ಜನಧನ್ : 5,500 ಕೋಟಿ ವಾಪಸ್

 ಡಿ.7ರಿಂದ ಜ.11ರ ನಡುವೆ ಜನಧನ ಖಾತೆಗಳಿಂದ 5,582 ಕೋಟಿ ಹಣವನ್ನು ತೆಗೆಯಲಾಗಿದೆ ಎಂದು ವರದಿಯಾಗಿದೆ. ದೇಶದಲ್ಲಿ ಒಟ್ಟು 26.68 ಕೋಟಿ ಜನಧನ ಖಾತೆಗಳಿವೆ. ನವೆಂಬರ್ 8ರಂದು 500 ಮತ್ತು 1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದಾಗುವ ಮುನ್ನ ಈ ಖಾತೆಗಳಲ್ಲಿ 45,636 ಕೋಟಿಯಷ್ಟು ಠೇವಣಿ ಇತ್ತು. ನವೆಂಬರ್ 8ರ ನಂತರ ಠೇವಣಿಯ ಮೊತ್ತದಲ್ಲಿ ಭಾರಿ ಏರಿಕೆಯಾಗಿ, ಒಟ್ಟು 74,610 ಕೋಟಿ ಹಣ ಜಮೆಯಾಗಿತ್ತು. ಈ ಖಾತೆಗಳಿಂದ ತಿಂಗಳಿಗೆ ಗರಿಷ್ಠ 10 ಸಾವಿರವನ್ನಷ್ಟೇ ತೆಗೆಯಬಹುದು ಎಂದು ಸರ್ಕಾರ ಮಿತಿ ಹೇರಿತು. ಇದರ ನಡುವೆಯೂ ಜನಧನ ಖಾತೆಗಳಿಂದ 5,582 ಕೋಟಿ ಹಣವನ್ನು ತೆಗೆಯಲಾಗಿದೆ ಎಂದು ವರದಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.