ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಜಾತ್ರೆ, ಅಶಾಂತಿ ನಾಗರಿಕ ಭಾರತದ ತುತ್ತತುದಿಯಲ್ಲಿತ್ತು : ಅಸ್ರಣ್ಣ

barkajeನಿಟ್ಟಡೆ : ದೇವರನ್ನು ಆರಾಧಿಸುವುದರಿಂದ ಸಮಸ್ಯೆಗಳು ಬಗೆ ಹರಿಯುತ್ತದೆ. ಎಷ್ಟೋ ತೊಂದರೆಗಳು ಬಂದರೂ ದೇವರನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಸಮಸ್ಯೆಗಳು, ತೊಂದರೆಗಳು ಮಾಯವಾಗಿ ಬಿಡುತ್ತದೆ.
ಅಶಾಂತಿ ನಾಗರಿಕ ಭಾರತದ ತುತ್ತತುದಿಯಲ್ಲಿತ್ತು. ಭಾರತ ದೇಶದಲ್ಲಿ ಎಲ್ಲಾ ಧರ್ಮಗಳು ಏಕತಾಭಾವದಿಂದ ಜೀವನ ನಡೆಸುವುದರಿಂದ ಅಶಾಂತಿ ದೂರ ಹೋಗಿ ಭಾರತ ಒಂದು ಶಾಂತಿಯ ದೇಶವಾಗಿದೆ ಎಂದು ಕಟೀಲು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣರವರು ಧಾರ್ಮಿಕ ಪ್ರವಚನ ನೀಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಬರ್ಕಜೆಯಲ್ಲಿ ಫೆ.5ರಂದು ನಡೆದ ವಾರ್ಷಿಕ ಜಾತ್ರೆ ಮಹೋತ್ಸವ ಹಾಗೂ ಮಹಾ ಚಂಡಿಕಾಯಾಗ ನೆರವೇರಿಸಿದರು.
ಇಡೀ ಜಗತ್ತು ನಡೆಯುವುದು ವಿಶ್ವಾಸ ಮತ್ತು ನಂಬಿಕೆ ಮೇಲೆ, ಋಷಿ ಮುನಿಗಳು ಸಂಶೋಧನೆ ಮಾಡಿ ಪರಿಶುದ್ಧವಾದ ಮನಸ್ಸಿನಿಂದ ದೇವರನ್ನು ಆರಾಧಿಸಲು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಿಂದ ಮಾನವನಿಗೆ ಧರ್ಮಗಳ ಜ್ಞಾನೋದಯವಾಗಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ ಸದಸ್ಯರಾದ ಶೇಖರ್ ಕುಕ್ಕೇಡಿ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ತೇಜಸ್ವಿ, ಕುಕ್ಕೇಡಿ ಗ್ರಾ.ಪಂ ಉಪಾಧ್ಯಕ್ಷ ಅಶೋಕ್ ಪಾನೂರು, ಶ್ರೀಮತಿ ಗುಲಾಬಿ ಆದಪ್ಪ ಪೂಜಾರಿ, ವಿಜಯ್ ನಾಸಿಕ್, ವಿಶ್ವನಾಥ ನಿಟ್ಟಡೆ, ಈಶ್ವರ ಲಾಡಿ, ನಾರಾಯಣ ಪೂಜಾರಿ, ಶ್ರೀಷ ಭಟ್, ಗೋಪಾಲ ಪೂಜಾರಿ, ಶಿವಪ್ರಸಾದ್ ಲಾಡಿ, ಚಂದ್ರ ಪೂಜಾರಿ, ಧರ್ಮದರ್ಶಿ ರಮೇಶ್ ಬರ್ಕಜೆ ಉಪಸ್ಥಿತರಿದ್ದರು. ಸುರೇಶ್ ಕುಮಾರ್ ಅತ್ತೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.