ಶ್ರೀ ಕ್ಷೇತ್ರ ಓಡೀಲು ಜಾತ್ರಾ ಮಹೋತ್ಸವ

odilu  ಓಡೀಲು : ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಡಂಗಡಿ ಜಾತ್ರಾ ಮಹೋತ್ಸವವು ಫೆ.2 ಮತ್ತು ಫೆ.3ರಂದು ನಡೆಯಿತು.
ಫೆ.2ರಂದು ವೈದಿಕ ಕಾರ್ಯಕ್ರಮ ನಡೆಯಿತು ಹಾಗೂ ಹಸಿರು ಹೊರಕಾಣಿಕೆ ಉದ್ಘಾಟನೆಯನ್ನು ಬದ್ಯಾರ್ ಹಂಸಗಿರಿ ಶಿವದರ್ಶನ್ ಆಗ್ರೋ ಇಂಡಸ್ಟ್ರೀಸ್ ಪಾಲುದಾರ ಬಾಲಕೃಷ್ಣ ಸಿ ನಾಯಕ್ ನೆರವೇರಿಸಿದರು. ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಮಾಲಾಡಿ ಗ್ರಾ.ಪಂ ಅಧ್ಯಕ್ಷ ಎಸ್.ಬೇಬಿ ಸುವರ್ಣ, ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಉಪಸ್ಥಿತರಿದ್ದರು.
ಫೆ.3ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೆ.ಗಣೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಭಾಷಣವನ್ನು ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಶ್ರೀಮತಿ ಕೆ.ಆರ್ ಸುವರ್ಣ ಕುಮಾರಿ ಮೋಹನ ಕಲ್ಲೂರಾಯ ನಡೆಸಿದರು. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭೀವೃದ್ಧಿ ನಿಗಮ ಅಧ್ಯಕ್ಷ ಕೆ.ವಸಂತ ಬಂಗೇರ, ಕೊಯ್ಯೂರು ಶ್ರೀ ಪಂಚದುರ್ಗಾ ದೇವಸ್ಥಾನ ಪ್ರಧಾನ ಅರ್ಚಕ ಅಶೋಕ್ ಭಾಗಿನ್ನಾಯ, ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಬೆಳ್ತಂಗಡಿ ಎಪಿಎಂಸಿ ನಿರ್ದೇಶಕ ಅಶೋಕ್ ಗೋವಿಯಸ್, ಪಿಲಿಚಾಮುಂಡಿಕಲ್ಲು ದೊಂಪದಬಲಿ ಉತ್ಸವ ಸಮಿತಿ ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಪಾಡ್ಯಾರು, ಅರಮಲೆಬೆಟ್ಟು ಶ್ರೀ ಕೊಡಮಣಿತ್ತಾಯ ದೈವಸ್ಥಾನ ಆಡಳಿತದಾರರಾದ ಸುಕೇಶ್ ಕುಮಾರ್, ಆನಂದ ಶೆಟ್ಟಿ ವಾತ್ಸಲ್ಯ ಶಕ್ತಿನಗರ, ಎಸ್.ಗಂಗಾಧರ ಶೆಟ್ಟಿ ಕೆವುಡೇಲು, ಗೋಪಾಲ ಶೆಟ್ಟಿ ಕೊರ‍್ಯಾರು, ಮಾಲಾಡಿ ಗ್ರಾ.ಪಂ ಅಧ್ಯಕ್ಷ ಎಸ್.ಬೇಬಿ ಸುವರ್ಣ, ಎಮ್.ರಾಮಚಂದ್ರ ಪ್ರಜ್ವಲ್, ಪಡಂಗಡಿ, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಶ್ರೀಮತಿ ವಿದ್ಯಾ ಎನ್.ಶೆಣೈ, ಕಿನ್ನೊಗೋಳಿ, ಶ್ರೀಮತಿ ಸುಲೋಚನ ಆರ್.ಬಂಗೇರ ನ್ಯಾಯದಕಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರಾತ್ರಿ ಜಾತ್ರಾ ಮಹೋತ್ಸವ ಮತ್ತು ಚಿಲ್ಲರೆ ಕಾಸ್‌ದಾಯೆ ಸಾಂಸಾರಿಕ ಹಾಸ್ಯಮಯ ತುಳು ನಾಟಕ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.