ್ರು ಸತ್ಯಶಂಕರ್ ಭಟ್ ಅಧ್ಯಕ್ಷತೆ ವಹಿಸಿದ್ದು, ಸಮಿತಿ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.